ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯ…!!!

Listen to this article

ಸಿಂಧನೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿವಿಧ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ತಾಲೂಕು ಸಮಿತಿ ವತಿಯಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಬಿತ್ತಿ ಪತ್ರಗಳನ್ನು ಹಿಡಿದು ದಿಕ್ಕಾರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೊರಟು ಮಿನಿವಿಧಾನಸೌದ ತಲುಪಿತು. ಈ ಹೋರಾಟಕ್ಕೆ ಬೆಂಬಲವಾಗಿ ಎಸ್.ಎಪ್.ಐ. ಸಂಘಟನೆಯ ವಿಧ್ಯಾರ್ಥಿಗಳು ಪದವಿ ಕಾಲೇಜಿನಿಂದ ಮಿನಿ ವಿಧಾನಸೌಧದ ಉಪನ್ಯಾಸಕರ ಹೋರಾಟದಲ್ಲಿ ಬಂದು ಪಾಲ್ಗೊಂಡರು.

ಹೋರಾಟದ ಉದ್ದೇಶಿಸಿ ಚಂದ್ರಶೇಖರ ಗೋರೆಬಾಳ ಮಾತನಾಡಿ, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,500 ಮಂದಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಇವರ ಅಭದ್ರತೆಯ ವಾತಾವರಣ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು. ಕಳೆದ ಎರಡು ವರ್ಷಗಳಿಂದ ವಿಧ್ಯಾರ್ಥಿಗಳು ತರಗತಿಯಿಂದ ವಂಚಿತರಾಗಿದ್ದಾರೆ. ಜೀವನ ನಿರ್ವಹಣೆ ಮಾಡಲಾಗದೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರಿಗೆ 20 ಲಕ್ಷ ರೂ.ಪರಿಹಾರ ನೀಡಬೇಕು.ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ಅಗ್ರಹಿಸಿದರು.ಉಪನ್ಯಾಸಕರನ್ನು ಕಾಯಂ ಮಾಡಿ,ಉದ್ಯೋಗ ಭದ್ರತೆ ನೀಡಬೇಕು ಎಂದರು. ಉಪನ್ಯಾಸಕರಲ್ಲಿ ನೆಟ್, ಸೆಟ್, ಎಮ್.ಎಸ್.ಸಿ, ಎಮ್.ಪಿಲ್, ಮುಗಿಸಿ ಹದಿನೈದರಿಂದ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಆದರೆ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸರ್ಕಾರ ತಮ್ಮ ಹಿತಾಸಕ್ತಿಗಾಗಿ ಹೊಸದಾಗಿ ನೇಮಕ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಅತಿಥಿ ಉಪನ್ಯಾಸಕರು ಸೇವಾಭದ್ರತೆ ಈಡೇರಿಕೆಗಾಗಿ 20 ದಿನಗಳಿಂದ ನಿರಂತರವಾಗಿ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡುತ್ತ ಬಂದಿದ್ದಾರೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳದೇ ಇರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಬಲವಾದ ಪೆಟ್ಟು ಬಿದ್ದಂತಾಗಿದೆ ಕೂಡಲೇ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು, ಶೈಕ್ಷಣಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಬೇಕು. ಶೌಚಾಲಯ,ಶುದ್ಧ ಕುಡಿಯುವ ನೀರು, ಗ್ರಂಥಾಲಯ, ರೀಡಿಂಗ್ ರೂಮ್,ಪುಸ್ತಕಗಳು,ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿ ಪ್ರತ್ಯೇಕವಾಗಿ ಸರ್ಕಾರಕ್ಕೆ ಒತ್ತಾಯಿಸಿದೆ.

ನಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಭಾರತ ವಿಧ್ಯಾರ್ಥಿ ಪೇಡರೇಶನ್ ಮತ್ತು ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟ ಬೇರೆ ಬೇರೆಯಾಗಿ ತಹಸೀಲ್ದಾರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಶ್ವನಾಥ್ ಪಾಟೀಲ್ ಅಧ್ಯಕ್ಷರು, ಭೀಮಣ್ಣ ರಂಗಾಪುರ, ಕೃಷ್ಣ ಗಾಂಧಿನಗರ, ಬಸವರಾಜ್ ಕುರುಕುಂದ, ವಿರುಪಾಕ್ಷಪ್ಪ ಗಚ್ಚಿನ ಮನೆ, ಚಂದ್ರಶೇಖರ್ ಹುಳ್ಕಿಹಾಳ, ಶ್ರೀಮತಿ ಶೋಭಾ, ಶಂಕರ ಪತ್ತಾರ್, ಶಂಕರ ಗುರಿಕಾರ್, ಪರಶುರಾಮ್ ಮಲ್ಲಾಪುರ, ಬಾಲಪ್ಪ ಹೊಗರನಾಳ, ವೆಂಕಟೇಶ ಮಲ್ಲಾಪೂರು, ಬಸಮ್ಮ, ಭೀಮಣ್ಣ, ಎಸ್.ಎಪ್.ಐ. ಸಂಘಟನೆಯ ಮುಖಂಡರಾದ ಬಸವರಾಜ್ ದಿನಸಮುದ್ರ, ಶರಣಬಸವ, ಅಯ್ಯಪ್ಪ, ಬಸವರಾಜ್, ಗೋಪಿ, ತಿರುಪತಿ ಇನ್ನು ಮುಂತಾದವರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend