ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಯಲ್ಲಿ ಲಾಬಿ,…!!!

Listen to this article

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಪರೇಷನ್ ಕಮಲ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಅನೈತಿಕವಾಗಿ ಸರ್ಕಾರ ರಚನೆ ಮಾಡಿ 2 ವರ್ಷ ಕಳೆದಿವೆ.

ಈ ಎರಡು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಪ್ರವಾಹ, ಕೊರೊನದಂತಹ ಬಿಕ್ಕಟ್ಟಿನ ಪರಿಸ್ಥಿತಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಯಿತು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ ಬಾಕಿ, ಪ್ರವಾಹ ಪರಿಹಾರ, ಲಾಕ್ ಡೌನ್ ಪರಿಹಾರ, ಆಕ್ಸಿಜನ್, ವೆಂಟಿಲೇಟರ್, ರೆಮಡಿಸಿವಿರ್ ಸೇರಿದಂತೆ ಇತರೆ ಔಷಧಿಯನ್ನು ರಾಜ್ಯಕ್ಕೆ ತರಿಸಲಿಲ್ಲ, ಕೇಂದ್ರ ಸರ್ಕಾರವನ್ನು ಕೇಳುವ ಕನಿಷ್ಠ ದೈರ್ಯವನ್ನು ತೋರಲಿಲ್ಲ.

ಪೆಟ್ರೋಲ್-ಡೀಸೆಲ್, ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಸರ್ಕಾರದ ವೈಫಲ್ಯಗಳಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ವಿಧವಾ ವೇತನ, ವೃದ್ಧಾಪ್ಯ ವೇತನ ಸಿಗದೇ ಪರದಾಡಿದ್ದಾರೆ, ಅನ್ನಭಾಗ್ಯದ ಅಕ್ಕಿ ಕಡಿತದಿಂದ ಪರಿತಪಿಸಿದ್ದಾರೆ.

ಈ ಎರಡು ವರ್ಷಗಳಲ್ಲಿ ಒಂದೇ ಒಂದು ಜನಪರ ಕಾರ್ಯಕ್ರಮವನ್ನು ರೂಪಿಸಲಿಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಯೋಜನೆಗಳನ್ನು ನಿಲ್ಲಿಸಲು ಮುಂದಾದರು.

ಕೊರೊನ ಹೆಣದ ಮೇಲೆ ಹಣ, VST tax, ಕಿಕ್ ಬ್ಯಾಕ್, ವರ್ಗಾವಣೆ ದಂಧೆ, ಕಮೀಷನ್ ದಂಧೆ, ಕುರ್ಚಿಗಾಗಿ ಕಿತ್ತಾಟ, ಖಾತೆಗಾಗಿ ಕ್ಯಾತೆ, ಆಂತರಿಕ ಬೇಗುದಿಯಲ್ಲಿ ಮುಳುಗಿ ಹೋದರು. ಇದರ ನಡುವೆ ಸಿಡಿ ಶೂರರ ಸಂಖ್ಯೆಯೂ ಹೆಚ್ಚಾಯಿತು.

ಇವೆಲ್ಲ ಕಾರಣಗಳಿಂದಾಗಿ ಸಾರ್ವಜನಿಕರ ನೈಜ ಸಮಸ್ಯೆಗಳು ತೆರೆ ಮರೆಗೆ ಸರಿದವು, ಜನರು ಈಗಲೂ ನರಕಯಾತನೆ ಅನುಭವಿಸುತ್ತಿದ್ದಾರೆ.

ಬಿಜೆಪಿ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿಯ ವೈಫಲ್ಯಗಳನ್ನು ಪ್ರಶ್ನಿಸಿ ರಾಜ್ಯದಂತ ಜನತೆ ಬಿಜೆಪಿ ಪಕ್ಷವನ್ನು ತೋಲಗಲಿ ಚಳುವಳಿ ಆರಂಭಿಸಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend