ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ-ಸಿಐಟಿಯು ಪ್ರತಿಭಟನೆ…!!!

Listen to this article

ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ-ಸಿಐಟಿಯು ಪ್ರತಿಭಟನೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ರಾಷ್ಟ್ರವ್ಯಾಪಿ ಬಂದ್ ಕರೆ ಹಿನ್ನಲೆಯಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿದ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು, ಕಾರ್ಮಿಕರ ಮುಖಂಡರು ಹಾಗೂ ಹೋರಾಥಗಾರರಾದ ಸಿ.ವಿರುಪಾಕ್ಷಪ್ಪ ಹಾಗೂ ಗುನ್ನಳ್ಳಿ ರಾಘವೇಂದ್ರ,ಬಿ.ಟಿ.ಗುದ್ದಿ ಚಂದ್ರು ನೇತೃತ್ವದಲ್ಲಿ ಮುಷ್ಕರ ನಡೆಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ, ಸಿಐಟಿಯು ಅಂಗ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಮಾಜಿ ದೇವದಾಸಿ ಮಹಿಳೆಯರು.ಕಟ್ಟಡ ಹಾಗೂ ಇತರೆ ಕಾರ್ಮಿಕರು.ಮಹಾತ್ಮ ಗಾಂಧೀ ಚಿತಾಭಸ್ಮ ಸ್ಮಾರಕದ ಮುಂಭಾಗ ಸಭೆ ಸೇರಿದರು,ಸರ್ಕರದ ಜನ ವಿರೋಧಿನೀತಿ ಖಂಡಿಸಿ ಘೋಷಣೆಗಳನ್ನು ಕೂಗಿದರು.ಪಟ್ಟಣದ ಪ್ರಮುಖ ರಸ್ತೆಮೂಲಕ ಪ್ರತಿಭಟನೆ ಮೆರವಣಿಗೆ ಸಾಗಿ,ಮದಕರಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಮುಖಂಡ ಸಿ.ವಿರುಪಾಕ್ಷಪ್ಪ ಮಾತನಾಡಿ,
ದೇಶದಲ್ಲಿರುವ ರೈತರು ವಿದ್ಯಾರ್ಥಿಗಳು ಯುವ ಜನತೆ ಅಧೋಗತಿಗೆ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ ಕೆಲವೊಂದು ಕಡೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಪರಿಸ್ಥಿತಿಯಿದೆ, ರೈತರು ಸಾಲಗಾರನಾಗಿ ವ್ಯವಸಾಯವನ್ನು ತ್ಯಜಿಸಿ ಕಂಗಾಲಾಗಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಣದ ವೆಚ್ಚವನು ಬರಿಸದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ದೇಶದಲ್ಲಿ ಉದ್ಯೋಗ ಸಿಗದೆ ಜೀವನ ಮಾಡಲು ಕಷ್ಟಕರ ವಾತಾವರಣವು ಸೃಷ್ಟಿಯಾಗಿದೆ. ರಾಜ್ಯ ಸರ್ಕಾರಗಳು ತಮ್ಮ ತಮ್ಮ ಅಗತ್ಯತೆಗಳನ್ನು ಈಡೇರಿಸಲು, ಶಾಸಕರು ಮತ್ತು ಸಂಸದರು ವೇತನ ಬತ್ತೆಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ.
ದೇಶದಲ್ಲಿ ಜನರು ಜೀವನ ಮಾಡಲು ಆಗುತ್ತಿಲಾ ದಿನಬಳಕೆ ವಸ್ತುಗಳು ಗಗನಕ್ಕೇರಿವೆ,ಎಣ್ಣೆ ಅಕ್ಕಿ-ಬೇಳೆ-ತರಕಾರಿ ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಇಂತಹ ಪರಿಸ್ಥಿತಿಯಲ್ಲಿ ಜೀವನ ಮಾಡುವುದಾದರೂ ಹೇಗೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಮಹಿಳೆಯರು, ಕಾರ್ಮಿಕರು ಹಾಗೂ ರೈತರು ಸಿಐಟಿಯು ಕಾರ್ಯಕರ್ತರು ಇದ್ದರು…

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend