ಮೃತ್ಯು ಲೋಕದಿಂದ ದಲಿತ ಯುವತಿ ಪಾರು…!!!

Listen to this article

ಮೃತ್ಯು ಲೋಕದಿಂದ ದಲಿತ ಯುವತಿ ಪಾರು.
ಜಾತಿನಿಂದನಾ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆ ಮೀನಾಮೇಷ.
ಡಿ.ಎಸ್.ಎಸ್ ಕಾದ್ರೊಳ್ಳಿ ಸಂಘಟನೆಯ ಒತ್ತಡಕ್ಕೆ ಮಣಿದು ಕೊನೆಗೂ ಎಫ್.ಐ.ಆರ್.

ಬಳಗಾನೂರ-8
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬನ್ನಿಗನೂರು ಗ್ರಾಮದ ಹಿಂದೂ ಧರ್ಮದ ದಲಿತ ಮಾದಿಗ ಸಮುದಾಯದ ಅತ್ಯಂತ ಬಡ ಕುಟುಂಬದ ಬಸವಲಿಂಗಮ್ಮ ಅನ್ನುವ ಯುವತಿಯನ್ನು 6 ವರ್ಷಗಳ ಹಿಂದೆ ಅದೇ ಗ್ರಾಮದ ಪೀರ್ ಪಾಶ ಅನ್ನುವ ಮುಸ್ಲಿಂ ಸಮುದಾಯದ ಯುವಕ ಲವ್ ಜಿಹಾದ್ ಹೆಸರಲ್ಲಿ ಆಕೆಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ (ಯುವತಿಯ ಪೋಷಕರು ಅತ್ಯಂತ ಕಡು ಬಡತನದ ಪರಸ್ಥಿತಿಯಲ್ಲಿದ್ದು ಅನಕ್ಷರಸ್ತರಾಗಿರುವ ಕಾರಣ ಸರಿಯಾದ ಕಾನೂನು ನೆರವು ಸಿಗದ ಕಾರಣ ಪೊಲೀಸ್ ದೂರು ನೀಡಿರುವುದಿಲ್ಲ) ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಂಡು ಆಕೆಯ ಹೆಸರನ್ನು ಹಸೀನಾ ಎಂದು ಬದಲಿಸಿ ಯುವತಿಯನ್ನು ಮದುವೆಯಾಗಿ ಸಿಂಧನೂರು ನಗರದ ಪಿ.ಡಬ್ಲ್ಯೂ.ಡಿ ಯಲ್ಲಿ ಬಾಡಿಗೆ ಶೆಡ್ಡಿನಲ್ಲಿಟ್ಟಿದ್ದು. ಆ ಯುವತಿಗೆ ಒಂದು ಗಂಡು ಮಗುವನ್ನು ಕರುಣಿಸಿ ಆ ದಲಿತ ಯುವತಿಗೆ ತಿಳಿಯದಂತೆ ಅಂದಾಜು ಮೂರು ವರ್ಷಗಳ ಹಿಂದೆ ತಮ್ಮದೇ ಮುಸ್ಲಿಂ ಸಮುದಾಯದ ಯುವತಿಯನ್ನು ಮದುವೆಯಾಗಿ ದಲಿತ ಯುವತಿಗೆ ವಂಚಿಸಿರುತ್ತಾನೆ. ತದನಂತರದಲ್ಲಿ ದಲಿತ ಯುವತಿಗೆ ಮಾನಸಿಕ. ದೈಹಿಕ. ವರದಕ್ಷಿಣೆ ಮನೆಗೆ ಬೇಕಾದ ದಿನಸಿ ಊಟದ ಸಾಮಗ್ರಿಗಳನ್ನು ತರದೆ ಉಪಾವಾಸ ಮಲಗಿಸುವುದು. ಕಂಠ ಪೂರ್ತಿಯಾಗಿ ಕುಡಿದುಬಂದು ಅವಾಚ್ಯವಾಗಿ ಬೈಯೋದು ಕೈಗೆ ಸಿಕ್ಕ ವಸ್ತುವಿನಿಂದ ಮನಬಂದಂತೆ ಹೊಡೆಯೋದು ಸೇರಿದಂತೆ ಇನ್ನಿತರ ಹಿಂಸೆಗಳನ್ನು ಕೊಡಲು ಪ್ರಾರಂಭ ಮಾಡುತ್ತಾನೆ. ಇಂತಹ ಸಂದರ್ಭದಲ್ಲಿ ದಲಿತ ಯುವತಿಯು ತಮ್ಮ ಕುಟುಂಬದ ಸದಸ್ಯರನ್ನು ಸಂಪರ್ಕ ಮಾಡಿ ನಡೆದಿರುವ ಸತ್ಯ ಸಂಗತಿಗಳನ್ನು ವಿವರಿಸಿರುತ್ತಾಳೆ. ಭುಗಿಲೆದ್ದ ಯುವತಿಯರು ಪೋಷಕರು ಗ್ರಾಮದ ಸಮುದಾಯದ ಹಿರಿಯರನ್ನು ಹಾಗೂ ಗ್ರಾಮದ ಹಿರಿಯರನ್ನು ನ್ಯಾಯಕ್ಕಾಗಿ ಬೇಡಿಕೊಂಡಾಗ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ಸಾಕಷ್ಟು ನ್ಯಾಯ ಪಂಚಾಯತಿಗಳಾಗಿದ್ದು ಅದಾವುದಕ್ಕೂ ಪೀರ್ ಪಾಶ ಮತ್ತು ಆತನ ಕುಟುಂಬದವರು ಬಗ್ಗದೆ ಯುವತಿಯ ಕುಟುಂಬವನ್ನು ವೆವಸ್ಥಿತವಾಗಿ ಮುಗಿಸುವ ಕುತಂತ್ರವನ್ನು ಮಾಡಿದ್ದರೆ. ಅಲ್ಲದೆ ಆ ದಲಿತ ಕುಟುಂಬದ ನೆರವಿಗೆ ಬರುವಂತಹ ಎಲ್ಲರಿಗೂ ದೌರ್ಜನ್ಯ. ದಬ್ಬಾಳಿಕೆ. ಮಾಡಿ ಆ ಕುಟುಂಬದ ನೆರವಿಗೆ ಬಾರದಂತೆ ಧಾಮಿಕಿ ಹಾಕುವುದು ಹೆದರಿಸುವುದು ಅವರ ಹುಟ್ಟುಗುಣವಾಗಿದೆ. ತಿಂಗಳು ಹಿಂದೆಯೂ ಸಂಬಂಧ ಪಟ್ಟ ಬಳಗಾನೂರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೇಳಲು ಹೋದರೂ ಅವರಿಗೆ ಅಲ್ಲಿ ಯಾವುದೇ ನೆರವಾಗಲಿ ನ್ಯಾಯವಾಗಲಿ ಸಿಕ್ಕಿರೋದಿಲ್ಲ. ಹತಾಶಯರಾಗಿ ಸುಮ್ಮನಾಗಿರುತ್ತಾರೆ. ಮುಂದುವರಿದು ದಿನಾಂಕ 06/06/2021 ರಂದು ರಾತ್ರಿ ಸುಮಾರು 11:00 ಗಂಟೆಗೆ ಸಿಂಧನೂರಿನ ಪಿ.ಡಬ್ಲ್ಯೂ.ಡಿಯಲ್ಲಿನ ಬಾಡಿಗೆ ಶೆಡ್ಡಿಗೆ ವಿಪರೀತವಾಗಿ ಮದ್ಯೆ ಸೇವಿಸಿ ಕುಡಿದ ಅಮಲಿನಲ್ಲಿ ನನ್ನ ಎರಡನೆಯ ಪತ್ನಿಯ ಪೋಷಕರು ನಿನ್ನನ್ನು ಕೊಲೆ ಮಾಡಲು ಹೇಳಿದ್ದಾರೆ ಹಾಗಾದರೆ ಮಾತ್ರ ನನ್ನ ಎರಡನೇ ಹೆಂಡತಿಯನ್ನ ನನ್ನ ಮನೆಗೆ ಕಳಿಸುತ್ತಾರಂತೆ ನೀನು ಮಾದಿಗ ಸಮಾಜದ ಹೀನ ಕುಲದವಳು ಇದ್ದಿಯಾ ನನಗೆ ನಿನ್ನ ಜೊತೆಗೆ ಸಂಸಾರ ಮಾಡಲು ಅಸಯ್ಯ ಆಗುತ್ತೆ ಹಾಗಾಗಿ ನಿನ್ನ ಅವಶ್ಯಕತೆಯಿಲ್ಲ ಅಂದವನೇ ಯುವತಿಯನ್ನು ಸಿಕ್ಕ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಆಕೆಯ ಮೇಲೆ ಹಲ್ಲೆ ಮಾಡಲು ಪ್ರಾರಂಭ ಮಾಡಿದ್ದಾನೆ. ಯುವತಿಯು ರಕ್ಷಣೆಗಾಗಿ ಚೀರುತ್ತಾ ಷಡ್ ನಿಂದ ಹೊರಗೆ ಹೊಡಿ ಬಂದಿದ್ದಾಳೆ ಆದರೂ ಯುವತಿಯನ್ನು ಬಿಡದ ಕಿರಾತಕ ಸಿ.ಸಿ ರಸ್ತೆಯ ಮೇಲೆ ಕೆಡವಿ ಇಟ್ಟಿಗೆಯಿಂದ ಯುವತಿಯ ತಲೆಗೆ ಗುದ್ದುವಾಗ ಅಕ್ಕಪಕ್ಕದ ಸುಮಾರು ನೂರಕ್ಕೂ ಹೆಚ್ಚು ಜನ ಹೊಡಿಬಂದು ಆ ಯುವತಿಯನ್ನು ರಕ್ಷಣೆ ಮಾಡಿ ಯುವತಿಯ ಅಣ್ಣನಿಗೆ ದೂರವಾಣಿ ಕರೆ ಮಾಡಿ ನಿಮ್ಮ ತಂಗಿಯನ್ನು ಅವನು (ಪೀರ್ ಪಾಶ) ಜೀವ ಸಹಿತ ಉಳಿಸೋದಿಲ್ಲ ಬಂದು ಕರೆದುಕೊಂಡು ಹೋಗಿ ಅಂತ ವಿವರಿಸಿದಾಗ ಅಂದು ರಾತ್ರಿ ಮಳೆ ಬರುತ್ತಿರುವ ಕಾರಣ ಆತನಿಗೆ ಬರಲಾಗದೆ ದಿಗಿಲುಬಿದ್ದು ದಲಿತ ಸಂಘಟನೆಯ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದು ಕೂಡಲೆ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಸಂಘಟನೆಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ. ಗುಡದೂರು ಹೋಬಳಿ ಅಧ್ಯಕ್ಷರಾದ ಪರಶುರಾಮ್ ಬೆನಿಗಿಡ ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿ ಕುಟುಂಬದ ಸದಸ್ಯರಿಗೆ ಒಪ್ಪಸಿ ಬನ್ನಿಗನೂರು ಗ್ರಾಮಕ್ಕೆ ಕಳಿಸಿ ಕೊಡಲಾಗಿತ್ತು. ದಿನಾಂಕ 07/06/2021 ರಂದು ಸಾಯಂಕಾಲ ಸಂಘಟನೆ ಪದಾಧಿಕಾರಿಗಳು ಈ ಕುರಿತಂತೆ ಕುಟುಂಬದ ಪೋಷಕರನ್ನು ಭೇಟಿ ಮಾಡಲು ಬನ್ನಿಗನೂರು ಗ್ರಾಮಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ಬಸವಲಿಂಗಮ್ಮಳು ಪೀರ್ ಪಾಶನ ಮನೆಗೆ ಹೋಗಿ ನನಗೆ ನ್ಯಾಯ ಕೊಡಿಸಲು ದಲಿತ ಸಂಘಟನೆಯ ಅಣ್ಣಂದಿರು ಬಂದಿದ್ದಾರೆ ನೀವು ಬನ್ನಿ ಅಂತ ಕರೆಯಲಾಗಿ ಪೀರ್ ಪಾಶ ಮತ್ತು ಆತನ ಕುಟುಂಬದ ಸದಸ್ಯರು ಏಕಾಏಕಿ ಯುವತಿಯನ್ನು ಸಿ.ಸಿ ರಸ್ತೆಗೆ ಹೇಳೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿ ಹಲ್ಲೆಗೆ ಮುಂದಾಗಿದ್ದಾರೆ. ಆಗ ಯುವತಿಯು ಚೀರಾಟ ಮಾಡಿದಾಗ ಯುವತಿಯ ಪೋಷಕರು ಹೋಡಿಹೋಗಿ ಬಿಡಿಸಿಕೊಳ್ಳೋ ಸಂಧರ್ಭದಲ್ಲಿ ಕುಟುಂಬದವರ ಮೇಲೂ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂಧನೆ ಮಾಡಿ ಗ್ರಾಮದಿಂದಲೇ ಬಹಿಸ್ಕಾರ ಹಾಕುದಾಗಿ ಜೀವ ಬೆದರಿಕೆ ಹಾಕಿದ್ದು. ಮಹಿಳಿಯರ ಮೇಲಿನ ಬಟ್ಟೆ ಹಿಡುದು ಎಳೆದಾಡಿ ಸಾರ್ವಜನಿಕವಾಗಿ ಮಾನಹಾನಿ ಮಾಡಿ ಹಲ್ಲೆಗೆ ಮುಂದಾದಾಗ ಸಂಭಂದಿಗಳು ದಲಿತ ಸಂಘಟನೆಯ ಕಾರ್ಯಕರ್ತರು ಜಗಳ ಬಿಡಿಸಿಕೊಳ್ಳಲು ಪ್ರಯತ್ನಿಸುವಾಗ ಪೀರ್ ಪಾಶ ಮತ್ತು ಆತನ ಕುಟುಂಬದವರು ಆತನ ಸಂಭಂದಿಕರು ಏಕಾಏಕಿ ಸಂಘಟನೆಯ ಕಾರ್ಯಕರ್ತರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದರು. ದಲಿತ ಸಂಘಟನೆಯ ಬಗ್ಗೆ ಹಗುರವಾಗಿ ಮಾತನಾಡಿದರು ಯಾವ ದಲಿತ ಸಂಘಟನೆಯವರು ಆ ದಲಿತ ಕುಟುಂಬದ ನೆರವಿಗೆ ಬರಬಾರದು ಬಂದರೆ ನಿಮ್ಮನ್ನು ಕೊಡಲಿಯಿಂದ ತುಂಡು ತುಂಡಾಗಿ ಕಡಿದು ಬಿಡುತ್ತೇವೆ ಅಂತ ಜೀವ ಬೆದರಿಕೆ ಹಾಕಿದರು. ಆದರೂ ಯಾವುದಕ್ಕೂ ಜಗ್ಗದೆ ಗಲಾಟೆಯಲ್ಲಿ ಚಿಕ್ಕ ಪುಟ್ಟ ಗಾಯಗಳಾಗಿರುವವರನ್ನು ಬಿಟ್ಟು ದಲಿತ ಯುವತಿ ಬಸವಲಿಂಗಮ್ಮ ಮತ್ತು ಅವರ ತಾಯಿಯನ್ನು ಸಿಂಧನೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ವೈದ್ಯಕೀಯ ದೂರು ದಾಖಲಿಸಿ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದರೂ ಯಾವಬ್ಬ ಪೋಲಿಸ್ ಅಧಿಕಾರಿಗಳು ಆಸ್ಪತ್ರೆಗೆ ಬಂದು ವಿವರವನ್ನು ಪಡಿಯದೆ ಸತಾಯಿಸಿದ್ದು. ತದನಂತರದಲ್ಲಿ ಲಿಖಿತ ದೂರನ್ನು ಪಡೆದುಕೊಂಡು ಹೋಗಿ ದಾಖಲು ಮಾಡಿಕೊಳ್ಳದೆ ಹಾಗೆ ಇರುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು. D.Y.S.P. ಸಿಂಧನೂರು ರವರು. ಸಿ.ಪಿ.ಐ. ಸಿಂಧನೂರು ವೃತ್ತರವರು. ಬಳಗಾನೂರು ಪಿಎಸ್ಐ. ಅವರಾಗಲಿ ಎ.ಎಸ್.ಐ ಅವರಗಳಾರು ದೂರವಾಣಿ ಸಂಪರ್ಕಕ್ಕೆ ಸಿಗದೆ ಹೋದದ್ದು ದುರಂತವೇ ಸರಿ. ಹಾಗಂತ ಬೆನ್ನು ಬಿಡದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಸಂಘಟನೆಯ ಕಾರ್ಯಕರ್ತರು ತಮ್ಮ ನಿರಂತರ ಪ್ರಯತ್ನದಿಂದ ಸಿಂಧನೂರು ಡಿ.ಯೈ.ಎಸ್. ಪಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಯ ಸಂಪೂರ್ಣ ವಿವರವನ್ನು ವಿವರಿಸಲಾಗಿ ದಲಿತ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾದರೆ ಜಾತಿ ನಿಂದನೆ ಪ್ರಕರಣ ದಾಖಲಿಸಲು ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲಾ ಅನ್ನುವ ಸಲಹೆ ನಮಗೆ ದಿಗ್ಬ್ರಮೆ ಗೊಳಿಸಿದ್ದಂತೂ ಸತ್ಯ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಲಿಖಿತ ದೂರಿನ ಪ್ರತಿಗೆ ಸಹಿಯನ್ನು ಮಾಡಿ ಕಳಿಸಿದ್ದರೂ ಆಸ್ಪತ್ರೆಯಿಂದ ಯುವತಿಯನ್ನು ಠಾಣೆಗೆ ಕರೆಸಿ ಸುಖಾಸುಮ್ಮನೆ ನಾಲ್ಕೈದು ತಾಸು ಠಾಣೆಯಲ್ಲೇ ಕೂಡಿಸಿ ಅಪಾದಿತರ ಸಂಭಂದಿ ಮತ್ತು ಸ್ನೇಹಿತರಿಂದ ದೂರು ನೀಡದಂತೆ ಮನ ಹೋಲಿಸುವ ಪ್ರಯತ್ನ ಮಾಡಿದ್ದಾದರೂ ಯಾಕೆ? ಇವೆಲ್ಲ ಬೆಳವಣಿಗೆಗಳು ಪೊಲೀಸ್ ವೆವಸ್ಥೆಯನ್ನು ಅಣಕಿಸುವಂತೆ ಗೋಚರವಾಗುತಿದ್ದವು ಈ ಎಲ್ಲಾ ಸತ್ಯ ಸಂಗತಿಗಳನ್ನು ನಮ್ಮ ಸಂಘಟನೆಯ ಕಾನೂನು ಸಲಹೆಗಾರರಾದ ಶುಭಾಸ ಕಲ್ಬುರ್ಗಿ ಹೈಕೋರ್ಟ್ ನ್ಯಾಯವಾದಿಗಳು. ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಚಂದ್ರಕಾಂತ್ ಕಾದ್ರೊಳ್ಳಿ. ನಮ್ಮ ಸಂಘಟನೆಯ ಜಿಲ್ಲಾ ಕಾನೂನು ಸಲಹೆಗಾರರಾದ ಗುರುನಾಥ್ ಡಿ. ನ್ಯಾಯವಾದಿಗಳು ಸಿಂಧನೂರು ಇವರ ಕಾನೂನು ಸಲಹೆಗಳನ್ನು ತೆಗೆದುಕೊಂಡು ಖಂಡಿತವಾಗಿಯೂ ಜಾತಿನಿಂದನೆ ಪ್ರಕರಣ ದಾಖಲಿಸಲು ಕಾನೂನಿನಡಿ ದಲಿತ ಯುವತಿಗೆ ಸಂಪೂರ್ಣ ಅವಕಾವಿದೆ ಪೊಲೀಸ್ ಅಧಿಕಾರಿಗಳು ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿ ಮೇಲಧಿಕಾರಿಗಳಿಗೆ ನಮ್ಮ ಸಂಘಟನೆಯ ಹಿರಿಯರು ರಾಜ್ಯಾಧ್ಯಕ್ಷರು ಒತ್ತಡ ಹೇರಿದ್ದರಿಂದ ಕೊನೆಗೆ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ್ 63/2021 ಕಾಲಂ143.147. 323.324.354.498(ಎ).504.506.149. ಐ.ಪಿ.ಸಿ. 4 ಡಿಪಿ ಯಾಕ್ಟ್ ಮತ್ತು ಎಸ್.ಸಿ – ಎಸ್.ಟಿ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಸಫಲರಾದೆವು. ಒಬ್ಬ ದಲಿತ ಯುವತಿ ನಿಜವಾಗಿಯೂ ನಿರಂತರವಾಗಿ ಮೂರು ವರ್ಷಗಳಿಂದ ಸಂಕಟ ಅನುಭವಿಸುತ್ತಾ ಅನ್ಯಾಯಕ್ಕೊಳಗಾಗಿದ್ದು ದಿನನಿತ್ಯ ಮಾನಸಿಕ ದೈಹಿಕ ಹಿಂಸೆ. ಪತಿಯ ಕುಟುಂಬದವರಿಂದ ಜಾತಿನಿಂದನೆ. ವರದಕ್ಷಿಣೆ ಕಿರುಕುಳ. ಮಾನಹಾನಿ. ದೌರ್ಜನ್ಯ. ದಬ್ಬಾಳಿಕೆ. ವಂಚನೆ ಅಂತಹ ಗಂಭೀರ ಆರೋಪಗಳಿದ್ದರೂ ಪೊಲೀಸ್ ಇಲಾಖೆಯಲ್ಲಿ ಪ್ರಾಥಾಮಿಕ ವರ್ತಮಾನ ವರದಿ ದಾಖಲಿಸಲು ಇಷ್ಟೊಂದು ಹೆಣಗಾಡಿದ್ದು ದುರಂತವೆ ಸರಿ. ಈ ಎಲ್ಲಾ ಘಟನೆಗಳನ್ನು ನೋಡಿದಾಗ ಪೊಲೀಸ್ ಇಲಾಖೆಯ ಅಪರಾಧಿಗಳನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳು ಮೇಲ್ನೋಟಕ್ಕೆ ಎದ್ದು ಕಾಣುತ್ತವೆ. ಹಾಗಾಗಿ ಈ ಪ್ರಕರಣದಲ್ಲಿ ನೊಂದ ದಲಿತ ಯುವತಿಗೆ ನ್ಯಾಯ ಸಿಗುವುದು ಅನಮಾನಗಳಿದ್ದು ಈ ಪ್ರಕರಣವನ್ನು ತನಿಖೆ ನಡೆಸಲು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಬೇಕು. ಈ ಪ್ರಕರಣದಲ್ಲಿನ ಎಲ್ಲಾ ಆರೋಪಿತರನ್ನು ಈ ಕೂಡಲೆ ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುದುಕೊಂಡು ನೊಂದ ದಲಿತ ಯುವತಿ ಕುಟುಂಬಕ್ಕೆ ಭದ್ರತೆ ಕೊಡಬೇಕು. ನೊಂದ ದಲಿತ ಯುವತಿಯ ಕುಟುಂಬ ಸದಸ್ಯರ ಮೇಲೆ ಯಾವುದೇ ಕಾರಣಕ್ಕೂ ಪ್ರತಿ ದೂರು ದಾಖಲಿಸಬಾರದು ಅಂತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಚಂದ್ರಕಾಂತ್ ಕಾದ್ರೊಳ್ಳಿ. ರಾಜ್ಯ ಕಾರ್ಯಾಧ್ಯಕ್ಷರಾದ ಎಲ್ಲಪ್ಪ ಹಂದ್ರಾಳ ಕೊಪ್ಪಳ. ರಾಜ್ಯ ಮಾಹ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ. ಕಲ್ಬುರ್ಗಿ ವಿಭಾಗೀಯ ಅಧ್ಯಕ್ಷರಾದ ದುರುಗಪ್ಪ ಹೆಡಗಿಬಾಳ.ರಾಯಚೂರು ಜಿಲ್ಲಾಧ್ಯಕ್ಷರಾದ ಹುಸೇನಪ್ಪ ತೆಳಗಡೆ ಮನಿ. ಬಳ್ಳಾರಿ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ ತೋರಿ. ಕೊಪ್ಪಳ ಜಿಲ್ಲಾಧ್ಯಕ್ಷರಾದ ಶಿವರಾಜ್ ದೊಡ್ಮನಿ. ಯಾದಗಿರಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ನಾಟೇಕರ್. ಸಿಂದನೂರ್ ತಾಲೂಕ ಅಧ್ಯಕ್ಷರಾದ ಮೌನೇಶ್ ಉಪ್ಪಲದೊಡ್ಡಿ. ಮಸ್ಕಿ ತಾಲೂಕ ಅಧ್ಯಕ್ಷರಾದ ಕಮಲರಾಜ್ ಹರ್ವಾಪುರ.ಲಿಂಗಸೂರು ತಾಲೂಕ ಅಧ್ಯಕ್ಷರಾದ ಮುರಾರ್ಜಿ ಕೆಂಚಾಪುರ್. ಮಾನ್ವಿ ತಾಲೂಕ ಅಧ್ಯಕ್ಷರಾದ ಮಾರುತಿ ನೀರ್ಮಾನ್ವಿ ಪತ್ರಿಕೆ ಹೇಳಿಕೆ ಕೊಡುವುದರ ಮುಖಾಂತರ ಆಗ್ರಹಿಸಿದ್ದಾರೆ. ಈ ನಮ್ಮಪತ್ರಿಕಾ ಹೇಳಿಕೆಯನ್ನು ಅಲ್ಲಗಳಿದು ನಿರ್ಲಕ್ಷ ಮಾಡಿದರೆ ಇದೆ ಪ್ರಕರಣದ ಕುರಿತು ರಾಜ್ಯಾದ್ಯಂತ ನಮ್ಮ ಸಂಘಟನೆಯು ಪ್ರತಿಭಟನೆ ಮಾಡಲಿದೆ ಎಂದು ಒತ್ತಯಿಸುತ್ತೇವೆ…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend