ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ ಮಾರ್ಗದರ್ಶನವನ್ನು ವಿದ್ಯಾರ್ಥಿಗಳೇ ಮೈಗೂಡಿಸಿಕೊಳ್ಳಬೇಕು – ಅನುಪಮ…!!!

Listen to this article

ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ ಮಾರ್ಗದರ್ಶನವನ್ನು ವಿದ್ಯಾರ್ಥಿಗಳೇ ಮೈಗೂಡಿಸಿಕೊಳ್ಳಬೇಕು – ಅನುಪಮ.

ಸಿಂಧನೂರು : ನಗರದ ಬಿಎಸ್ಎನ್ಎಲ್ ಪಕ್ಕದಲ್ಲಿರುವ ಸರಕಾರಿ ಪ್ರೌಢಶಾಲೆ ಸುಕಾಲಪೇಟೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತೋತ್ಸವ ವನ್ನು ಆಚರಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅನುಪಮ ಸ್ವಾಮಿ ವಿವೇಕಾನಂದರು ವಿಶ್ವನಾಥದತ್ತ ಭುವನೇಶ್ವರಿ ದಂಪತಿಗಳ ಮಗನಾಗಿ 12 ಜನವರಿ 1863 ರಂದು ಜನಿಸಿ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ ಮಾರ್ಗದರ್ಶನವನ್ನು ವಿದ್ಯಾರ್ಥಿಗಳೇ ನೀವುಗಳೆಲ್ಲ ಪಾಲಿಸಬೇಕು ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರವಾದದ್ದು ಅವರ ಆದರ್ಶವನ್ನು ಭಾರತೀಯ ಯುವಕರು ಅನುಸರಿಸುತ್ತಿದ್ದಾರೆ ಅದೇ ರೀತಿಯಲ್ಲಿನಗರದ ಪ್ರತಿಯೊಬ್ಬ ಯುವಕರು ಕೂಡ ಅವರ ಹಾದಿಯನ್ನು ಅನುಸರಿಸಬೇಕು. ಇಂದು ನಮ್ಮ ಶಾಲೆಯಲ್ಲಿ ಕಡುಬಡತನದಲ್ಲಿ ಹುಟ್ಟಿದ ಮುನ್ನಿ ಬೇಗಮ್ 10ನೇ ತರಗತಿ ವಿದ್ಯಾರ್ಥಿಯ ಅತಿ ಹೆಚ್ಚುಸಕ್ಕರೆ ರೋಗದಿಂದ ಬಳಲುತ್ತಿದ್ದ ಈಕೆಯ ನಿರಂತರ ವೈದ್ಯಕೀಯ ವೆಚ್ಚಕ್ಕೆ ಅಶ್ರಫ್ ಅಲಿ ಡಿಪೋ ಮ್ಯಾನೇಜರ ಎನ್.ಡಬ್ಲ್ಯೂ.ಕೆ. ಆರ್ ಟಿ ಸಿ.ಹುಬ್ಬಳ್ಳಿ-ಧಾರವಾಡ ಇವರು ಹತ್ತು ಸಾವಿರ ರೂಗಳನ್ನು ವೈಯಕ್ತಿಕವಾಗಿ ಸಹಾಯ ಮಾಡಿರುವುದು, ಮಾನವೀಯತೆಗೆ ಮೆಚ್ಚುಗೆ ಪಡೆದಿದೆ. ಅದೇ ರೀತಿ ಈಕೆಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಇವರು ಹೊತ್ತಿರುವುದು ಸಮಾಜಕ್ಕೆ ಸ್ವಾಮಿ ವಿವೇಕಾನಂದರು ಇಂತಹ ಪುಣ್ಯಾತ್ಮರ ರೂಪದಲ್ಲಿ ನಮ್ಮೊಂದಿಗಿದ್ದಾರೆ ಎನಿಸುತ್ತದೆ. ಆದುದರಿಂದ ಇಂದು ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾರುಣ್ಯ ಸಂಸ್ಥೆಯ ಚನ್ನಬಸವಸ್ವಾಮಿ ಹಿರೇಮಠ ಅವರನ್ನು ನಮ್ಮ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು. ಆಕೆಯ ಆರೋಗ್ಯದ ಬಗ್ಗೆ ಜವಾಬ್ದಾರಿ ಹೊತ್ತಿರುವ ಕಾರುಣ್ಯ ಸಂಸ್ಥೆಗೆ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಿಕ್ಷಕರಿಂದ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರೇಶ ಯಡಿಯೂರು ಮಠ ಎಸ್. ಡಿ.ಎಂ.ಸಿ.ಅಧ್ಯಕ್ಷರು,ಸ್ವಾಮಿ ವಿವೇಕಾನಂದರ ಆದರ್ಶದ ಉಪನ್ಯಾಸವನ್ನು ಶ್ರೀಮತಿ ಉಮಾದೇವಿ ಶಿಕ್ಷಕರು. ಹಾಗೂ ಅಮರೇಶ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಿದರು. ಕಾರ್ಯಕ್ರಮದಲ್ಲಿ ಸೋಮನಾಥ ಮುಖ್ಯೋಪಾಧ್ಯಾಯರು ಸಹಿಪ್ರಾ ಶಾಲೆ ಕೋಟೆ ಸಿಂಧನೂರು. ಸ್ವಾಗತವನ್ನು ಭಾರತೀಶ ಶಿಕ್ಷಕರು ಕೋರಿದರು. ಪ್ರಾರ್ಥನೆಯನ್ನು ಲತಾಜಲಿ ಶಿಕ್ಷಕರು ನೆರವೇರಿಸಿಕೊಟ್ಟರು. ನಿರೂಪಣೆಯನ್ನು ಜಿ.ಎಸ್. ಪಾಟೀಲ್ ಶಿಕ್ಷಕರು ನಿರೂಪಿಸಿದರು ವಂದನಾರ್ಪಣೆಯನ್ನು ಮಂಜುಳಾ ಶಿಕ್ಷಕರು ಸಲ್ಲಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend