ಮೊಳಕಾಲ್ಮೂರು: ಯುವ ಕಲಾವಿದರಿಗೆ ಸೌಲಭ್ಯ ಕಲ್ಪಿಸಿ; ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ’ ಮನವಿ.!

Listen to this article

ಚಿತ್ರದುರ್ಗ: ಮೊಳಕಾಲ್ಮೂರು:(ಜೂ-2) ಕೋವಿಡ್-19 ಕಲಾವಿದರಿಗೆ ನೀಡುವ ಸಹಾಯಧನಕ್ಕೆ ಮಾನದಂಡಗಳನ್ನು ಬದಲಾಯಿಸಿ. ಯುವ ಕಲಾವಿದರಿಗೆ ಸೌಲಭ್ಯ ಕಲ್ಪಿಸಿ ಎಂದು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ ತಾಲೂಕ್ ಅಧ್ಯಕ್ಷರಾದ ಬಟ್ರಹಳ್ಳಿ ಧನಂಜಯ್ ಅವರು ಇಂದು ಮೊಳಕಾಲ್ಮೂರು ತಾಲೂಕು ಕಚೇರಿ ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ಅವರಿಗೆ ಇಂದು ಮನವಿ ಸಲ್ಲಿಸಿದರು. ಕೋವಿಡ್-19 2ನೇ ಅಲೆಯಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರದಿಂದ ರೂ.3000/- ಸಹಾಯಧನವನ್ನ ಘೋಷಿಸಿರುವುದು ಸ್ವಾಗತಾರ್ಹ ಸಂಗತಿ ಕಲಾವಿದರು ಸೌಲಭ್ಯ ಪಡೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೇವಾಸಿಂಧು ಮೂಲಕ ಅರ್ಜಿ ಕರೆದಿದ್ದು, ಕಲಾವಿದರು 35 ವರ್ಷ ಮೇಲ್ಪಟ್ಟು ಹಾಗೂ ಕನಿಷ್ಟ 10 ವರ್ಷ ಸೇವೆ ಸಲ್ಲಿಸಿರಬೇಕೆಂದು ಹಾಗೂ ಜೂನ್ 5 ರೊಳಗೆ ಕೊನೆಯ ದಿನಾಂಕ ವೆಂದು ನಿಗದಿ ಮಾಡಿರುವುದರಿಂದ ಕಲಾವಿದರಿಗೆ ತುಂಬಾ ಅನಾನುಕೂಲವಾಗಿದೆ. ಅದರಲ್ಲಿ ಯುವ ಕಲಾವಿದರಿಗೆ ವಯೋಮಾನದ ನಿಬಂಧನೆಯಿಂದ ಸಹಾಯಧನದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ರಂಗಭೂಮಿ, ಜಾನಪದ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ಸಂಸ್ಕೃತಿ ಸೇವೆಯಲ್ಲಿ ನಾಡಿನ ಬಹುತೇಕ ಯುವಕರು ಮಂಚೂಣಿಯಲ್ಲಿದ್ದಾರೆ. ಹಾಗೂ ಇಡೀ ಕುಟುಂಬದ ನಿರ್ವಹಣೆಯ ಹೊಣೆಗಾರಿಕೆಯು ಯುವ ಕಲಾವಿದರ ಮೇಲಿದ್ದು ಈಗಾಗಲೇ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದ ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕಲಾವಿದರಿಗೆ ಸರ್ಕಾರ ನಿಗಧಿಪಡಿಸಿರುವ ಸಹಾಯಧನದ ಮಾನದಂಡಗಳಿಂದ ಯುವ ಕಲಾವಿದರ ದೈನಂದಿನ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಹಾಗೂ ಗ್ರಾಮೀಣ ಭಾಗದ ಅನಕ್ಷರಸ್ಥ ಕಲಾವಿದರು ಅರ್ಜಿ ಸಲ್ಲಿಸಲು ಜೂನ್ 7 ರವರೆಗೆ ಲಾಕ್ಡೌನ್ ಇರುವುದರಿಂದ ಎಲ್ಲಿಗು ಹೋಗದೆ ಅರ್ಜಿ ಸಲ್ಲಿಸಲು ತುಂಬಾ ತೊಂದರೆಯಲ್ಲಿದ್ದಾರೆ. ಜೂನ್ 12ಕ್ಕೆ ಮುಂದೂಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು. ಕಲಾವಿದರ ಮಾಶಾಸನವನ್ನು ಕೂಡಲೇ ಬಿಡುಗಡೆ ಮಾಡುವ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಾನ್ಯ ಸಚಿವರು ಕಲಾವಿದರ
ಸಂಕಷ್ಟಕ್ಕೆ ಸ್ಪಂಧಿಸಬೇಕೆಂದು ಈ ಮೂಲಕ ಕೋರುತ್ತೇವೆ. ಇದೇ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರಾದ ಬಟ್ರಹಳ್ಳಿ ಧನಂಜಯ್, ಪರಮೇಶ್, ರಮೇಶ್, ಇನ್ನು ಇತರರು ಉಪಸ್ಥಿತರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend