ಕೂಡ್ಲಿಗಿ:ಕಾಕ್ರೀಟ್ ರಸ್ತೆ ನಿರ್ಮಾಣ ಶಂಕುಸ್ಥಾಪನೆ…!!!

Listen to this article

ಕೂಡ್ಲಿಗಿ:ಕಾಕ್ರೀಟ್ ರಸ್ತೆ ನಿರ್ಮಾಣ ಶಂಕುಸ್ಥಾಪನೆ-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 2ನೇ ವಾರ್ಡ್ ನಲ್ಲಿ,ಶಾಸಕ ಎನ್.ವೈ.ಗೋಪಾಲಕೃಷ್ಣ 19ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
“ಬಾಲ ಚೈತನ್ಯ ಮಕ್ಕಳ ಆರೈಕೆ-ಕೇಂದ್ರ” ಉದ್ಘಾಟನೆ-
ಶಾಸಕ ಎನ್.ವೈ.ಗೋಪಾಲ್ ಕೃಷ್ಣರವರು ಕೂಡ್ಲಿಗಿ ಪಟ್ಟಣದಲ್ಲಿ,”ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರ” ಉದ್ಘಾಸಿದರು. ತಾಲೂಕಿನ ಅಪೌಷ್ಟಿಕಾಂಶ ಕೊರೆತೆಯಿಂದ ಬಳಲುತ್ತಿರುವ ಒಟ್ಟು 35 ಮಕ್ಕಳಿಗೆ,ಹಾಗೂ ಪ್ರತಿ ಮಗುವಿನ ಒಬ್ಬರು ಪೋಷಕರಿಗೆ,14 ದಿನ ಆರೈಕೆ ಕೇಂದ್ರದಲ್ಲಿ ಪೂರಕ ಪೌಷ್ಟಿಕಾಂಶ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.ತಾಪಂ ಇಓ ಜಿ.ಎಮ್.ಬಸಣ್ಣ,ಪಪಂ ಸದಸ್ಯರು,ವಿವಿದ ಜನಪ್ರತಿನಿಧಿಗಳು, ವಿವಿದ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಬಿಟ್ಟಿ ಪ್ರಚಾರದ ಚಪಲ,ಅಂತರ ಮಾಯ- ಶಾಸಕರು ಪ್ರಚಾರ ಪ್ರೀಯರಲ್ಲ ಆದರೆ ಅವರ ಕೆಲ ಹಿಂಬಾಲಕರಿಗೆ ಬಿಟ್ಟಿ ಪ್ರ‍ಚಾರದ ಚಪಲ ಎತೇಚ್ಚಿದೆ,ಅದರ ಪರಿಣಾಮ ಕಾರ್ಯಕ್ರಮಗಳಲ್ಲಿ ಕೊವಿಡ್ ನಿಯಮ ಪಾಲಿಸದೇ ಇರೊದಾಗಿದೆ.ಪ್ರತಿ ಸಂದರ್ಭದಲ್ಲಿಯೂ ಶಾಸಕರೊಂದಿಗೆ ತಾವು ಅಂಟಿಕೊಂಡೇ ಫೋಟೋ ತೆಗೆಸಿಕೊಳ್ಳೋ ಇವರು,ಈ ಮೂಲಕ ತಾವು ಬಿಟ್ಟಿ ಪ್ರಚಾರದ ಚಪಲಗಾರರು ತಾವೆಂದು ಅವರೇ ಪದೇ ಪದೇ ಸಾಬೀತು ಪಡೆಸುತ್ತಿದ್ದಾರೆ.
ಕಾಣೆಯಾದ ಮಕ್ಕಳ ಕಾಳಜಿ-
ಕೋವಿಡ್ ಸೋಂಕು ಭಯದ ವಾತಾವರಣವಿರುವ ಈ ಗಂಭೀರ ಪರಿಸ್ತಿತಿಯಲ್ಲಿ,ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಪೋಷಕರು ಜೊತೆಗೆ ಮಕ್ಕಳನ್ನು ಕರೆತರುವಂತೆ ತಿಳಿಸಲಾಗಿತ್ತು.ಆದರೆ ಮಕ್ಕಳಿಗೆ ಕನಿಷ್ಠ ಮಾಸ್ಕ್ ವ್ಯವಸ್ಥೆ ಇದ್ದಿಲ್ಲ ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಯಾರೊಬ್ಬರೂ ಸಹ ಕಿಂಚಿತ್ತು ಯೋಚಿಸಿಲ್ಲ,ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಸಿಬ್ಬಂದಿಯವರು ಕನಿಷ್ಠ ಜವಾಬ್ದಾರಿ ಮೆರೆದಿಲ್ಲ.ಮಕ್ಕಳಿಗೆ ಮಾಸ್ಕ್ ಹಾಕಿಸುವಷ್ಟು ಕನಿಷ್ಠ ಹೊಣೆಯನ್ನ ಇಲಾಖಾಧಿಕಾರಿಗಳು ನಿರ್ವಹಿಸಿಲ್ಲ.ಕೋವಿಡ್ ನಿಯಮ ಪಾಲನೆ ಬಗ್ಗೆ ಗಂಟಲು ಹರಿದು ಕೊಳ್ಳುತ್ತಿರುವ ವಾರಿಯರ್ಸ್, ರಸ್ತೆಯಲ್ಲಿ ನಿಯಮ ಉಲ್ಲಂಘನೆ ಕಾರಣಕ್ಕೆ ಸಾರ್ವಜನಿಕರಿಂದ ದಂಡ ವಸೂಲಿ ಮಾಡೋ ಮಹಾನೀಯರ ಹಾವಳಿ.ಇದಾವುದೂ ಇಲ್ಲಿಯ ಜನ ಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಅನ್ವಹಿಸುತ್ತಿಲ್ಲವಾ.!?, ಕೊರೊನಾ ಕಾಳಜಿ ಹಾಗೂ ಇಂತಹ ಕಾರ್ಯಕ್ರಮಗಳು ಕೇವಲ ದಾಖಲಾತಿ ಫೊಟೋ ಹಾಗೂ ಪ್ರಚಾರಕ್ಕೆ..ಸೀಮಿತ ವಾಯಿತಾ.!? ಎಂಬ ಪ್ರೆಶ್ನೆ ಪ್ರಜ್ಞಾವಂತರಲ್ಲಿ ಮೂಡದೇ ಇರದು.

 

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend