ವಿವಿಧ ಗ್ರಾಮಗಳ ವಸತಿ ಯೋಜನೆಯ ಫಲಾನುಭವಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.!!

Listen to this article

ವರದಿ.ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಂಡಿರುವ ಫಲಾನುಭವಿಗಳಿಗೆ ಶೀಘ್ರವಾಗಿ ಭಾಕಿ ಹಣ ಮಂಜೂರು ಮಾಡುವಂತೆ ಸಾರ್ವಜನಿಕರಿಂದ ಸರ್ಕಾರಕ್ಕೆ ಮನವಿ ಪತ್ರವನ್ನು ನಿಡಲಾಯಿತು. ವಿವಿಧ ಗ್ರಾಮಗಳ ವಸತಿ ಯೋಜನೆಯ ಫಲಾನುಭವಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಮನವಿ ಸಲ್ಲಿಸಿರುವ ಫಲಾನುಭವಿಗಳು ತಾಲೂಕು ಸದಾ ಬರಗಾಲಕ್ಕೆ ತುತ್ತಾಗುವಂತೆ ತೀರಾ ಹಿಂದುಳಿದ ಪ್ರದೇಶವಾಗಿದೆ. ಬಹುತೇಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮುದಾಯಗಳೇ ಹೆಚ್ಚಾಗಿ ವಾಸ ಮಾಡುತ್ತಿರುವ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಇಂದಿರಾ ಅವಾಚ್, ಅಂಬೇಡ್ಕರ್ ಸೇರಿ ವಿವಿಧ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಸಹಾಯಧನ ನಿಲುಗಡೆಯಾಗಿದೆ. ಫಲಾನುಭವಿಗಳು ಸರ್ಕಾರದ ಸಹಾಯಧನ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಿಂದ ಈವರೆಗೂ ಹೊಸದಾಗಿಮನೆಗಳು ಮುಂಜೂರಾಗಿಲ್ಲ. ಪರಿಣಾಮ ವಸತಿ ರಹಿತ ಫಲಾನುಭವಿಗಳು ಗುಡಿಸಿಲಿನಲ್ಲಿ ವಾಸ ಮಾಡುವಂತಾಗಿದೆ. ಸಹಾಯಧನ ಬರದ ಪರಿಣಾಮ ಕೆಲವು ಫಲಾನುಭವಿಗಳು ಅಡಿಪಾಯ ಹಾಕಿದ್ದರೆ. ಇನ್ನು ಕೆಲವರು ಗೋಡೆಯನ್ನು ಕಟ್ಟಿ ಸರ್ಕಾರದ ಸಹಾಯಧನಕ್ಕೆ ಕಾದು ಕುಳಿತುಕೊಳ್ಳುವಂತಾಗಿದೆ. ಹಾಗಾಗಿ, ಸರ್ಕಾರ ಕೂಡಲೆ ವಸತಿ ಯೋಜನೆ ಫಲಾನುಭವಿಗಳ ನಿಲುಗಡೆಯಾಗಿರುವ ವಸತಿ ಯೋಜನೆಗಳ ಸಹಾಯಧವನ್ನು ಕೂಡಲೆ ಮುಂಜೂರು ಮಾಡಬೇಕು. ತಾಲೂಕಿಗೆ ಹೊಸದಾಗಿ ಮನೆಗಳನ್ನು ಮುಂಜೂರು ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೋನಸಾಗರ ಗ್ರಾಪಂ ಉಪಾಧ್ಯಕ್ಷ ಪಾಲಯ್ಯ, ನೇತ್ರನಹಳ್ಳಿ ಮಲ್ಲಯ್ಯ, ಕಾಮಯ್ಯ, ಅಣ್ಣಪ್ಪ, ತಿಪ್ಪೇಸ್ವಾಮಿ, ಗಂಗಾಧರ, ಜಿ.ಟಿ.ತಿಪ್ಪೇಸ್ವಾಮಿ, ಮುತ್ತಿಗಾರಹಳ್ಳಿ ಗ್ರಾಪಂ ಸದಸ್ಯ ಪಾಪಣ್ಣ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮತ್ತಿತರರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend