ಬಜೆಟ್ ನಲ್ಲಿ ವೇತನ ಹೆಚ್ಚಿಸುವಂತೆ ಬಿಸಿಯೂಟ ತಯಾರಕರಿಂದ ಮಾರ್ಚ್ 4 ಬೆಂಗಳೂರು ಚಲೋ…!!!

Listen to this article

ಬಜೆಟ್ ನಲ್ಲಿ ವೇತನ ಹೆಚ್ಚಿಸುವಂತೆ ಬಿಸಿಯೂಟ ತಯಾರಕರಿಂದ ಮಾರ್ಚ್ 4 ಬೆಂಗಳೂರು ಚಲೋ…..!!!

ಹರಪನಹಳ್ಳಿ- ಬಿಸಿಯೂಟ ತಯಾರಕರು ತಮಗೆ ಇದೇ ಬಜೆಟ್ ನಲ್ಲಿ ವೇತನ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮಾರ್ಚ್ 4 ರಂದು ಬೆಂಗಳೂರು ಚಲೋ ನಡೆಸಲಿದ್ದಾರೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ನ ರಾಜ್ಯ ಸಮಿತಿಯ ಕರೆಯ ಮೇರೆಗೆ ತಿಳಿಸಿದ್ದಾರೆ.

ಶಾಲೆಗಳಲ್ಲಿ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರಿಗೆ ತಿಂಗಳಿಗೆ 2700 ರೂಪಾಯಿ, ಸಹಾಯಕ ಅಡುಗೆಯವರಿಗೆ 2600 ರೂಪಾಯಿ ಮಾತ್ರ ದೊರೆಯುತ್ತಿದ್ದು ಇದರಿಂದ ಬಿಸಿಯೂಟ ತಯಾರಕರು ಜೀವನ ನಿರ್ವಹಿಸಲು ಕಷ್ಟವಾಗಿರುತ್ತದೆ.
ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿ ಅನೇಕ ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಬಿಸಿಯೂಟ ತಯಾರಕರನ್ನು ಕಡೆಗಣಿಸುತ್ತಾ ಬಂದಿದೆ.

2022ಬಜೆಟ್ ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸಬೇಕೆಂದು ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಬೆಂಗಳೂರು ಚಲೋ ಕರೆ ಕೊಟ್ಟಿದ್ದು ರಾಜ್ಯಾದ್ಯಂತ ಬಿಸಿಯೂಟ ತಯಾರಕರು ಮಾರ್ಚ್ 4 ರಂದು ಬೆಂಗಳೂರು ಚಲೋ ಹೋರಾಟದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದರು.
ಹಿಂದಿನ ದಿನ ಮಧ್ಯಾಹ್ನದಿಂದಲೇ ಬಿಸಿಯೂಟ ತಯಾರಕರು ತಮ್ಮ ತಮ್ಮ ಊರುಗಳಿಂದ ಹೊರಟು ಬೆಂಗಳೂರು ತಲುಪುವಂತೆ ಬಿಸಿ ಊಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಕರೆನೀಡಲಾಗಿದೆ ಹರಪನಹಳ್ಳಿಯ ಎಲ್ಲಾ ಬಿಸಿಊಟ ತಯಾರಿಕರು ಬಿಸಿಯೂಟ ಬಂದು ಮಾಡಿಕೊಂಡು .

ದಿನಾಂಕ 3/3/2022 ಗುರುವಾರ ಸಂಜೆ 7 ಗಂಟೆಗೆ ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಭಾಗವಹಿಸಬೇಕು.
ರಾಜ್ಯ ಸಮಿತಿ ಸದಸ್ಯರಾದಸದಸ್ಯರಾದ ಕಾಂ ಗುಡಿಹಳ್ಳಿ ಹಾಲೇಶ್ 9880 110921
ತಾಲೂಕು ಅಧ್ಯಕ್ಷರಾದ
ಕಾಂ ಎ ಪಿ ಪುಷ್ಪ 7899759052
ತಾಲೂಕು ಕಾರ್ಯದರ್ಶಿಕಾರ್ಯದರ್ಶಿ ಕಾಂ ವಿಶಾಲಮ್ಮ 8310834628…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend