ಅಕ್ರಮಗಳ ತಾಣಗಳಾಗಿರುವ ಸಾರ್ವಜನಿಕ ಸ್ಥಳಗಳು,ಪೊಲೀಸರ ಮೌನ ಸಮ್ಮತಿ.!?

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಗುಡೇಕೋಟೆ:ಅಕ್ರಮಗಳ ತಾಣಗಳಾಗಿರುವ ಸಾರ್ವಜನಿಕ ಸ್ಥಳಗಳು,ಪೊಲೀಸರ ಮೌನ ಸಮ್ಮತಿ.!?*<>ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆಯಲ್ಲಿ,ಗ್ರಂಥಾಲಯ ಆವರಣ ಕೆಲ ಪೋಕರಿಗಳ ಅಕ್ರಮಗಳ ಅಡ್ಡೆಯಾಗಿದೆ. ಸಂಬಂಧಿಸಿದಂತೆ ಪೊಲೀಸರು ಮೌನವಹಿಸಿದ್ದಾರೆ ಎಂದು,ಗ್ರಾಮದ ಹಿರಿಯರು ಹಾಗೂ ಪ್ರಜ್ಞಾವಂತರು ಆಕ್ರೋಶವ್ಯಕ್ತಪಡಿಸಿದ್ದಾರೆ.ಗ್ರಾಮದ ಶಾಲೆಗಳ ಆವರಣ,ಪಾಳು ಬಿದ್ದಿರುವ ದೇವಸ್ಥಾನಗಳಲ್ಲಿ ಹಾಗೂ ಕೆಲ ಭಾಗದ ಅರಣ್ಯದಂಚಿನ ಪೊದೆಗಳಲ್ಲಿ.ಗ್ರಾಮದ ಮದ್ಯಭಾಗದಲ್ಲಿರುವ ಗ್ರಾಮ ಪಂಚಾಯ್ತಿ ಗ್ರಂಥಾಲಯ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ಜರುಗುತ್ತಿವೆ.ಮಟ್ಕ ಬುಕ್ಕಿಗಳ,ಇಸ್ಪೀಟ್ ಅಡ್ಡೆಕೋರರ ತಾಣವಾಗಿದೆ,ಮದ್ಯ ವ್ಯಸನಿಗಳ ಪಾಲಿಗೆ ಪಬ್ ಆಗಿದೆ.ಗ್ರಂಥಾಲಯದ ಅಂಗಳದಲ್ಲಿಯೇ ಮದ್ಯ ಹಾಗೂ ಧೂಮ ಸೇವನೆ ಇತ್ಯಾದಿ ಅನೈತಿಕ ಚಟುವಟಿಕೆಗಳು ಹಾಡು ಹಗಲೇ ಜರುಗುತ್ತಿವೆ.

ಗ್ರಂಥಾಲಯಕ್ಕೆ ಹೊಂದಿಕೊಂಡಿರುವ ಅಂಗಡಿ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ,ದೂಮಪಾನ ಮಾರಾಟ ಎಗ್ಗಿಲ್ಲದೆ ಸಾಗಿದ್ದು ಪೋಕರಿಗಳ ಉಪಟಳ ಮಿತಿ ಮೀರಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಂಥಾಲಯಕ್ಕೆ ಹೊಂದಿಕೊಂಡಂತೆ ಮದ್ಯ ಹಾಗೂ ದೂಮಪಾನ ಮಾರಾಟದಂಗಡಿ ಇದ್ದು,ಕಿಡಿಗೇಡಿ ಪುಂಡ ಪೋಕರಿಗಳ ತಾಣವಾಗಿದೆ,ಇದರಿಂದಾಗಿ ಓದುಗರ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ,ಮಹಿಳೆಯರು,ಮಕ್ಕಳು ವೃದ್ಧರು ಹಾಗೂ ಗ್ರಾಮದ ಹಿರಿಯರು ಗ್ರಂಥಾಲಯಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ಸಂಬಂದಿಸಿದಂತೆ ಹಲವು ಬಾರಿ ಪೊಲೀಸರಿಗೆ ತಿಳಿಸಿದ್ದಾಗ್ಯೂ ಅವರು ಮೌನವಹಿಸಿದ್ದು,ಅವರ ಅಸಹಾಯಕತೆ ತಮ್ಮಲ್ಲಿ ಹತ್ತು ಹಲವು ಅನುಮಾನಗಳನ್ನ ಮೂಡಿಸಿದೆ ಎಂದು ಗ್ರಾಮದ ಮುಖಂಡರು ಆರೋಪಿಸಿದ್ದಾರೆ.ಶಾಲೆ ಕಾಲೇಜು ಸಾರ್ವಜನಿಕ ಸ್ಥಳಗಳಿಂದ ಬಹು ದೂರದಲ್ಲಿರಬೇಕಾಗಿರುವ ದೂಮ ಹಾಗೂ ಮದ್ಯ ಸಾಮಾಗ್ರಿ ಅಂಗಡಿಗಳು,ಗುಡೇಕೋಟೆ ಗ್ರಾಮದಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ ಹಾಗೂ ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತದೆ ಎಂದು ಗ್ರಾಮದ ಪ್ರಜ್ಞಾವಂತರು ದೂರಿದ್ದಾರೆ.ಅಕ್ರಮ ನಿಯಂತ್ರಿಸುವ ಇಲಾಖೆಯೇ ಮೌನ ಸಮ್ಮತಿ ತಾಳೋ ಮೂಲಕ,ಪರೋಕ್ಷವಾಗಿ ಅಕ್ರಮಕೋರರಿಗೆ ಸ್ಪಂಧಿಸುತ್ತಿರುವ ಅವರ ನಡೆ ಶೋಚನೀಯವಾಗಿದ್ದು, ಸಂಬಂಧಿಸಿದಂತೆ ಇಲಾಖಾ ಉನ್ನತಾಧಿಕಾರಿಗಳು ಇಲ್ಲಿಯ ಅಧಿಕಾರಿಗಳಿಗೆ.ಕರ್ಥವ್ಯ ಪ್ರಜ್ಞೆ ಮೆರೆಯುವಂತೆ ಅವರಲ್ಲಿ ಜಾಗೃತಗೊಳಿಸುತ್ತಾರಾ.!? ಎಂಬ ಪ್ರೆಶ್ನೆ ಗ್ರಾಮಸ್ಥರಲ್ಲಿ ಮೂಡಿದೆ. ಪೊಲೀಸ್ ಇಲಾಖ‍ಾಧಿಕಾರಿಗಳು ಅಂಗಡಿಗಳನ್ನ ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕಿದೆ.ಈ ಮೂಲಕ ಅಕ್ರಮ ಚಟುವಟಿಕೆಗಳನ್ನ ಹತ್ತಿಕ್ಕುವ ಧೈರ್ಯ ಅವರು ತೋರಬೇಕಿದೆ, ಅಕ್ರಮ ತಡೆದು ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಸರ್ಕಾರ ಅವರಿಗೆ ಸಾಕಷ್ಟು ಸಂಬಳ ನೀಡಿ ನೇಮಿಸಿದೆ.ಸರ್ಕಾರದ ಹಾಗೂ ಇಲಾಖೆಯ ಪಿಎಸ್ಐರವರು ಪಡಿಸಬೇಕಿದೆ ಎಂದು ಗುಡೇಕೋಟೆಯ ವಿವಿದ ಸಂಘ ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದಾರೆ.ನಿರ್ಲಕ್ಷ್ಯ ತೋರಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಈ ಕುರಿತು ಅಗತ್ಯ ಸಾಕ್ಷ್ಯಧಾರಗಳ ಸಮೇತ ಖುದ್ಧು ದೂರು ಸಲ್ಲಿಸಲಾಗುತ್ತದೆ ಎಂದು ಗ್ರಾಮಸ್ಥರು ಈ ಮೂಲಕ ಎಚ್ಚರಿಸಿದ್ದಾರೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend