ಸಿಂಧನೂರು : ದೆಹಲಿಯ ಆಗ್ರಾ ದಲ್ಲಿ ನಡೆಯುವ 800 ಮೀಟರ್ ಓಟದ ಸ್ಪರ್ಧೆಗೆ ಕಮಲಾಕ್ಷಿ ತೀರ್ಥಬಾವಿ ಆಯ್ಕೆ…!!!

Listen to this article

ಸಿಂಧನೂರು : ದೆಹಲಿಯ ಆಗ್ರಾ ದಲ್ಲಿ ನಡೆಯುವ 800 ಮೀಟರ್ ಓಟದ ಸ್ಪರ್ಧೆಗೆ ಕಮಲಾಕ್ಷಿ ತೀರ್ಥಬಾವಿ ಆಯ್ಕೆ.

‘ ಸ್ಟೂಡೆಂಟ್ ಆಲ್ ಗೇಮ್ಸ್ ಆಕ್ಟಿವಿಟೀಸ್ ಅಂಡ್ ಡೆವಲಪ್ಮೆಂಟ್ ಫೌಂಡೇಶನ್ ‘ ವತಿಯಿಂದ ಬಿಜಾಪುರದಲ್ಲಿ ನಡೆದ ರಾಜ್ಯಮಟ್ಟದ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಜಯಶೀಲಳಾಗಿದ್ದು. ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ.ದೆಹಲಿಯಆಗ್ರಾದಲ್ಲಿ 2022 ನೇ ಸಾಲಿನ ಮೂರನೇ ರಾಷ್ಟ್ರೀಯ ಚಾಂಪಿಯನ್ ಶಿಪ್ ಜನವರಿ 8, 9,10 ರಂದು ನಡೆಸಲು ಆಯೋಜಿಸಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ 800 ಮೀಟರ್ ಓಟದ ಅಥ್ಲೆಟಿಕ್ಸ್ ವಿಭಾಗಕ್ಕೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ಕಮಲಾಕ್ಷಿ ತಂದೆ ದ್ಯಾಮನಗೌಡ ತೀರ್ಥಭಾವಿ ಆದ ನಾನು ಆಯ್ಕೆಯಾಗಿದ್ದೆನೆ. ನನಗೆ ಶಾಲಾ ದಿನಗಳಿಂದಲೂ ಆಟದ ಮೇಲೆ ಬಹಳ ಆಸಕ್ತಿಯಿತ್ತು, ಅದಕ್ಕಾಗಿ ಪಾಠದ ಜೊತೆಗೆ ಆಟಕ್ಕೆ ಬಹಳ ಮಹತ್ವವನ್ನು ಕೊಡುತ್ತ ಬಂದಿದ್ದೇನೆ. ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ದೈಹಿಕ ಶಿಕ್ಷಕರಾದ ಮಹೇಶ್ ಸರ್ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.ನಾನು ದೇವನಾಂಪ್ರಿಯ ಅಶೋಕ ಪ್ರಥಮ ದರ್ಜೆ ಕಾಲೇಜು ಮಸ್ಕಿಯಲ್ಲಿ ಬಿ.ಎ.ಐದನೇ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿನ ಪ್ರಾಂಶುಪಾಲರಾದ ಪಂಪನಗೌಡ ಜಿ ಪಾಟೀಲ್ ಹಾಗೂ ಎಲ್ಲಾ ನಮ್ಮ ಕಾಲೇಜಿನ ಉಪನ್ಯಾಸಕರು ಪ್ರೋತ್ಸಾಹ ನೀಡುತ್ತಿದ್ದಾರೆ. ನಾನು ತುಂಬಾ ಬಡ ಕುಟುಂಬಕ್ಕೆ ಸೇರಿದವಳಾಗಿದ್ದು, ತೀರ್ಥಭಾವಿ ಎಂಬ ಹಳ್ಳಿಯ ಬಡ ರೈತ ದ್ಯಾಮನಗೌಡ ಮತ್ತು ನಾಗರತ್ನಮ್ಮ ದಂಪತಿಗಳ ಮಗಳಾಗಿದ್ದು,ನಾನು ತಂದೆ ತಾಯಿಗೆ,ಗ್ರಾಮಕ್ಕೆ,ತಾಲೂಕಿಗೆ, ಜಿಲ್ಲೆಗೆ ಹೆಸರು ತರುವಂತಹ ಕೆಲಸವನ್ನು ಮಾಡಬೇಕು ಎನ್ನುವ ಕನಸನ್ನು ಹೊಂದಿದ್ದೇನೆ.ದೇಶ ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ದೇಶಕ್ಕೆ ನಾವೇನು ಕೊಡುತ್ತೇವೆ ಎಂಬುದು ಮುಖ್ಯವಾಗಿದೆ. ಎಲ್ಲಾರ ಕಡೆಯಿಂದ ಉತ್ತಮ ಪ್ರಶಂಸೆಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಅನಿಸುತ್ತಿದೆ. 8,9,10 ರಂದು ದೆಹಲಿಯ ಆಗ್ರಾದಲ್ಲಿ ನಡೆಯುವ ಸ್ಪರ್ಧೆಗೆ ಹೋಗಲು ಸಹಾಯ ಸಹಕಾರ ಪ್ರೋತ್ಸಾಹ ನೀಡಿರಿ.ನಂತರ ಜನವರಿ 21 22 23 ಉತ್ತರ ಖಂಡದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದೇನೆ. ಜಯಶೀಲರಾಗಲು ಈ ನಾಡಿನ ಜನರು ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನ್ನ ಕ್ರೀಡಾ ಬೆಳವಣಿಗೆಗೆ ಪ್ರೋತ್ಸಾಹಿಸಿದ ಸಕಲರಿಗೂ ಧನ್ಯವಾದಗಳು. ಮತ್ತು ನಾಡಿನ ಜನತೆಯ ಆಶೀರ್ವಾದ ಮುಂದಿನ ದಿನಗಳಲ್ಲಿ ನನ್ನ ಮೇಲಿರಲಿ ಎಂದು ಮನವಿ ಮಾಡಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend