ಕಾರುಣ್ಯ ಆಶ್ರಮವು ಸಿಂಧನೂರಿನ ಹೆಮ್ಮೆಯ ಸೇವಾ ಕ್ಷೇತ್ರವಾಗಿದೆ – ಉದಯ ಗೌಡ ಗಿಣಿವಾರ…!!!

Listen to this article

ಕಾರುಣ್ಯ ಆಶ್ರಮವು ಸಿಂಧನೂರಿನ ಹೆಮ್ಮೆಯ ಸೇವಾ ಕ್ಷೇತ್ರವಾಗಿದೆ – ಉದಯ ಗೌಡ ಗಿಣಿವಾರ..

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರುಣ್ಯ ಕರುಣಾಮಯಿಗಳಾದ ದಿ.ಮಹಾದೇವಮ್ಮ ಬಸನಗೌಡ ಮಾಲಿಪಾಟೀಲ್ ಪನ್ನಾಪುರ ತಾ/ಕಾರಟಗಿ ಇವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಅವರ ಮಗನಾದ ರುದ್ರಗೌಡ ಮಾಲಿಪಾಟೀಲ್ ಅವರು ಆಶ್ರಮಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ದೊಡ್ಡಮಟ್ಟದ ಅಡುಗೆ ಪಾತ್ರೆಗಳು ಹಾಗೂ ಇನ್ನಿತರ ಬಳಕೆಯ ಸಾಮಾನುಗಳನ್ನು ವಿತರಿಸಿ ವಿವಿಧ ಬಗೆಯ ಮಹಾಪ್ರಸಾದ ಮಾಡಿಸಿ ಮಹಾದೇವಮ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಧ್ಯಕ್ಷತೆ ವಹಿಸಿಕೊಂಡ ಒಳಬಳ್ಳಾರಿ ಮಾಜಿ ತಾಲೂಕು ಪಂಚಾಯತ ಸದಸ್ಯರಾದ ಉದಯ ಗೌಡ ಜನಿವಾರ ಅವರು ಮಾತನಾಡಿ ಇಂದು ನಮ್ಮ ಕಾರುಣ್ಯ ಆಶ್ರಮವು ಸಿಂಧನೂರಿನ ಹೆಮ್ಮೆಯ ಸೇವಾ ಕ್ಷೇತ್ರವಾಗಿದೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಜೀವನದ ಅಂತ್ಯ ಕಂಡು ಕೊಳ್ಳುವಂತಹ ಇಂತಹ ಅನಾಥ ಹಿರಿಯ ಜೀವಿಗಳಿಗೆ ಸ್ವಂತ ತಂದೆತಾಯಿಗಳ ಹಾಗೆ ಸೇವೆ ಮಾಡುತ್ತಿರುವ ಕಾರುಣ್ಯ ಆಶ್ರಮದ ಸಿಬ್ಬಂದಿಗಳ ಸೇವೆ ಶ್ಲಾಘನೀಯವಾದ ಇಂದು ನಮ್ಮ ಅತ್ತೆಯವರಾದ ಮಹಾದೇವಮ್ಮ ಅವರ ಅನಾಥಪರ ಮನಸ್ಸನ್ನು ನಮ್ಮ ಅಳಿಯಂದಿರಾದ ರುದ್ರಗೌಡ ಅವರು ಜೀವನದಲ್ಲಿ ಅಳವಡಿಸಿಕೊಂಡು ಇಂತಹ ಪುಣ್ಯರಾಧನೆ ಯನ್ನು ಕಾರುಣ್ಯ ಆಶ್ರಮದಂತಹ ನಿಜವಾದ ದೇವಾಲಯದಲ್ಲಿ ಆಚರಿಸುತ್ತಿರುವುದು ಆ ತಾಯಿ ಆತ್ಮಕ್ಕೆ ನಿರಂತರ ಶಾಂತಿಯನ್ನು ಕರುಣಿಸುತ್ತದೆ ಇಂದು ಸಲ್ಲಿಸಿರುವ ಸೇವೆ ತಾಯಂದಿರ ಘನತೆ ಗೌರವವನ್ನು ಹೆಚ್ಚಿಸುತ್ತದೆ ಎಂದು ಭಾವುಕರಾಗಿ ಮಾತನಾಡಿದರು. ಆನಂತರ ಎಲ್ಲಾ ಅನಾಥ ಜೀವಿಗಳಿಗೆ ತಮ್ಮ ಕೈಯ್ಯಾರೆ ಮಹಾಪ್ರಸಾದ ಬಡಿಸಿ ಎಲ್ಲರಿಗೂ ಹಣ್ಣುಹಂಪಲುಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ದಿವಂಗತರ ಮಗನಾದ ರುದ್ರಗೌಡ ಮಾಲಿಪಾಟೀಲ್. ಪಾರ್ವತಿ ರುದ್ರಗೌಡ ಮಾಲಿಪಾಟೀಲ್. ಗೌರಮ್ಮ ಅಮರೇಶ ಗೌಡ. ಮಂಜುಳಾ.ಯರಿಸ್ವಾಮಿ. ಕಾರುಣ್ಯ ಆಶ್ರಮದ ಅಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ. ವ್ಯವಸ್ಥಾಪಕರಾದ ಗೀತಾ ಕುಲಕರ್ಣಿ. ನಾಗೇಶ ಸ್ವಾಮಿ. ಮಹೇಶ ವಿಶ್ವಕರ್ಮ ಇವರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪಾರ್ವತಿ ರುದ್ರಗೌಡ ಅವರಿಗೆ ಕಾರುಣ್ಯ ಕುಟುಂಬದ ಹಿರಿಯ ಜೀವಿಗಳು ಆಶೀರ್ವದಿಸಿ ನೆನಪಿನ ಕಾಣಿಕೆಯನ್ನು ವಿತರಿಸಿದರು..

ವರದಿ, ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend