ಜಾತ್ರೆ ರದ್ದುಗೊಳಿಸಿ ಕದ್ದು ಮುಚ್ಚಿ ಟೆಂಗಿನಕಾಯಿ ಟೆಂಡರ್ ಕರೆದಿದ್ದ ಯಾಕೆ…!!!

Listen to this article

ಜಾತ್ರೆ ರದ್ದುಗೊಳಿಸಿ ಕದ್ದು ಮುಚ್ಚಿ ಟೆಂಗಿನಕಾಯಿ ಟೆಂಡರ್ ಕರೆದಿದ್ದ ಯಾಕೆ.

ಸಿಂಧನೂರು ಜ.7 ಕೊರೊನಾ ಹಿನ್ನೆಲೆಯಲ್ಲಿ ಅಂಬಾ ಮಠ ಜಾತ್ರೆ ರದ್ದುಪಡಿಸಲಾಗಿದೆಂದು ಶಾಸಕರಾದ ವೆಂಕಟರಾವ್ ನಾಡಗೌಡ ಹಾಗೂ ತಹಶಿಲ್ದಾರ ಮಂಜುನಾಥ ಬೋಗಾವತಿ ಪ್ರಕಟಣೆ ಹೊರಡಿಸಿ ಪತ್ರಿಕೆ ಹೇಳಿಕೆ ನೀಡಿದ್ದು ಆದರೆ ಇಂದು ಜಾತ್ರೆ ರದ್ದಾದರೂ ಸಹ ಅಂಬಾಮಠ ದಲ್ಲಿ ಕಾಯಿ ಟೆಂಡರ್ ದಾರರ ಸಭೆಯನ್ನು ತಹಶಿಲ್ದಾರ ಅಧ್ಯಕ್ಷತೆಯಲ್ಲಿ ತಹಶಿಲ್ದಾರ ಕಛೇರಿಯಲ್ಲಿ ಕರೆದಿದ್ದು ಸಾರ್ವಜನಿಕರಿಗೆ ಅನುಮಾನ ಬರುವಂತಾಗಿದೆ. ಇಂದು ತಹಶಿಲ್ದಾರ ಕಛೇರಿಯಲ್ಲಿ ಅಂಬಾ ಮಠ ದೇವಸ್ಥಾನದಲ್ಲಿ ಕಾಯಿ ಟೆಂಡರ್ ಪ್ರಕ್ರಿಯೆ ಕರೆದು ಸಭೆಯಲ್ಲಿ ವ್ಯಾಪಕ ಪ್ರಚಾರ ಇಲ್ಲದ ಕಾರಣ ಇಬ್ಬರೇ ಟೆಂಡರ್ ದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಬಾಗವಹಿಸಿದ್ದು ಕಂಡು ಬಂತು .ಅಂಬಾ ಮಠ ಜಾತ್ರೆ ರದ್ದಾಗಿದ್ದು ಕಾಯಿ ಟೆಂಡರ್ ಪ್ರಕ್ರಿಯೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ವ್ಯಾಪಕ ಪ್ರಚಾರ ಮಾಡಲಾರದೆ ಇಂದು ತಹಶಿಲ್ ಕಛೇರಿಯಲ್ಲಿ ಕಾಯಿ ಟೆಂಡರ್ ದಾರರ ಪ್ರಕ್ರಿಯೆ ಸಭೆ ಮಾಡಿದ್ದು ನೋಡಿದರೆ ಅಂಬಾಮಠ ದೇವಸ್ಥಾನದ ಸಮಿತಿ ಅದ್ಯಕ್ಷ ರಾಜಶೇಖರವರ ವಯಕ್ತಿಕ ಲಾಭದ ಹಿತದೃಷ್ಟಿ ಅಡಗಿದೆ ಎಂಬ ಅನುಮಾನ ಕಂಡುಬಂದಿದೆ.
ತಹಶಿಲ್ ಕಛೇರಿಯಲ್ಲಿ ಕಾಯಿ ಟೆಂಡರ್ ದಾರರ ಸಭೆ ಕರೆದ ಬಗ್ಗೆ ಮಾಹಿತಿ ಪಡೆದು ಪತ್ರಿಕೆ ಮಾಧ್ಯಮದವರು ಸಭೆಯ ಬಗ್ಗೆ ಮಾಹಿತಿ ನೀಡದೇ ಸಭೆಯಿಂದ ಪತ್ರಕರ್ತರನ್ನು ದೂರವಿಟ್ಟು ಗೌಪ್ಯಸಭೆ ಮಾಡಿ ಇಬ್ಬರೇ ಟೆಂಡರ್ ದಾರರುಭಾಗವಹಿಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಎಲ್ಲಾ ಪತ್ರಿಕೆಗಳಿಗೆ ಮಾಹಿತಿ ನೀಡಲಾಗಿದೆಂದು ಕಾರ್ಯದರ್ಶಿ ಹನುಮೇಶ ತಿಳಸಿದ್ದು ನಮಗೆ ಮಾಹಿತಿ ನೀಡಿಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅನುಮಾನ ಗೊಂಡ ತಹಶಿಲ್ದಾರ ಮಂಜುನಾಥ ಬೋಗಾವತಿ ಜಿಲ್ಲಾ ವಾರ್ತಾ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ ಸರಿಯಾಗಿ ಉತ್ತರಿಸದೆ ತಡವರಿಸಿದ್ದು ಕಂಡುಬಂತು . ಕಾಯಿ ಟೆಂಡರ್ ಪ್ರಕ್ರಿಯೆ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಮಾಡಲು ದೇವಸ್ಥಾನದ ಸಮಿತಿಯಿಂದ ವಾರ್ತಾ ಇಲಾಖೆಯಿಂದ ಪ್ರಕಟಿಸುವಂತೆ ಆದೇಶ ನೀಡಿದ್ದು ಆದರೆ ವಾರ್ತಾ ಅಧಿಕಾರಿಗಳು ಎಲ್ಲಾ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದೆನೆ ಆದರೆ ಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ನನಗೆ ಗೊತ್ತಿಲ್ಲ ಎಂದು ಪತ್ರಕರ್ತರಿಗೆ ಬೇಜವಬ್ದಾರಿ ಉತ್ತರವನ್ನು ವಾರ್ತಾ ಇಲಾಖೆಗೆ ನೀಡಿದರು. ಅಂಬಾಮಠ ದೇವಸ್ಥಾನದ ಅದ್ಯಕ್ಷ ರಾಜಶೇಖರ ಇಬ್ಬರು ಟೆಂಡರ್ ದಾರರನ್ನು ಕರೆದು ಅವರಿಗೆ ಕಾಯಿ ಟೆಂಡರ್ ಕೊಡುವ ದುರುದ್ದೇಶದಿಂದ ಹಾಗೂ ತನಗೆ ಲಾಭ ಮಾಡಿಕೊಳ್ಳುವ ಸ್ವಾರ್ಥ ಕಂಡುಬರುವುದು ಅಲ್ಲದೆ ಸರ್ಕಾರಕ್ಕೆ ಆದಾಯ ಕಡಿಮೆ ಬರುತ್ತದೆ ವ್ಯಾಪಕ ಪ್ರಚಾರ ಮಾಡಿ ಟೆಂಡರ್ ಕರೆದರೆ ಹೆಚ್ಚು ಹೆಚ್ಚು ಟೆಂಡರ್ ದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಬಾಗವಹಿಸಿದರೆ ಹೆಚ್ಚಿನ ಆದಾಯ ದೇವಸ್ಥಾನದ ಸಮಿತಿಗೆ ಬರುತ್ತದೆಂಬ ಕನಿಷ್ಠ ಜ್ಞಾನ ದೇವಸ್ಥಾನದ ಅದ್ಯಕ್ಷರಾದ ರಾಜಶೇಖರ ಹಿರೇಮಠ ಅವರಿಗೆ ಇಲ್ಲದಂತೆ ಕಾಣುತ್ತದೆ.
ಈ ಕುರಿತು ತಹಶಿಲ್ದಾರರನ್ನು ಪತ್ರಕರ್ತರು ಪ್ರಶ್ನಿಸಿದಾಗ ಅಂಬಾ ಮಠ ಜಾತ್ರೆ ರದ್ದು ಮಾಡಿದ್ದು ಜಾತ್ರೆಯ ನಂತರ ಒಂದು ತಿಂಗಳವರೆಗೆ ಅಂಬಾ ಮಠಕ್ಕೆ ಬರುವ ಭಕ್ತರ ಕಾಯಿ ಟೆಂಡರ್ ಪ್ರಕ್ರಿಯೆಯಿಂದ ಕರೆದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಟೆಂಡರ್ ದಾರರು ಸಭೆಗೆ ಬಾರದ ಕಾರಣ ಇಂದಿನ ಸಭೆಯನ್ನು ರದ್ದುಗೊಳಿಸಲಾಗಿದೆ .ಐದು ಲಕ್ಷ ಡಿ.ಡಿ ತೆಗೆದುಕೊಂಡು ಅರ್ಹ ತೆಂಗಿನಕಾಯಿ ಮಾರಾಟಗಾರರು ಜ.12 ರಂದು ಟೆಂಡರ್ ಪ್ರಕ್ರಿಯೆ ಯಲ್ಲಿ ಬಾಗವಹಿಸಬಹುದೆಂದು ತಹಶಿಲ್ದಾರ ಮಂಜುನಾಥ ಬೋಗಾವತಿ ಕೋರಿದರು. ಅಂಬಾಮಠ ದೇವಸ್ಥಾನ ಸಮಿತಿ ಕಾರ್ಯದರ್ಶಿ ಹನುಮೇಶ, ಸದಸ್ಯರಾದ ಶಂಬುನಗೌಡ ,ಶ್ರೀಕಾಂತ್ ಕುಲಕರ್ಣಿ ಸಿಂಗಾಪುರ , ವೀರರಾಜು ,ವೆಂಕಟ ರಡ್ಡಿ ಸೇರಿದಂತೆ ಇತರರು ಸಭೆಯಲ್ಲಿ ಬಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend