ಬಸನಗೌಡ ಬಾದರ್ಲಿ ಮತ್ತು ಹಂಪನಗೌಡ ಬಾದರ್ಲಿ ಬೆಂಬಲಿಗರ ನಡುವಿನ ಬೈದಾಡಿಕೊಂಡ ಆಡಿಯೋ ವೈರಲ್…!!!

Listen to this article

ಬಸನಗೌಡ ಬಾದರ್ಲಿ ಮತ್ತು ಹಂಪನಗೌಡ ಬಾದರ್ಲಿ ಬೆಂಬಲಿಗರ ನಡುವಿನ ಬೈದಾಡಿಕೊಂಡ ಆಡಿಯೋ ವೈರಲ್.

ಸಿಂಧನೂರು : ಕೆಪಿಸಿಸಿ ಆದೇಶದ ಮೇರೆಗೆ ನಡೆಯುತ್ತಿರುವ ನೋಂದಣಿ ಅಭಿಯಾನದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಸನಗೌಡ ಬಾದರ್ಲಿ ಅವರ ಹೆಸರು ಹೇಳಿಕೊಂಡು ಕೆಲವು ಯುವಕರು ಬೋಗಸ್ ನೊಂದಣಿ ಆರಂಭಿಸಿದ್ದು, ಗುಂಜಳ್ಳಿ,ಗಾಂದೀನಗರ, ಗ್ರಾಮದಲ್ಲಿ ಹಂಪನಗೌಡ ಬಾದರ್ಲಿಯವರ ಬೆಂಬಲಿಗರ ಗಮನಕ್ಕೆ ಬಂದಾಗ ಅವರನ್ನು ಕಂಡುಹಿಡಿದು ತಡೆದು ನಿಮಗೆ ಯಾರು ಕಳಿಸಿದ್ದು ಹೀಗೆ ಬೋಗಸ್ ನೊಂದಣಿ ಮಾಡಲು ಹೇಳಿದ್ದು ಯಾರು ಎಂದು ವಿಚಾರಿಸಿದಾಗ ಬಸನಗೌಡ ಬಾದರ್ಲಿ ಅವರು ನಮ್ಮನ್ನು ಕಳಿಸಿದ್ದಾರೆ ಎಂದು ಹೇಳಿದಾಗ ಕೋಪಗೊಂಡ ಹಂಪನಗೌಡ ಬಾದರ್ಲಿ ಬೆಂಬಲಿಗರು ಆ ಯುವಕರ ಜೊತೆ ಕಾಂಗ್ರೆಸ್ ಪಕ್ಷದ ಮರ್ಯಾದೆ ತೆಗೆತ್ತಿದ್ದಿರಾ ಎಂದು ಮಾತಿನ ಚಕಮಕಿ ನಡೆದು ಜಗಳವಾಗಿದೆ. ಭಯಬೀತರಾದ ಆ ಯುವಕರು ಬಸನಗೌಡ ಬಾದರ್ಲಿ ಅವರಿಗೆ ಫೋನ್ ಕರೆ ಮಾಡಿ ಊರಿನ ಗ್ರಾಮಸ್ಥರು ನಮ್ಮ ಜೊತೆ ಜಗಳ ಮಾಡುತ್ತಿದ್ದಾರೆ ಎಂದು ಹೇಳಿದಾಗ ಯಾರು ಜಗಳವಾಡುತ್ತಿದ್ದರೆ ಅವರಿಗೆ ಫೋನ್ ಕೊಡು ಎಂದಾಗ ಅಲ್ಲಿನ ಊರಿನ ಗ್ರಾಮಸ್ಥರು ಫೋನ್ನಲ್ಲಿ ಮಾತನಾಡಲು ನಿರಾಕರಿಸುತ್ತಾರೆ.

 

ಭಯಬೀತರಾದ ಯುವಕರು ನನ್ನ ಜೊತೆ ಜಗಳ ಮಾಡುತ್ತಿದ್ದಾರೆ ಎಂದಾಗ ಜಗಳ ಹಾಡುವುದಾದರೆ ನನ್ನ ಜೊತೆ ಜಗಳವಾಡಿ ಗಾಂಧಿನಗರಕ್ಕೆ ಬರುತ್ತೇನೆ ಎನ್ನುತ್ತಿರುವಾಗ ಮುಖಂಡರೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾರೆ. ಯಾರಪ್ಪ ನೀನು ಎಂದು ಬಸನಗೌಡ ಬಾದರ್ಲಿ ಕೇಳಿದಾಗ ನಾನು ಬಾಬುಗೌಡ ಮಾತನಾಡುತ್ತಿರುವುದು ಎಂದಾಗ ನೀನು ಬಾಬುಗೌಡನೇ ಆಗಿರಲಿ ಅಥವಾ ಹಂಪನಗೌಡನೇ ಆಗಿರಲಿ ಜಗಳ ಮಾಡುವುದಾದರೆ ನಾಳೆ ಗಾಂಧಿನಗರಕ್ಕೆ ಬರುತ್ತೇನೆ ಜಗಳ ಮಾಡೋಣ ಎಂದಾಗ, ನಾಳೆ ಯಾಕೆ ಇವತ್ತೇ ಬಾ ಎಂದು ಹಂಪನಗೌಡ ಬೆಂಬಲಿಗರು ಕರೆಯುತ್ತಾರೆ.ಆಗ ಬಸನಗೌಡ ಬಾದರ್ಲಿ ಲೇ ಮಗನೇ ಎಂದು ಅವಾಚ್ಯ ಶಬ್ದ ಬಳಸಿದಾಗ ಅಲ್ಲೇ ಇದ್ದ ಯುವಕರು ಆಕ್ರೋಶಭರಿತರಾಗಿ ಲೆ ಬೋ… ಲ..ಸು… ಮಗನೇ ನಾಳೆ ಯಾಕಲೇ ಇವತ್ತೆ ತಾಕತ್ತಿದ್ದರೆ ಬಾರಲೇ ಎಂದು ಅವ್ಯಾಚ ಶಬ್ದಗಳಿಂದ ಬೈದಾಡಿ ಕೊಂಡರು. ನಾನು ಬೆಂಗಳೂರಿನಲ್ಲಿ ಇದ್ದೇನೆ ನಾಳೆ ಬರುತ್ತೇನೆ ಎಂದು ಸುಮ್ಮನಾದರು. ಈ ಎರಡು ಗುಂಪುಗಳ ಮುಸುಕಿನ ಗುದ್ದಾಟ ಯಾವಾಗ ಹೈಕಮಾಂಡ್ ಬಗೆಹರಿಸುತ್ತ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆಯಾಗಿ ಉಳಿದಿದೆ. ಇನ್ನೂ ಚುನಾವಣೆ ಒಂದು ವರ್ಷ ಇರುವಾಗಲೇ ಟಿಕೇಟ್ ಗಾಗಿ ಇಂತಹ ಹೀನ ಸ್ಥಿತಿಗೆ ತಲುಪಿದ್ದಾರೆ.ಇವರ ಕಿತ್ತಾಡದಿಂದ ಜೆಡಿಎಸ್ ಮತ್ತು ಬಿಜೆಪಿಗೆ ಲಾಭವಾಗುತ್ತಿದೆ…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend