ಮೋದಿಯ ಅಹಂಕಾರಕ್ಕೆ ಪೆಟ್ಟು ಕೊಟ್ಟ ಪಂಜಾಬ್ ನಿರುದ್ಯೋಗ ಯುವಕರು ಹಾಗೂ ರೈತರರು!!!

Listen to this article

ಮೋದಿಯ ಅಹಂಕಾರಕ್ಕೆ ಪೆಟ್ಟು ಕೊಟ್ಟ ಪಂಜಾಬ್ ನಿರುದ್ಯೋಗ ಯುವಕರು ಹಾಗೂ ರೈತರರು!!!

ಪಂಜಾಬಿನ ರೈತರು ಇಂದು ಮೋದಿಗೆ ಬುದ್ದಿ ಕಲಿಸಿದ್ದಾರೆ. ಪಂಜಾಬಿನ ಫಿರೋಜಪುರದಲ್ಲಿ ಸುಮಾರು 70 ಸಾವಿರ ಮಂದಿಯನ್ನು ಸೇರಿಸಿ ಭಾರೀ ಸಭೆಯನ್ನು ನಡೆಸಲು ಬಿಜೆಪಿ ಸಿದ್ಧತೆ ಮಾಡಿತ್ತು. ಆದರೆ ರ‍್ಯಾಲಿಗೆ ಕೇವಲ 700 ಮಂದಿ ಮಾತ್ರ ಬರುವ ಮೂಲಕ ಮೋದಿಯ ಕಾರ್ಯಕ್ರಮ ಪ್ಲಾಪ್ ಆಗಿ ರದ್ದುಪಡಿಸಲಾಯಿತು.

ತಮ್ಮ ವಿಫಲತೆಯನ್ನು ಮುಚ್ಚಿಹಾಕಲು ಭದ್ರತಾ ವೈಫಲ್ಯದಿಂದ ಸಕಾಲದಲ್ಲಿ ತನಗೆ ರ‍್ಯಾಲಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಮೋದಿ ಹಾಗೂ ಬಿಜೆಪಿಯವರು ನೆಪ ಹೇಳುತ್ತಿದ್ದಾರೆ. ಆದರೆ ಮೋದಿಗೆ ಭದ್ರತೆ ನೀಡಬೇಕಾದವರು ಯಾರು?

ಮೋದಿಗೆ ಭದ್ರತೆಯ ಹೊಣೆ ಕೇಂದ್ರದ ವಿಶೇಷ ಭದ್ರತಾ ಪಡೆ ಹಾಗೂ ಗಡಿ ಭದ್ರತಾ ಪಡೆಯದ್ದು. ಯಾವುದೇ ಭದ್ರತಾ ವೈಫಲ್ಯ ಆದರೆ ಅದು ಕೆಂದ್ರಸರ್ಕಾರದ ವಿಫಲತೆಗೆ ಹಿಡಿದ ಕೈಗನ್ನಡಿ. 8000 ಕೋಟಿ ಬೆಲೆಯ ವಿಮಾನ, 12 ಕೋಟಿ ಬೆಲೆಯ ದುಬಾರಿ ಕಾರು, 10000 ಮಂದಿ ಪೋಲೀಸರ ಬೆಂಗಾವಲಿದ್ದರೂ, 110 ಕಿ.ಮೀ ದೂರದ ಪ್ರಯಾಣ ಹೆಲಿಕಾಪ್ಟರ್ ನಲ್ಲಿ ಮಾಡುವ ಬದಲಿಗೆ ಮಾರ್ಗ ಬದಲಿಸಿ ರಸ್ತೆಯ ಮಾರ್ಗ ಹಿಡಿದು ನಾಟಕ ಮಾಡಲು ಹೊರಟ ಮೋದಿಗೆ ರೈತರು ತಕ್ಕ ಪಾಠ ಕಲಿಸಿದ್ದಾರೆ. ಇದರ ಜೊತೆಗೆ ಟ್ವಿಟರ್ ನಲ್ಲಿ #GoBackModi ಎಂಬ ಟ್ರೆಂಡ್ ಮಾಡಿ 250k ಬೆಂಬಲ ಪಡೆದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ನಿರುದ್ಯೋಗಿಗಳು, ಯುವಕರು, ಮಹಿಳೆಯರು, ರೈತರು ಎಲ್ಲರೂ ಎದ್ದು ನಿಲ್ಲುವ ಕಾಲ ಬಂದಿದೆ ಜನವಿರೋಧಿ ಬಿಜೆಪಿ ಹಾಗೂ ಮೋದಿಗೆ ಬುದ್ದಿ ಕಲಿಸುವ ಕಾಲ ಸನ್ನಿಹಿತವಾಗಿದೆ.

‘ನಾನು ಏರ್‌ಪೋರ್ಟ್ ಗೆ ಜೀವ ಸಹಿತ ವಾಪಾಸು ಬಂದದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್ ಹೇಳಿ’ ಎಂದು ಪ್ರಧಾನಿ ಮೋದಿಯವರು ಪಂಜಾಬ್ ಪೋಲಿಸರಲ್ಲಿ ಹೇಳಿದ್ದಾರೆ.

ಆದರೆ…

ಉತ್ತರಪ್ರದೇಶ ರಾಜ್ಯದ #ಹತ್ರಾಸ್ ಎಂಬಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಯುವತಿಯ ಶವವನ್ನು ಆಕೆಯ ಹೆತ್ತವರಿಗೆ ನೀಡದೆ ರಾತ್ರಿ ಮೂರುವರೆ ಗಂಟೆಗೆ ಅಲ್ಲಿನ ಯೋಗಿ ಆದಿತ್ಯನಾಥನ ಸರ್ಕಾರ ಸುಟ್ಟುಹಾಕಿದ ಸಂಧರ್ಭದಲ್ಲಿ ಯುವತಿಯ ಹೆತ್ತವರಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ತೆರಳುವ ವೇಳೆ ಆದಿತ್ಯನಾಥನ ಪೋಲೀಸರು ಅವರಿಬ್ಬರ ಮೈಮೇಲೆ ಕೈ ಹಾಕಿ ತಡೆದು ಎಳೆದಾಡಿ ಬೀಳಿಸಿದ್ದರು. ಆದರೆ ಆಗ ರಾಹುಲ್ ಗಾಂಧಿಯವರೆ ಇರಲಿ, ಪ್ರಿಯಾಂಕ್ ಗಾಂಧಿಯವರೆ ಇರಲಿ ಅಲ್ಲಿನ ಪೋಲೀಸರಿಗೆ ‘ನಮ್ಮನ್ನು ಜೀವ ಸಹಿತ ವಾಪಾಸು ಕಳುಹಿಸಿದ್ದಕ್ಕಾಗಿ ನಿಮ್ಮ ಪ್ರಧಾನಿ ಮೋದಿಯವರಿಗೆ ಮತ್ತು ನಿಮ್ಮ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಥ್ಯಾಂಕ್ಸ್ ಹೇಳಿ’ ಎಂದು ಹೇಳಿ ಅರ್ಧ ದಾರಿಯಿಂದ ವಿಮಾನ ನಿಲ್ದಾಣಕ್ಕೆ ವಾಪಾಸು ಓಡಿಹೋಗದೆ. ಆ ನಂತರವೂ ಅವರು ಹತ್ರಾಸ್ ಸಂತ್ರಸ್ಥೆಯ ಮನೆಗೆ ತೆರಳಿ, ಅಲ್ಲಿ ನೆಲದ ಮೇಲೆ ಕೂತು ಆಕೆಯ ಹೆತ್ತವರನ್ನು ಬಿಗಿದಪ್ಪಿಕೊಂಡು ‘ನಾವಿದ್ದೇವೆ, ಭಯಪಡದಿರಿ’ ಎಂದು ಧೈರ್ಯ ತುಂಬಿದ್ದರು….

 

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend