ಹೂವಿನ ಹಡಗಲಿ ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ “ಥಟ್ ಅಂತ ಹೇಳಿ ಅನ್ನುವ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…!!!

Listen to this article

ಹೂವಿನ ಹಡಗಲಿ ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ‘ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ.ಮತ್ತು ಥಟ್ ಅಂತ ನೀಡಿ 500 ರ ಸಂಭ್ರಮ.’

ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಅಂಗವಾಗಿ ಆಯೋಜಿಸಿದ್ದ ಥಟ್ ಅಂತ ನೀಡಿ 500 ರ ಸಂಭ್ರಮದಲ್ಲಿ
‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಕ್ವಿಜ್ ಸಹಕಾರಿ
ಎಸ್ಸೆಸ್ಸೆಲ್ಸಿ ಪಿಯುಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಸಹಕಾರಿ ಎಂದು ಮುಖ್ಯ ಗುರು ಸುರೇಶ ಅಂಗಡಿ ಹೇಳಿದರು

ವರ್ತಮಾನದ ವಿಷಯಗಳು ಪಠ್ಯಕ್ರಮ
ಕ್ರೀಡೆ ಸಾಹಿತ್ಯ ನಾಟಕ
ಹತ್ತು ಹಲವಾರು ವಿಷಯಗಳ ಜ್ಞಾನ ಅವಶ್ಯಕ.
ಗ್ರಂಥಾಲಯಕ್ಕೆ ನಿತ್ಯ ಭೇಟಿ ನೀಡಿ ಓದುವ ಹವ್ಯಾಸ ಬೆಳೆಸಿಕೊಳ್ಳಿರಿ ಎಂದು ತಿಳಿಸಿದರು.

ಚಿತ್ರಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ ಮಾತನಾಡಿ ಥಟ್ ಅಂತ ನೀಡಿ ಆನ್ಲೈನ್
ರಸಪ್ರಶ್ನೆ ದಿನ ನಡೆಯುತ್ತಿರುವುದು ಉತ್ತಮ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಿಕೆಗೆ
ಪೂರಕವಾಗಿದೆ.
500 ದಿನ ಹತ್ತು ಸಾವಿರ
ವಿವಿಧ ವಿಷಯಗಳ ಪ್ರಶ್ನೆ
ಕೇಳಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ
ಪಟ್ಟಣದ ವಿವೇಕ ವಿಜಯ
ಬಳಗದ ಅರುಣ್ ಕುಮಾರ್ ಬಿ
ಪ್ರಮೋದ್ ಮಲ್ಕಿಒಡೆಯರ್
ಶ್ರೀಧರ್ ರವರು ಶಾಲೆಯ
ವಿದ್ಯಾರ್ಥಿಗಳಿಗೆ ವಿವೇಕ ವಿಜಯ 150 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಜಿ ಲಾವಣ್ಯ, ಶ್ರೇಯಾ,ಹರೀಶ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಶಿಕ್ಷಕರಾದ ಜಿ ಆನಂದ ಸ್ವಾಮಿನಾಥ ರಾಮಸ್ವಾಮಿ
ಲಂಬಾಣಿ ಗಿಡ್ಡಾನಾಯ್ಕ್ .ವೈ ಜಯಮ್ಮ. ಪಿ ಎಂ ಗೀತಾ.ಲಾವಣ್ಯ ಜಿ.ರೇಖಾ. ಎಸ್ .ಸಂತೋಷ್ ಕುಮಾರ್ ಸೊಪ್ಪಿನ ಹಾಜರಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಅಂಬೇಡ್ಕರ್ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ವರದಿ: ಅಜಯ. ಚ
ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend