ಹೂಡೇಂ: ಬಡವರ ಬದುಕನ್ನೇ ಲಾಕ್ ಮಾಡಿದ ಲಾಕ್​ಡೌನ್; ಕೆಲಸವಿಲ್ಲದೇ ಒಂದೊತ್ತು ಊಟಕ್ಕಾಗಿ ಪರದಾಟ.!!

Listen to this article

ವಿಜಯನಗರ: ಕೂಡ್ಲಿಗಿ ತಾಲೂಕಿನ ಗಡಿ ಭಾಗದ ಹೂಡೇಂ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜನಾಂಗದವರು ನಿರಂತರವಾಗಿ ದಿನಗೂಲಿ ಮಾಡುತ್ತಾ ಜೀವನವನ್ನು ನಡೆಸುತ್ತಿದ್ದಾರೆ. ಹೆಮ್ಮಾರಿ ಕೊರೋನಾ ಜನರ ಬಾಳಲ್ಲಿ ಕರಿನೆರಳಾಗಿ ಅನೇಕ ಬಡ ಕುಟುಂಬಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ ಒಬ್ಬೊಬ್ಬರದು ಒಂದೊಂದು ರೀತಿಯ ಕಣ್ಣೀರಿನ ಕಥೆ ಕ್ರೂರಿ ಕೊರೋನಾ ಒಂದೆಡೆ ದುಡಿದು ತಿನ್ನೋಣ ಅಂದ್ರೂ ಅಮಾಯಕ ಬಡ ಜನರನ್ನು ಬಿಡುತ್ತಿಲ್ಲ.

ಕೊರೋನಾ ಕರಿನೆರಳು ಅಮಾಯಕ ಜನರ ಮೇಲೆ ಬೀರಿರುವ ಪರಿಣಾಮ ಅಷ್ಟಿಷ್ಟಲ್ಲ ಕಷ್ಟಪಟ್ಟು ದಿನಗೂಲಿ ಮಾಡಿ ಜೀವನ ಮಾಡುತ್ತಿದ್ದ ಜನರು ಇದೀಗ ಲಾಕ್ ಡೌನ್ ನಿಂದ ಕಂಗಲಾಗಿ ಹೋಗಿದ್ದಾರೆ. ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಪರಿಶಿಷ್ಟ ಜಾತಿಯ ಜನಾಂಗದ ಬಡ ಕುಟುಂಬ ಇದೀಗ ಕೆಲಸವಿಲ್ಲದೇ ಒಂದೊತ್ತು ಊಟಕ್ಕಾಗಿ ಪರದಾಟ ತಪ್ಪಿಲ್ಲ.! ಹೌದು.. ತಾಲೂಕಿನ ಗಡಿ ಗ್ರಾಮವಾದ ಹೂಡೇಂ ಗ್ರಾಮದ ಎರಡನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ ಸುಮಾರು 70 ವರ್ಷಗಳ ಕಾಲ ಜೀವನವನ್ನು ನಡೆಸುತ್ತಿದ್ದಾರೆ.! ಇಲ್ಲಿ ಸುಮಾರು 80 ಮನೆಗಳು ಇದ್ದಾವೆ. ಸರಕಾರದಿಂದ ಇವರಿಗೆ ಅಲ್ಪ-ಸ್ವಲ್ಪ ಜಾಗವನ್ನು ಕೊಟ್ಟಿದ್ದಾರೆ. ಅದರಲ್ಲಿ ಮನೆಗಳನ್ನು ಕಟ್ಟಿಕೊಂಡು ಸುಮಾರು 70 ವರ್ಷಗಳಿಂದ ಇದರಲ್ಲಿ ಮಕ್ಕಳು, ಮೊಮ್ಮಕ್ಕಳು, ಕಿರಿ ಮೊಮ್ಮಕ್ಕಳು, ಇದರಲ್ಲಿ ಜೀವನವನ್ನು ನಡೆಸುತ್ತಿದ್ದಾರೆ.! ಇವರಿಗೆ ಸ್ವಂತ ಜಮೀನುಗಳು ಇಲ್ಲ.! ಬೆಂಗಳೂರು ತುಮಕೂರು ಕಡೆ ವಲಸೆ ಹೋಗಿ ದುಡಿದು ಸಂಸಾರವನ್ನು ಸಾಗಿಸಬೇಕು. ತಂದೆ ತಾಯಿಗಳು ವಲಸೆ ಹೋದರೆ ಮಕ್ಕಳ ಕಲಿಕಾ ಶಿಕ್ಷಣ ವ್ಯರ್ಥ.! ಈ ಜನಾಂಗದವರಿಗೆ 100 ಕ್ಕ 10 ಪರ್ಸೆಂಟ್ ಶಿಕ್ಷಣ ಇನ್ನು 90 ಪರ್ಸೆಂಟ್ ಅನಕ್ಷರಸ್ಥರು. ಬಡತನ ಇರುವುದರಿಂದ ತಂದೆ ತಾಯಿಗಳ ಜೊತೆಗೆ ಮಕ್ಕಳು ಸಹ ವಲಸೆ ಹೋಗುತ್ತಾರೆ ಇದರಿಂದ ಶಿಕ್ಷಣವು ಮಕ್ಕಳಿಗೆ ವ್ಯರ್ಥವಾಗುತ್ತದೆ. ಇಂದಿಗೂ 70 ವರ್ಷ ಆಯಿತು ಈಗ 21ನೇ ಶತಮಾನ ವಾಗಿದ್ದರು ಯಾವ ಅಧಿಕಾರಿಗಳು ಇಲ್ಲಿಯವರೆಗೂ ಅವರ ಕಷ್ಟ ಸುಖಗಳನ್ನು ವಿಚಾರಿಸಿಲ್ಲ, ಇದು ತಾಲೂಕಿನ ಗಡಿ ಭಾಗವಾಗಿರುವುದರಿಂದ ಅಧಿಕಾರಿಗಳು ನಿರ್ಲಕ್ಷ್ಯ.! 2020 ನೇ ಮಾರ್ಚ್ ತಿಂಗಳಲ್ಲಿ ಕೋರನ ಎಂಬ ಮಹಾಮಾರಿ ಸೋಂಕು ಹುಟ್ಟಿಕೊಂಡು ಬಡವರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲ್ಕು ಹಂತದಲ್ಲಿ ಲಾಕ್ ಡೌನ್ ಹಂತ(1. 21 ದಿನಗಳು, 2, 19 ದಿನಗಳು, 3. 14 ದಿನಗಳು, 4. 14 ದಿನಗಳು ಒಟ್ಟು 68 ದಿನಗಳ ಲಾಕ್‌ಡೌನ್ ಮಾಡಲಾಗಿತ್ತು) 2021 ಮಾರ್ಚ್ ತಿಂಗಳಿಂದ ಲಾಕ್‌ಡೌನ್ ಮಾಡಿ ಜನ ಸಾಮಾನ್ಯರ ದುಡಿಮೆ ಮತ್ತು ಜೀವನವನ್ನು ಕೆಳಹಂತಕ್ಕೆ ತಳ್ಳಿದ್ದಲ್ಲದೇ ಅದರ ಜೊತೆಗೆ ದೇಶದ ಆರ್ಥಿಕತೆ ನೆಲಕಚ್ಚಿದ್ದನ್ನು ಇಲ್ಲಿ ನೆನಪಿಸಬಹುದು. ದೇಶದ ಪ್ರತಿಯೊಬ್ಬ ನಾಗರಿಕರ ಜೀವನ ಮತ್ತು ಜೀವನೋಪಾಯವನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿತ್ತು. ಆದರೆ ಮೊದಲನೆಯ ಅಲೆಯಲ್ಲಿ ವಲಸೆ ಕಾರ್ಮಿಕರ
ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರಗಳಿಗೆ
ಸರಿಯಾದ ಯೋಜನೆ ಇಲ್ಲದಿರುವುದು ಬಡವರು ನಿರೀಕ್ಷೆಯಲ್ಲಿದ್ದಾರೆ.

ಆದರೆ ಎರಡನೇ ಅಲೆಯಲ್ಲಾದರೂ ವಲಸಿಗರ ಕುರಿತು ಯೋಜಿತ ನಿರ್ಧಾರಗಳನ್ನು, ಅವರ ಜೀವನಕ್ಕೆ ಭದ್ರತೆಯನ್ನು ಒದಗಿಸಬಹುದೆಂದು
ನಿರೀಕ್ಷಿಸಲಾಗಿತ್ತು. ಗಡಿ ಗ್ರಾಮಗಳಿಗೆ ನಿರ್ಲಕ್ಷ. ಕೊರೊನಾ ಲಾಕ್ ಡೌನ್ ಪ್ರಸ್ತುತ ಸಂದರ್ಭದಲ್ಲಿಯೂ ಸಂಬಂಧಪಟ್ಟ ಜಿಲ್ಲೆ ಹಾಗೂ ತಾಲೂಕು ಅಧಿಕಾರಿಗಳು ಒಂದು ಸಲ ಹಳ್ಳಿಯ ಕಡೆಗೆ ಭೇಟಿಕೊಟ್ಟು ಇಲ್ಲಿನ ಸಮಸ್ಯೆ ಕುಂದು-ಕೊರತೆಗಳನ್ನು ಪರಿಶೀಲನೆ ಮಾಡಬೇಕೆಂದು ತಮ್ಮಲ್ಲಿ ವಿನಂತಿ.. ಪರಿಶಿಷ್ಟ ಜಾತಿಯ ಜನಾಂಗದವರು ಕೇಳುಕೊಳ್ಳುತ್ತಿದ್ದೇವೆ……

ವರದಿ. ಮಂಜುನಾಥ್ ಹೂಡೇಂ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend