ದಂಡಾದಿಕಾರಿಗಳಾದ ಮಂಜುನಾಥ ಬೋಗಾವತಿ ರವರುಚುನಾವಣೆಯ ನಿಮಿತ್ಯ ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದರು…!!!

Listen to this article

ಸಿಂಧನೂರು :ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ದಂಡಾದಿಕಾರಿಗಳಾದ ಮಂಜುನಾಥ ಬೋಗಾವತಿ ರವರು ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಯ ನಿಮಿತ್ಯ ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದರು. ಗ್ರಾಮ ಪಂಚಾಯತ್ ಭೂತ್ ಮಟ್ಟದಲ್ಲಿ ಸಿಸಿ ಟಿವಿಯನ್ನು ಅಳವಡಿಸಲಾಗಿರುತ್ತದೆ. ಒಂದು ವೇಳೆ ಇಲ್ಲದಿದ್ದರೆ ವಿಡಿಯೋ ಗ್ರಾಪ್ ಮಾಡಲಾಗುವುದು, ಕ್ಯಾಮೆರಾವನ್ನು ಒಂದು ಕಡೆ ನಿಗದಿಪಡಿಸಿದ ಜಾಗದಲ್ಲಿ ಕ್ಯಾಮರವನ್ನು ಇಟ್ಟು ಕ್ಯಾಮರಾ ಮೇನ್ ಹೊರಗಡೆ ಕಳಿಸಬೇಕು.

 

ಬೂತ್ ನಲ್ಲಿ ಏನಾದರೂ ಅನುಮಾನಗಳು ಕಂಡು ಬಂದರೆ ಪಿ.ಆರ್.ಒ.ಗ್ರೂಪ್ನಲ್ಲಿ ಸಂದೇಶಗಳನ್ನುಕಳುಹಿಸಬೇಕು.ಎರಡೂ ನೆರಳೆ ಪೆನ್ನುಗಳನ್ನು ಕೊಟ್ಟಿರುತ್ತೇವೆ, ಅದರಲ್ಲಿ ಒಂದು ಪೆನ್ನನ್ನು ಅಭ್ಯರ್ಥಿಗಳಿಗೆ ಪೆನ್ನಿನ ಕ್ಯಾಪ್ ತೆಗೆದು ಕೊಡಬೇಕು. ‘ಡಿ’. ದರ್ಜೆ ನೌಕರನು ಆ ಪೆನ್ನಿನ ವಾಪಾಸು ತೆಗೆದುಕೊಳ್ಳುವವರೆಗೆ ನೋಡಿಕೊಳ್ಳಬೇಕು. ಮತದಾರರು ಮತ ನೀಡುವುದು ಸಿಸಿ ಟಿವಿಯಲ್ಲಿ ಸೇರೆಯಾಗಬಾರದು.ಮತದಾನ ಆರಂಭದಿಂದ ಅಂತ್ಯದವರೆಗೂ ಯಾವುದೇ ಕಾರಣಕ್ಕೂ ಒಂದು ವೇಳೆ ಗ್ರಾಮದಲ್ಲಿ ಸಂಭಂದಿಕರಾಗಲಿ, ಸ್ನೇಹಿತರಾಗಲಿ ಇದ್ದರೆ ಅವರ ಮನೆಗಳಿಗೆ ಹೋಗಿರುವುದು ಕಂಡು ಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಹೀಗೆ ಇನ್ನಿತರ ಮಾಹಿತಿಗಳ ಬಗ್ಗೆ ತರಬೇತಿ ನೀಡಿದರು. ನಂತರ ಪತ್ರಿಕೆ ಹೇಳಿಕೆ ಮುಖಾಂತರ ಒಂದು ನಗರಸಭೆ, 31ಗ್ರಾಮ. ಪಂಚಾಯತ್ ಮತಗಟ್ಟೆಗಳಿದ್ದು 306 ಪುರುಷ, 356 ಮಹಿಳಾ, ಒಟ್ಟು 662 ಅರ್ಹ ಮತದಾರರಿದ್ದು, ಹತ್ತು ರೂಟ್ ಬಸ್ ಗಳ ಮೂಲಕ ಎರಡು ಜನ ಪೋಲಿಸ್ ಸಿಬ್ಬಂದಿ, ಪಿ.ಆರ್.ಓ,ಮತ್ತು ಎ.ಪಿ.ಆರ್.ಓ ರೂಟ್ ಆಫೀಸರ್ ನೇಮಕ ಮಾಡಲಾಗಿದೆ.ಅರ್ಹ ಮತದಾರರು ಪ್ರತಿಯೊಬ್ಬರು ಮತದಾನ ಮಾಡಬೇಕು ಯಾವುದೇ ಅಹಿತಕರ ಘಟನೆ ನಡೆಯದೆಯಾಗೆ ನೋಡಿಕೊಳ್ಳಬೇಕು ಎಂದು ಮತದಾರರಲ್ಲಿ ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿದರು…

 

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend