ಸಿಂಧನೂರು : ಹುಟ್ಟು ಹಬ್ಬದ ದಿನದಂದು ವೃದ್ಧರ, ಅನಾಥರ, ಬುದ್ಧಿಮಾಂದ್ಯರಿಗೆ ಹಾಸಿಗೆ, ಶೇಟರ್ ವಿತರಣೆ…!!!

Listen to this article

ಸಿಂಧನೂರು : ಹುಟ್ಟು ಹಬ್ಬದ ದಿನದಂದು ವೃದ್ಧರ, ಅನಾಥರ, ಬುದ್ಧಿಮಾಂದ್ಯರಿಗೆ ಹಾಸಿಗೆ, ಶೇಟರ್ ವಿತರಣೆ.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾಟ್ರಸ್ಟ್ (ರಿ) ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಯದಲ್ಲಿ ಹಂಪನಗೌಡ ಬಾದರ್ಲಿ ಮಾಜಿ ಶಾಸಕರ 71ನೇ ವರ್ಷದಹುಟ್ಟು ಹಬ್ಬವನ್ನು ಆಶ್ರಮದಲ್ಲಿನ ಎಲ್ಲಾ ಅನಾಥ ವೃದ್ಧರಿಗೆ ಹಾಗೂ ಅನಾಥ ವಯಸ್ಕರ ಬುದ್ಧಿಮಾಂದ್ಯರಿಗೆ ಉತ್ತಮ ಮಟ್ಟದ ಹಾಸಿಗೆಗಳನ್ನು ಹಾಗೂ ಹಾಗೂ ಶಟರ್ ಗಳನ್ನು ವಿತರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ವೃದ್ಧರು ಹಾಗೂ ಬುದ್ಧಿಮಾಂದ್ಯರೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಹಂಪನಗೌಡರ ವ್ಯಕ್ತಿತ್ವ ಇಂತಹ ನೊಂದು ಬೆಂದ ಜೀವಿಗಳಿಗೆ ಸೇವೆ ಮಾಡುವುದಲ್ಲದೆ ಯಾವುದೇ ವಿಜೃಂಭಣೆ ಗಳಿಲ್ಲದೇ, ಆಡಂಬರಗಳಿಲ್ಲದೆ ಇಂತಹ ಪುಣ್ಯಭೂಮಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಆದರ್ಶ ಅವರದು. ಅವರ ಹುಟ್ಟುಹಬ್ಬದ ದಿನ ಈ ಕಾರುಣ್ಯ ಆಶ್ರಮಕ್ಕೆ 30 ಕ್ವಿಂಟಾಲ್ ಭತ್ತ ನೀಡುತ್ತೇವೆ. ಆಶ್ರಮದ ಆಡಳಿತ ಮಂಡಳಿ ಇಂತಹ ಸೇವೆಯನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನಿರಂತರವಾಗಿ ನಮ್ಮ ಕುಟುಂಬ ಆಶ್ರಮಕ್ಕೆ ಬೆನ್ನೆಲುಬಾಗಿ ನಿಂತು ಮುಂದಿನ ದಿನಗಳಲ್ಲಿ ಸರ್ಕಾರಿ ನಿವೇಶನ ಕೊಡಿಸುತ್ತೇವೆ ಎಂದರು. ಆಶ್ರಮದ ಪ್ರತಿ ವ್ಯಕ್ತಿಯ ಆಶೀರ್ವಾದ ನಮ್ಮ ಹಂಪನಗೌಡರ ಹಾಗೂ ಅಭಿಮಾನ ಬಳಗದ ಮೇಲಿರಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುಗೌಡ ಬಾದರ್ಲಿ ಹುಟ್ಟು ಹಬ್ಬದ ಕೇಕ ಕತ್ತರಿಸಿದ ನಂತರ ಮಾತನಾಡಿದರು.

ನಂತರ ಮಾತನಾಡಿದ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಖಾಜಿ ಮಲ್ಲಿಕ್ ಹಂಪನಗೌಡರ ಮಾರ್ಗದರ್ಶನದಂತೆ ನಾವೆಲ್ಲ ಇಂದು ನಗರದಾದ್ಯಂತ ಅವರ ಹುಟ್ಟುಹಬ್ಬದ ಅಂಗವಾಗಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಕಾರುಣ್ಯ ಆಶ್ರಮದಲ್ಲಿ ಹಮ್ಮಿಕೊಂಡಿರುವ ಸಾಹೇಬರ ಹುಟ್ಟುಹಬ್ಬಕ್ಕೆ ಅರ್ಥಪೂರ್ಣವಾಗಿದೆ. ಅವರ ಹುಟ್ಟೂರಿನಲ್ಲಿನ ಈ ಸೇವಾ ಟ್ರಸ್ಟ್ ಮಾಡುತ್ತಿರುವ ಅನಾಥಪರ ಸಮಾಜಪರ ಕಾರ್ಯಗಳು ನಮ್ಮ ಹಂಪನಗೌಡರ ಆದರ್ಶ ವ್ಯಕ್ತಿತ್ವವನ್ನು ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪಂಪನಗೌಡ ಬಾದರ್ಲಿ ಈ ಕಾರುಣ್ಯ ಆಶ್ರಮ ನಮ್ಮ ಕುಟುಂಬವಿದ್ದಂತೆ ಈ ಸೇವೆಗೆ ನಿರಂತರ ಸಹಾಯ ನಮ್ಮಿಂದ ದೊರೆಯುತ್ತದೆ ಎಂದು ಮಾತನಾಡಿ ಹಿರಿಯರ ಆಶೀರ್ವಾದ ತೆಗೆದುಕೊಂಡರು.

ಈ ಸಂದರ್ಭದಲ್ಲಿ
ನಗರಸಭಾ ಸದಸ್ಯರಾದ
ಶಬ್ಬಿರ್ ನಾಯಕ,ಪ್ರಭುರಾಜ್, ಮುನೀರಪಾಷಾ,ವೆಂಕಟೇಶ, ದತ್ತುರಾವ,ವೀರೇಶ ಹಟ್ಟಿ, ಸುರೇಶಜಾದವ್,ಆಲಮ್ ಭಾಷಾ,ಶೇಖರಪ್ಪ ಗಿಣಿವಾರ,
ಅಮ್ಜಾದಖಾನ್,ತಿಮ್ಮಯ್ಯ ಬಂಗಿ,ಎಚ್.ಭಾಷಾ,ಮೈಬೂಬ್ ಡೊಂಗ್ರಿ,ಶಪ್ಪುಖಾನ,ಮುಖಂಡರಾದ ಸುರೇಶ್ ಶೇಟ್,ವೀರೇಶ್ ಶಿಳ್ಳಿ,ಕ್ರಾಂತಿ ಗೌಡ,ನಾಗಪ್ಪ ಗೋಮರ್ಸಿ,ಹನುಮಂತಪ್ಪ ಗೋಮರ್ಸಿ,ಇಬ್ರಹಿಂ,ಮೌಲಾಸಾಬ,ಭೀಮಣ್ಣ ಬೆಳಗುರ್ಕಿ, ವೃದ್ಧಾಶ್ರಮದ ವ್ಯವಸ್ಥಾಪಕರಾದ ಅಮರಯ್ಯ ಸ್ವಾಮಿ,ಚನ್ನಬಸವ ಹಿರೇಮಠ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಿರಿಯ ಮುಖಂಡರು,ಅಭಿಮಾನಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend