ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ ಶ್ರವಣ್” ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿಗೆ ಕೋವಿಡ್ -19 ನಿರ್ವಹಣೆಗಾಗಿ ಧೀಢೀರನೆ ಬೇಟಿ…!!!

Listen to this article

“ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ ಶ್ರವಣ್”
ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿಗೆ ಕೋವಿಡ್ -19 ನಿರ್ವಹಣೆಗಾಗಿ ಧೀಢೀರನೆ ಬೇಟಿ.
ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಆಸ್ಪತ್ರೆಯ ವಾರ್ಡುಗಳು,
ಡಯಾಲಿಸಸ್ ಘಟಕ,
ಆಕ್ಸಿಜನ್ ಘಟಕಗಳು,
ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆಯ ರೂಪಾಂತರಿ ಒಮಿಕ್ರಾನ್ ಇನ್ನೂ ಆರಂಭವಾಗಿಲ್ಲ. ಬುಧವಾರ ಬಳ್ಳಾರಿಯಲ್ಲಿ 16 ಕೇಸ್, ಒಂದು ವಾರಗಳ ಹಿಂದೆ ಸಂಡೂರು ತಾಲೂಕಿನ ಒಂದು ಸಂಸ್ಥೆಯಲ್ಲಿ 14 ಕೇಸ್ ಗಳು ಪತ್ತೆಯಾಗಿವೆ. ಆದರೆ ಇಲ್ಲಿಯವರೆಗೂ ಯಾವುದೇ ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಕೇಸ್ ಗಳು ಪತ್ತೆಯಾಗಿಲ್ಲ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಪ್ರತಿ ದಿನ 200 ರಿಂದ 300 ಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಹಗರಿಬೊಮ್ಮಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಭೆ ನಡೆಸಲಾಗಿದೆ.
ಆಕ್ಸಿಜನ್ ಸಿಲಿಂಡರ್ ಇರುವಷ್ಟು ಬೆಡ್ ಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ಗಳನ್ನು ಜಿಲ್ಲೆಯಲ್ಲಿ ಇನ್ನೂ ಎಲ್ಲಿಯೂ ತೆರೆದಿಲ್ಲ.
ಆದರೆ ಸ್ಥಳೀಯ ಉಪವಿಭಾಗಧಿಕಾರಿಗಳು ಹಾಗೂ
ತಹಶೀಲ್ದಾರ ಅವರಗಳು ಆಯಾ ತಾಲೂಕು ಕೇಂದ್ರಗಳಲ್ಲಿ ಜಾಗವನ್ನು ಆಯ್ಕೆ ಮಾಡಿದ್ದಾರೆ. ಅಲ್ಲಿ ಇನ್ನೂ ಏನೂ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಮಾಹಿತಿ ನೀಡಿದರು.
ಕೊರೊನಾ ನಿಯಂತ್ರಣ ಸಲುವಾಗಿ ತಜ್ಞ ವೈದ್ಯರನ್ನು ಸರ್ಕಾರ ನೇಮಕ ಮಾಡಿಕೊಂಡಿದೆ. ಅವರು ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ. ಹಾಗೂ ಜಲ್ಲಾಧಿಕಾಗಳ ಮುಖಾಂತರ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗುವುದು ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯ 80 ಆಕ್ಸಿಜನ್ ಬೆಡ್ಗಳಿವೆ. ಸ್ಥಳ, ಆಕ್ಸಿಜನ್ ಮತ್ತು ಅವಶ್ಯಕತೆ ಅಧಾರದಲ್ಲಿ ಇನ್ನೂ 30 ರಿಂದ 40 ಬೆಡ್ ಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು , ವೈದ್ಯರ ಕೊರತೆ ಇರುವ ಆಸ್ಪತ್ರೆಗಳಲ್ಲಿ ಎಂಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಜಿಲ್ಲಾ ಪಂಚಾಯ್ತಿವತಿಯಿಂದ ನೇಮಕ ಮಾಡಿಕೊಳ್ಳಬಹುದಾಗಿದೆ.
ವಿಕೆಂಡ್ ಕರ್ಫ್ಯೂಕಡ್ಡಾಯವಾಗಿ
ಎಲ್ಲರೂ ಪಾಲನೆ ಮಾಡಬೇಕು. ಏಕೆಂದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಸುತ್ತಾಡದಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಆಸ್ಪತ್ರೆಗಳಿಗೆ ತೆರಲು ಯಾವುದೇ ನಿರ್ಭಂಧವಿಲ್ಲ. ಶಾಲಾ, ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ನಿರ್ಭಂಧ ವಿಧಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಅಂತರ ಜಿಲ್ಲೆಗಳಿಗೆ ತೆರಳಲು ಯಾವುದೇ ತರಹದ ಪಾಸ್ ಕೊಡುವ ಅವಶ್ಯಕತೆ ಇರುವುದಿಲ್ಲ. ಮದುವೆ ಸಮಾರಂಭಗಳಿಗೆ ಮಾತ್ರ 100 ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ರಾಜ್ಯ ಮಟ್ಟದ ಎಲ್ಲ ನಿರ್ಭಂದಗಳು ಅನ್ವಯವಾಗುತ್ತಿವೆ, ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ಎಲ್.ನಂದೀಶ್, ಪುರಸಭೆ ಮುಖ್ಯಾಧಿಕಾರಿ ಯರಗುಡಿ.ಶಿವಕುಮಾರ, ತಾಲೂಕು ಆರೋಗ್ಯಾಧಿಕಾರಿ ಡಾ.ಹಾಲಸ್ವಾಮಿ,ಪ್ರಭಾರಿ ಮುಖ್ಯವೈದ್ಯಾಧಿಕಾರಿ,
ಡಾ” ಶಂಕರ್ ನಾಯ್ಕ,ಎನ್.
ವೈದ್ಯರುಗಳಾದ ಡಾ”ರಾಜೇಶ್,ಶಸ್ತ್ರಚಿಕಿಸ್ತಕ ರು,
ಡಾ”ದತ್ತಾತ್ರೇಯ ಪಿಸೆ ಮಕ್ಕಳ ತಜ್ಞರು,
ಡಾ”ವಿನಯ್ ಕುಮಾರ್,
ಹಾಗೂ ಆಸ್ಪತ್ರೆಯ ಕಛೇರಿ ಸಿಬ್ಬಂದಿ ವರ್ಗದವರು.
ಹಾಗೂ ತಾಲೂಕು ಮಟ್ಟದ ಅಧಿಕಾರಿಗಳುಉಪಸ್ಥಿತರಿದ್ದರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend