ಹರ್ಷ ಕೊಲೆ ಮಾಡಿದವರನ್ನು ಗಲ್ಲು ಶಿಕ್ಷೆ ವಿಧಿಸಿ: ಆಂದೋಲ ಶ್ರೀಗಳು…!!!

Listen to this article

ಹರ್ಷ ಕೊಲೆ ಮಾಡಿದವರನ್ನು ಗಲ್ಲು ಶಿಕ್ಷೆ ವಿಧಿಸಿ: ಆಂದೋಲ ಶ್ರೀಗಳು.

ಸದನದ ಸಮಯವನ್ನು ಹಾಳು ಮಾಡಿದ ಕಾಂಗ್ರೆಸ್ ಪಕ್ಷ:ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ.

ಜೇವರ್ಗಿ:-ತಾಲೂಕಿನ ಬಸವೇಶ್ವರ ವೃತ್ತದಿಂದ ಪ್ರತಿಭಟನೆ ರ್ಯಾಲಿ ಮೂಲಕ ಅಖಂಡೇಶ್ವರ ವೃತ್ತದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆ ಖಂಡಿಸಿ ಮತ್ತು ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ಬಿಜೆಪಿ ಪಕ್ಷ ಮತ್ತು ಆರೆಸ್ಸೆಸ್ ಬಜರಂಗದಳದ ಸಂಘಟನೆಗಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆ ಉದ್ದೇಶಿಸಿ ಆಂದೋಲ ಶ್ರೀಗಳು ಮಾತನಾಡಿದರು. ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಮಾಡಿದವರನ್ನು ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಕಾಂಗ್ರೆಸ್ ಪಕ್ಷ ಜಾತಿ ಪ್ರಚೋದಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಹಿಜಾಬ್ ಕುರಿತು ಹೇಳಿಕೆ ನೀಡಿದ ಕಾಂಗ್ರೆಸ್ ಪಕ್ಷದ ಮುಖಂಡರು ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ ನೇರವಾಗಿ ಕಾರಣರಾಗುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದ್ದಾರೆ. ಸಿದ್ದರಾಮಯ್ಯನ ಸರ್ಕಾರದಲ್ಲಿ ಅನೇಕ ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ ಆದರೆ ಬಿಜೆಪಿ ಸರ್ಕಾರದಲ್ಲಿ ಕೂಡ ಇದೇ ರೀತಿ ಮುಂದುವರಿದಿದೆ ಅಂದರೆ ಬಿಜೆಪಿ ಪಕ್ಷದ ಅರಗ ಜ್ಞಾನೇಂದ್ರ ಗೃಹಮಂತ್ರಿ ಹುದ್ದೆ ನಿಮಗ್ಯಾಕೆ ಬೇಕು ರಾಜೀನಾಮೆ ನೀಡಿ ಮನೆಗೆ ಹೋಗಿ ನಿಮ್ಮ ಸರಕಾರದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ ಎಂದರೆ ನೀವೇನು ಕೈಕಟ್ಟಿಕೊಂಡು ಕೊಳ್ಳುತ್ತಿದ್ದೀರಾ ಕೂಡಲೇ ಕೊಲೆಗೈದ ನೀಚರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿ ಎಂದು ಮಂತ್ರಿಗಳ ವಿರುದ್ಧ ಗುಡುಗಿದರು.

ಆಳಂದ ತಾಲ್ಲೂಕಿನಲ್ಲಿ ಶಿವಲಿಂಗವನ್ನು ಅಪವಿತ್ರ ಮಾಡಿದ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಿ ಅಪವಿತ್ರವಾದ ಶಿವಲಿಂಗವನ್ನು ಅಭಿಷೇಕ ಮಾಡಿ ಪವಿತ್ರಗೊಳಿಸಲು ಹೋಗುವವರನ್ನು ಹೋಗದಂತೆ ಪೊಲೀಸ್ ಇಲಾಖೆಯವರು ತಡೆಯುತ್ತಾರೆ. ಕಾಂಗ್ರೆಸ್ ಪಕ್ಷದ ಗುಲಾಮರಾದ ಕಲಬುರ್ಗಿ ಎಸ್ಪಿ ಇಶಾ ಪಂತ್ ನಮ್ಮನ್ನು ತಡೆಯುತ್ತಾರೆ. ಎಷ್ಟೇ ದುಡಿದರೂ ನಮ್ಮ ಕಾಯಕ ಬಿಡುವುದಿಲ್ಲ ಎಂದು ಎಸ್ಪಿ ವಿರುದ್ಧ ಗುಡುಗಿದರು. ಹಿಂದೂ ಧರ್ಮದ ಸ್ವಾತಂತ್ರ್ಯ ಹಕ್ಕುನ್ನು ಕಸಿದು ಕೊಳ್ಳುತ್ತಿರುವ ಸರ್ಕಾರ ಯಾವ ರೀತಿಯಿಂದ ಧರ್ಮ ರಕ್ಷಣೆ ಮಾಡುತ್ತದೆ ಎನ್ನುವುದನ್ನು ತಿಳಿಯದಾಗಿದೆ ಎಂದರು. ಎಷ್ಟೇ ಅರೆಸ್ಟ್ ವಾರೆಂಟ್ ರಿಸೀವ್ ಮಾಡಿದರು ಕೂಡ ನಾವು ನಮ್ಮ ಕಾಯಕ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಹೇಳಿದರು. ಹಿಂದೂ ಧರ್ಮದ ಪವಿತ್ರ ಹಬ್ಬವಾದ ಮಾಹಾಶಿವರಾತ್ರಿ ದಿನದಂದು ಅಪವಿತ್ರವಾದ ಶಿವಲಿಂಗವನ್ನು ಪಂಚಾಭಿಷೇಕವನ್ನು ಮಾಡಿ ಪವಿತ್ರ ಶಿವಲಿಂಗವನ್ನಾಗಿ ಮಾಡುವುದು ನಮ್ಮ ಕಾಯಕವಾಗಿದೆ ಅದು ಯಾರಿಂದಲೂ ತಡೆಯಲಾಗುವುದಿಲ್ಲ ಎಂದು ಹೇಳಿದರು.

“ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತಾನಾಡಿ ಸದನದಲ್ಲಿ ಸರ್ಕಾರದ ಜೊತೆ ರಾಜ್ಯದ ಅಭಿವೃದ್ದಿಯ ಬಗ್ಗೆ ಹಾಗೂ ಸಮಸ್ಯಯ ಬಗ್ಗೆ ಚರ್ಚಿಸದೇ ಸಭೆ ನೆಡೆಸಲು ಅವಕಾಶ ನೀಡದೆ ಕಾಂಗ್ರೇಸ್ ಪಕ್ಷವು ಕಾಲಹರಣಮಾಡಿ ಜನವಿರೋಧಿ ನೀತಿ ಅನುಸರಿಸಿದೆ ಎಂದು ಆಕ್ರೋಶ ವ್ಯೆಕ್ತಪಡಿಸಿದರು.
ಡಿ.ಕೆ ಶಿವಕುಮಾರ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದಮೇಲೆ ಪಕ್ಷದಲ್ಲಿ‌ಗೂಂಡ ವರ್ತನೆ ಪ್ರಾರಂಭವಾಗಿದೆ ಆ ಪಕ್ಷಕ್ಕೆ ಯಾವುದೇ ಸಿದ್ದಾಂತವಿಲ್ಲ ಸದನದ ಸಮಯವನ್ನು ಹಾಳು ಮಾಡಿ ಜನರ ಹಣವನ್ನು ವ್ಯೆರ್ಥಮಾಡಿದ್ದಾರೆ ಎಂದು ಆಕ್ರೋಶ್ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ ಸೌಜನ್ಯಕ್ಕಾದರು ಸಾಂತ್ವನ ಹೇಳಲು ಹರ್ಷಮನೆಗೆ ಇದುವರೆಗೂ ಯಾವ ಕಾಂಗ್ರೇಸ್ ನಾಯಕರು ಬೇಟಿನೀಡಿಲ್ಲ ಇದರಿಂದಲೇ ತಿಳಿಯುತ್ತದೆ ಇವರು ಹಿಂದೂ ವಿರೋಧಿಗಳು ಎಂದು ತರಾಟೆತೆಗೆದುಕೊಂಡರು.”

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರು ಶಿವರಾಜ್ ಪಾಟೀಲ್ ರದ್ದೇವಾಡಗಿ, ರೇವಣಸಿದ್ದಪ್ಪ ಸಂಕಲಿ, ಮರೇಪ್ಪ ಬಡಿಗೇರ್, ಪುಂಡಲಿಕ್ ಗಾಯಕ್ವಾಡ್, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಭೀಮರಾಯ ಆರ್ ಗುಜಗೊಂಡ, ಬಿಜೆಪಿ ನಗರ ಘಟಕದ ಅಧ್ಯಕ್ಷರು ವಿಶ್ವನಾಥ್ ಇಮ್ಮಣಿ, ಎಂ.ಬಿ.ಪಾಟೀಲ್ ಹರವಾಳ, ರಮೇಶ್ ಬಾಬು ವಕೀಲ, ಬಸವರಾಜ್ ಪಾಟೀಲ್ ನರಿಬೋಳ, ಮಲಶೆಟ್ಟಿಪ್ಪ ಗೌಡ ಹಿರೇಗೌಡರ, ಶ್ರೀನಿವಾಸ್ ವಕೀಲ, ಬಾಗೇಶ್ ಹೊತ್ತಿನಮಡು, ಈಶ್ವರ ಹಿಪ್ಪರಗಿ, ಉಮೇಶ್ , ನಿಂಗಣಗೌಡ, ನಿಂಗಣ್ಣ ಭಂಡಾರಿ ಓಬಿಸಿ ಮೋರ್ಚ ತಾಲೂಕ ಅಧ್ಯಕ್ಷರು, ಮರೇಪ್ಪ ಗುಡೂರ ತಾಲೂಕ ಬಿಜೆಪಿ ಎಸಿ ಮೋರ್ಚಾ ಉಪಾಧ್ಯಕ್ಷರು, ಪರಮೇಶ್ವರ ಬಿರಾಳ, ವೆಂಕಟೇಶ, ಬಸವರಾಜ ಸೂಗೂರ, ವಿಜಯಲಕ್ಷ್ಮಿ ಆಂದೋಲ, ಆರೆಸ್ಸೆಸ್, ಶ್ರೀರಾಮ ಸೈನ್ಯ, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಬಿಜೆಪಿ ಪಕ್ಷದ ಪದಾಧಿಕಾರಿಗಳು ಮತ್ತು ಸಂಘಟನೆಯ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು…

ವರದಿ.ಬಸವರಾಜ್ ಹಿರೇಮಠ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend