72ನೇ ಗಣರಾಜ್ಯೋತ್ಸವದಲ್ಲಿ ಎಲ್.ನಾಗರಾಜ: ಸ್ನೇಹ ಸೌಂದರ್ಯದಿಂದ ದೇಶ ಐಕ್ಯತೆ ಕಾಪಾಡಿ ..!!

Listen to this article

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ಪ್ರತಿಯೊಬ್ಬ ನಾಗರಿಕನು ಸ್ನೇಹ – ಸೌಹಾರ್ದ ದಿಂದ ಕೂಡಿ ಬಾಳುವ ಮೂಲಕ ದೇಶದ ಐಕ್ಯತೆ ಕಾಪಾಡಬೇಕೆಂದು ಉಪವಿಭಾಗಾಧಿಕಾರಿ ಎಲ್.ನಾಗರಾಜ ಹೇಳಿದರು. ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಣತಂತ್ರ ವ್ಯವಸ್ಥೆಯಲ್ಲಿ ಭಾರತ ದೇಶ ಇಡೀ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಗಳಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಜಗತ್ತೇ ಮೆಚ್ಚುವಂತಹದ್ದಾಗಿದೆ. ಭವ್ಯ ಭಾರ ತದ ಸಂವಿಧಾನವನ್ನು ಗೌರವಿಸುವ ಜತೆಗೆ ಜಾತಿ, ಧರ್ಮ, ಲಿಂಗಭೇದ ಎನ್ನದೆ ಜಾತ್ಯತೀತ ರಾಷ್ಟ್ರ ಕಟ್ಟುವಲ್ಲಿ ಸಮಾನತೆ ಮತ್ತು ಮಾನ ವೀಯ ಮೌಲ್ಯಗಳನ್ನು ಎತ್ತಿಹಿಡಿದು ಪ್ರತಿಯೊಬ್ಬರೂ ಸಾಮರಸ್ಯದಿಂದ ಕೂಡಿ ನಮ್ಮ ದೇಶಕ್ಕೆ ಸಂವಿಧಾನ ಜಾರಿಯಾದ ದಿನವಾದ ಜನವರಿ 26ನ್ನು ಗಣರಾಜ್ಯೋತ್ಸವವನ್ನಾಗಿ ಹೆಮ್ಮೆಯಿಂದ ಆಚರಿಸುತ್ತೇವೆ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾರತೀಯ ಸಂವಿಧಾನವು ಅತಿದೊಡ್ಡ ಸಂವಿಧಾನವಾಗಿದ್ದು, ಇದರಲ್ಲಿ 22 ಭಾಗಗಳಲ್ಲಿ 12 ವಿವರ ಪಟ್ಟಿ ಮತ್ತು 97 ತಿದ್ದುಪಡಿಗಳಾಗಿ ವಿಂಗಡಿಸಲಾಗಿರುವ 448 ಲೇಖನಗಳನ್ನು ಒಳಗೊಂಡಿದೆ. ಸಂಸ ತಿನ ಗ್ರಂಥಾಲಯದಲ್ಲಿ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಕೈ ಬರಹದಲ್ಲಿರುವ ಕ್ಯಾಲಿಗ್ರಫೆಡ್ ಪ್ರತಿಗಳನ್ನು ಸಂರಕ್ಷಿಸಲಾಗಿರುವ ಅವುಗಳನ್ನು ಒಟ್ಟಾಗಿ ಕೂಡಿ ಬಾಳಬೇಕು. ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಗೌರವಿಸುತ್ತಾ ಬಾಳಬೇಕೆಂದರು. ಜಿಪಂ ಕೈಗಾರಿಕೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡಿಗಿ ನಾಗರಾಜ ಮಾತನಾಡಿ, ದೇಶದ ಗಣತಂತ್ರ ವ್ಯವಸ್ಥೆ ಬಲಪಡಿಸುವಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನ ಬಹು ಮಹತ್ತರವಾದದು. ವಿವಿಧತೆಯಲ್ಲಿ ಏಕತೆ ಕಂಡಿರುವ ಭಾರತದಲ್ಲಿ ಸಾಮಾಜಿಕ ಪರಿವರ್ತನೆಗೆ ಸಂವಿಧಾನದ ಆಶಯಗಳು ಪೂರಕವಾಗಿವೆ. ಇದರೊಟ್ಟಿಗೆ ಎಲ್ಲ ವರ್ಗಕ್ಕೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿದೆ. ಪ್ರತಿಯೊಬ್ಬರೂ ಸಂವಿಧಾನ ಗೌರವಿಸುವ ಜತೆಗೆ ಸಂವಿಧಾನದ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ. ಚಿದಾನಂದಪ್ಪ ಮಾತನಾಡಿ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯತೆ ಹೋಗಲಾಡಿಸಿ ಎಲ್ಲ ವರ್ಗದವರು ಒಟ್ಟಾಗಿ ಕೂಡಿ ಬಾಳಬೇಕು. ಸರ್ವರ ಏಳಿಗೆಯನ್ನು ಬಯಸಿ ಸಂವಿಧಾನ ರಚನೆ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಅದ್ವಿತೀಯವಾದದು. ಎಲ್ಲ
ವರ್ಗದವರು ಕೂಡಾ ಸಂವಿಧಾನದ ಅಡಿಯಲ್ಲಿ ಬಾಳುತ್ತಿದ್ದೇವೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಡಾ.ಬಾಬಾ ಸಾಹೇಬ ಭಾವಚಿತ್ರ ಹಾಗೂ ಪೂಜಿಸುವ ಜತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಶಾಲಾ ಮಕ್ಕಳು ಪ್ರಭಾತ್ ಬೇರಿ ನಡೆಸಿ ನೋಡುಗರ ಗಮನ ಸೆಳೆದರು. ತಾ.ಪಂ ಅಧ್ಯಕ್ಷೆ ಬೋರಮ್ಮ, ಪ.ಪಂ ಅಧ್ಯಕ್ಷ ಪಿ. ಲಕ್ಷ್ಮಣ, ತಾ.ಪಂ ಇಒ ಪ್ರಕಾಶ, ಸಿಪಿಐ ಉಮೇಶ ನಾಯಕ, ಪಿಎಸ್‌ಐ ಎಂ.ಕೆ. ಬಸವರಾಜ, ಸಿಪಿಐ ಕಾರ್ಯದರ್ಶಿ ಜಾಫರ್ ಷರೀಫ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮನಾಥ, ಬಿ.ಜಿ.ಕೆರೆ ಜಿ.ಪಂ. ಸದಸ್ಯ ಡಾ.ಯೋಗೇಶ್ ಬಾಬು, ಹಾನಗಲ್ ಜಿ.ಪಂ. ಸದಸ್ಯ ಮುಂಡ್ರಗಿ ನಾಗರಾಜ್, ಗಾಯಿತ್ರಿ ಶಾಲೆ ಶಿಕ್ಷಕ ಓಬಣ್ಣ, ಪಟ್ಟಣದ ಪ್ರಮುಖರು ಭಾಗವಹಿಸಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend