ವಿದ್ಯಾರ್ಥಿಗಳ ಜೀವನದಲ್ಲಿ ಮಹನೀಯರ ಜಯಂತಿಗಳು ಅತಿಮುಖ್ಯ – ಚಂದ್ರಶೇಖರ ಗೋರೆಬಾಳ…!!!

Listen to this article

ವಿದ್ಯಾರ್ಥಿಗಳ ಜೀವನದಲ್ಲಿ ಮಹನೀಯರ ಜಯಂತಿಗಳು ಅತಿಮುಖ್ಯ – ಚಂದ್ರಶೇಖರ ಗೋರೆಬಾಳ.

ಸಿಂಧನೂರು : ವಿದ್ಯಾರ್ಥಿಗಳ ಜೀವನದಲ್ಲಿ ಸ್ವಾಮಿ ವಿವೇಕಾನಂದರವರ ಜಯಂತಿಗಳು ಬಹುಮುಖ್ಯವಾದಂತಹ ಪಾತ್ರವನ್ನು ನಿರ್ವಹಿಸುತ್ತವೆ ಎಂದು ನಗರದ ಚಾರ್ವಾಕ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಸೃಷ್ಟಿ ಪದವಿ ಪೂರ್ವ ಕಾಲೇಜು ಸಿಂಧನೂರು ವತಿಯಿಂದ ” ಸ್ವಾಮಿ ವಿವೇಕಾನಂದ ರವರ 159ನೇ ಜನ್ಮ ದಿನಾಚರಣೆಯ
ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳು ವಾಸ್ತವ ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು ಆಯಾ ಕಾಲ ಘಟ್ಟಗಳಿಗೆ ಅನುಗುಣವಾಗಿ ಅರ್ಥಮಾಡಿಕೊಂಡು ನಡೆದಲ್ಲಿ ಮಾತ್ರವೇ ನಾವು ಮತ್ತು ಸಮಾಜವನ್ನು ಸರಿದಾರಿಯಲ್ಲಿ ಕೊಂಡಯ್ಯಲು ಸಾಧ್ಯವೆಂದರು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ತಾಲೂಕ ಸರಕಾರಿ ಅಭಿಯೋಜಕರಾದ ನಾಗರಾಜ ಬೂದಿಯವರು ಮಾತನಾಡಿ ವಿವೇಕಾನಂದರ ಜೀವನ ವನ್ನು ಒಂದು ತಾಸಿನಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಕೇವಲ ಅವರ ವಿಚಾರಗಳ ಆಧಾರದ ಮೇಲೆ ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.
ನಂತರ ಮಾತನಾಡಿದ ಚಾರ್ವಾಕ ಉಚಿತ ತರಬೇತಿ ಸಂಸ್ಥೆಯ ಸಂಸ್ಥಾಪಕ ಶಂಕರ ವಾಲಿಕಾರ ನಾವು ಕೇವಲ ಭೋದನೆಯನ್ನು ಅಷ್ಟೆ ಮಾಡದೆ ಸಾಮಾಜಿಕವಾಗಿ ಯಾವ ರೀತಿಯಲ್ಲಿ ವಿದ್ಯಾರ್ಥಿಗಳ ಬದುಕಬೇಕೆಂಬುದನ್ನು ಚಾರ್ವಾಕ ಕಲಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಯಿಸಿದ ವೀರುಪಣ್ಣ ಜಿ ಚೆನ್ನಳ್ಳಿರವರು ಮಾತನಾಡಿ ,ಇಂತಹ ಮಹನೀಯರ ಆದರ್ಶ ಮೌಲ್ಯಗಳನ್ನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕೆಂದರು ಉಪನ್ಯಾಸಕರ ಬಸವರಾಜ ಎಲ್ ಚಿಗರಿ ಪ್ರಾಸ್ತಾವಿಕ ನುಡಿದರು,ಶರಣುಹಲಗಿ, ಮಹಾಂತೇಶ ಬೇರಗಿ, ರಮೇಶ್ ಹಲಗಿ ಶಿವು ಜಿ, ಮಾರುತಿ ಸೋಮಲಾಪುರ, ನಾರಾಯಣ ರಾಥೋಡ್, ಇತರರು ಉಪಸ್ಥಿತರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend