ಅಭಿವೃದ್ಧಿ ಮಾದರಿ ಮತ್ತು ನಮ್ಮ ಒಳ್ಳೆಯತನ ಮೆಚ್ಚಿ ತಾವು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಮಾದರಿ ಮತ್ತು
ನಮ್ಮ ಒಳ್ಳೆಯತನ ಮೆಚ್ಚಿ ತಾವು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

“ಕೂಡ್ಲಿಗಿ ಕ್ಷೇತ್ರದ ಬಡವರು – ಕಡುಬಡವರ ಅಸಮಾನತೆ ತೊಲಗಿಸುವುದು ನನ್ನ ಮೊದಲ ಧ್ಯೇಯ – ನಮ್ಮ ಬಡವರ ಕಣ್ಣಪ್ಪ”

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪಾಲಯ್ಯನಕೋಟೆ ಗ್ರಾಮದ ಕಾಂಗ್ರೆಸ್ ಮುಖಂಡರಾದ ಕಲ್ಲೇಶ , ಮಲ್ಲೇಶ, ಮಲ್ಲಿಕಾರ್ಜುನ, ಹನುಮಂತಪ್ಪ ಅವರ ನೇತೃತ್ವದಲ್ಲಿ ಹಾಗೂ ಮಾನ್ಯಶಾಸಕರಾದ ಡಾ.‌ ಶ್ರೀನಿವಾಸ್. ಎನ್. ಟಿ. ಅವರ ಅಧ್ಯಕ್ಷತೆಯಲ್ಲಿ ದಿ. 05-05-24 ರಂದು ನರಸಿಂಹಗಿರಿ ಗ್ರಾಮದ ಶಾಸಕರ ಸ್ವ ಗೃಹದಲ್ಲಿ ಅನ್ಯಪಕ್ಷ ತೊರೆದ ವಿವಿಧ ಕಾರ್ಯಕರ್ತರಾದ ಹೊನ್ನೂರಪ್ಪ, ಮಲ್ಲೇಶ, ರಾಮಪ್ಪ, ಪಾಲಪ್ಪ, ನಾಗರಾಜ. ಎಮ್. ಎಸ್, ಹನುಮಂತಪ್ಪ, ನಾಗರಾಜ. ಜಿ, ಸುದೀಪ, ರಾಜಪ್ಪ. ಬಿ, ಮೂಗಪ್ಪ .ಕೆ, ನಾಗರಾಜ , ಮಾರಪ್ಪ, ಈರಪ್ಪ, ಹನುಮಂತ, ಕೆ. ರಾಜಪ್ಪ, ಭೀಮಪ್ಪ, ಬಿ. ಸಂತೋಷ, ರವಿ, ಮೂಗಪ್ಪ, ಗೋಣಿಬಸಪ್ಪ, ಕೊಟ್ರೇಶ. ಬಿ, ರವಿ .ಬಿ, ನಿಜಲಿಂಗಪ್ಪ. ಎಸ್, ಮೂಗಪ್ಪ . ಎಸ್, ಪ್ರಭು, ನಿಂಗರಾಜು, ಬಸವರಾಜು, ಅಡಿವೆಪ್ಪ, ಮುನಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಶಾಸಕರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ “ ಇವತ್ತು ತಾವುಗಳು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು ಹಾಗೂ ನಮ್ಮ ಒಳ್ಳೆಯತನವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವಂತದ್ದು ಅತ್ಯಂತ ಸಂತಸ ತಂದಿದೆ” ಎಂದರು. ಮುಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಯಾವುದೇ ಪ್ರದೇಶ, ವರ್ಗ ಮತ್ತು ಜನತೆ ಅಂತಹ ತಾರತಮ್ಯವನ್ನು ಮಾಡದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಾದ “ಬಡವರು – ಕಡುಬಡುವರ” ಅಭಿವೃದ್ಧಿಗೆ ಒತ್ತು ಕೊಡುತ್ತೇವೆ ಎಂದರು. ನನ್ನೊಂದಿಗೆ ಜೋಡು ಎತ್ತಿನಂತೆ ನಮ್ಮ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗಾಗಿ ಕೈ ಜೋಡಿಸಲು ಸಿದ್ದರಾಗುತ್ತಿರುವ ಈ ಬಾರಿ ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನನ್ನ ಅಣ್ಣನವರಾದ ಸರಳ ಜೀವಿ ಮತ್ತು ಪ್ರಬುದ್ಧರಾದ ಈ. ತುಕಾರಾಂ ಅವರ ಗೆಲುವುಗಾಗಿ ಸಹಕಾರ ಕೊಡಬೇಕು ಎಂದೂ ಕಳಕಳಿಯಿಂದ ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ಶಾಸಕರು ಮನವಿ ಮಾಡಿಕೊಂಡರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ತಮ್ಮಣ್ಣ ಎನ್. ಟಿ. ಅವರು ಉಪಸ್ಥಿತರಿದ್ದರು….

ವರದಿ. ಬಸವರಾಜ್, ಎಂ, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend