ಮಳೆಗಾಲದ ಕೊರತೆಯಿಂದ ಹಸಿರು ಮೇವಿನ ಕೊರತೆಯನ್ನು ನಿಗಿಸಲು ರಸಮೇವನ್ನು ವಿತರಿಸಲಾಯಿತು…!!!

Listen to this article

ಇತ್ತೀಚಿನ ದಿನಗಳಲ್ಲಿ ಮಳೆಗಾಲದ ಕೊರತೆಯಿಂದ ಹಸಿರು ಮೇವಿನ ಕೊರತೆ ಎದುರಾಗಿದ್ದು ಹೈನುಗಾರಿಕೆಯಲ್ಲಿ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಇದರ ಪರ್ಯಾಯವಾಗಿ ರಸಮೇವು ಹೈನುರಾಸುಗಳಿಗೆ ಕೊಡುವುದರಿಂದ ಹಸಿರುಮೇವಿನ ಕೊರತೆ ನೀಗಿಸಿ ಹೈನುಗಾರಿಕೆಯಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಪೋಷಕಾಂಶಗಳನ್ನು ಒದಗಿಸಲು ಸಹಾಯವಾಗುವುದು ಎಂದು ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ನಿರ್ದೇಶಕರಾದ ಹೆಚ್ ಮರುಳ ಸಿದ್ದಪ್ಪನವರು ರೈತರಿಗೆ ರಸಮೇವನ್ನು ತರಿಸಿಕೊಟ್ಟು ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ರೈತರಿಗೆ ಮೇ ವಿನ ಕೊರತೆಯನ್ನು ನೀಗಿಸಲು ದಾವಣಗೆರೆಯಿಂದ ಸ್ಪೀಡ್ ಆರ್ಗೆನಿಕ್ ಮೂಲಕ ರಸಮೇವನ್ನು ರೈತರಿಗೆ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿ ಇನ್ನು ಮುಂದೆ ಕೊಟ್ಟೂರಿನಲ್ಲಿ ರೈತ ಉತ್ಪಾದಕರ ಕಂಪನಿಯನ್ನು ಮಾಡುತ್ತಿದ್ದು ಎಫ್ ಪಿ ಓ ಮೂಲಕ ಕೊಟ್ಟೂರಿನಿಂದಲೇ ಕೂಡ್ಲಿಗಿ ಕೊಟ್ಟೂರು ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಹಡಗಲಿ ಸುತ್ತಮುತ್ತಲಿರೋ ತಾಲೂಕುಗಳಿಗೆ ಕೊಟ್ಟೂರಿನಲ್ಲಿ ಶೈಲೇಜನ ಘಟಕವನ್ನು ಮಾಡಿ ರೈತರಿಗೆ ಒದಗಿಸುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು ಮತ್ತು ರಸಮೇವು ಕೊಡುವುದರಿಂದ ರಾಸುಗಳಲ್ಲಿ ಆರೋಗ್ಯ ಮತ್ತು ಹಾಲಿನ ಇಳುವರಿ ಕೂಡ ಹೆಚ್ಚಿಸಬಹುದು ಎಂದು ಹೇಳಿದರು ರೈತರಿಗೆ ನೆರವಾಗುವ ಈ ಒಂದು ಘಟಕವನ್ನು ಇನ್ನೂ ಕೆಲವೇ ದಿನಗಳಲ್ಲಿ ಎಫ್ ಪಿ ಓ ಮುಖಾಂತರ ರೈತರಿಗೆ ಮೆಕ್ಕೆಜೋಳದ ಬೀಜಗಳನ್ನು ವಿತರಿಸಿ ಅವರಿಂದ ಮೇವನ್ನು ಖರೀದಿ ಮಾಡಿ ರೈತರಿಗೂ ಕೂಡ ನೆರವಾಗಬಹುದು ಮತ್ತು ಅವರನ್ನು ಆರ್ಥಿಕವಾಗಿ ಸಬಲ ರಾನ್ನಾಗಿ ಮಾಡಬಹುದು ಎಂದರು ಇದೇ ಸಂದರ್ಭದಲ್ಲಿ ಎಪ್. ಪಿ. ಓ. ಕಾರ್ಯನಿರ್ವಾಕ ಅಧಿಕಾರಿಗಳಾದ ಕನ್ನಾ ಕಟ್ಟೆ ರಾಜಕುಮಾರ ಚಪ್ಪರದಹಳ್ಳಿ ಕೊಟ್ರೇಶ್ ಎಪ್. ಪಿ. ಓ. ಅಧ್ಯಕ್ಷರು ಮತ್ತು ಎಂ. ಬಸವರಾಜ್ ಪ್ರಧಾನ ಕಾರ್ಯದರ್ಶಿ ಹಾಲು ಉತ್ಪದಕರ ಹಾಗೂ ಕಾರ್ಯದರ್ಶಿ ಹಿತರಕ್ಷಣಾ ಸಮಿತಿ ಹಾಗೂ ಇನ್ನಿತರ ಕಾರ್ಯದರ್ಶಿ ಗಳು ಹಾಜರಿದ್ದರು…

ವರದಿ. ಬಸವರಾಜ್, ಎಂ, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend