ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ 1,79,465 ಲಕ್ಷ ರೂಪಾಯಿ ಕೊರೊನಾ ಔಷಧಿ; ಮಾನವೀಯತೆ..!

Listen to this article

ಚಿತ್ರದುರ್ಗ: ಮೊಳಕಾಲ್ಮುರು/ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಅಗತ್ಯ ಔಷಧಿಗಳನ್ನು ನೀಡಿದ ಶ್ರೀ ಸತ್ಯನಾರಾಯಣ ಮೆಡಿಕಲ್ಸ್….. ಕೊರೊನಾ ಸೋಂಕು ಮನುಷ್ಯ ಪ್ರಾಣಿ ಗಳನ್ನು ಬೆಂಬಿಡದೆ ಕಾಡುತ್ತಿದ್ದು, ಜೀವನ ನಡೆಸಲಾಗದೆ ಮತ್ತು ಸಾಯಲಾಗದ ನರಳಾಡುತ್ತಿದ್ದಾರೆ. ಇದನು ತಡೆಗಟ್ಟಲು ಸರ್ಕಾರಗಳು ಲಾಕ್‌ಡೌನ್ ವಿಧಿಸಿ ಜನತೆಗೆ ದುಡಿಯಲು ಕೆಲಸವಿಲ್ಲದೆ ಮತ್ತು ತಿನ್ನಲೂ ಸಹ ಪರಡಾದುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ 2020ರಲ್ಲಿ ಮೊದಲನೆ ಅಲೆಯಾಗಿ ಪ್ರಾರಂಭವಾದ ಈ ಕೊರೊನಾ ಸೋಂಕು 2021ರಲ್ಲಿ 2ನೇ ಅಲೆಯಾಗಿ ಪರಿವರ್ತನೆ ಹೊಂದಿ ಬಹು ಬೇಗನೆ ಹರ ಡುತ್ತಿದ್ದು, ಮನುಷ್ಯ ಸಾವನ್ನಪ್ಪುವುದು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ತನಗೆಷ್ಟೇ ಇದ್ದರೂ ಇನ್ನೊಬ್ಬರಿಗೂ ಹಂಚಿ ತಿನ್ನಬೇಕು ಎಂಬ ನಾಣ್ಣುಡಿಯಂತೆ ಪಟ್ಟಣದ ಸತ್ಯನಾರಾಯಣ ಔಷಧಿ ಮಳಿಗೆಯವರು ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೋಸ್ಕರ ಅನುಕೂಲ ವಾಗಲೆಂದುಶ 1,79,465 ರೂ.ಗಳ ಔಷಧಿಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಡಾ.ಅಭಿನವ್‌, ಮನುಷ್ಯ ಎಷ್ಟೇ ದುಡಿದರೂ ತಿನ್ನುವುದು ತುತ್ತು ಅನ್ನನೇ ಸತ್ತ ಮೇಲೆ ಸೇರುವುದು ಮಣ್ಣಿನಲ್ಲೇಹಾಗಾಗಿ ಇಂತಹ ಕಷ್ಟ ಕಾಲದಲ್ಲಿ ಮನುಷ್ಯ ತನ್ನ ಕೈಲಾದ ಸಹಾಯವನ್ನು ಮಾಡುತ್ತಿರುವುದು ಅಭಿನಂದಿಸುವ ವಿಚಾರವಾಗಿದೆ ಎಂದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ.ಬೊಮ್ಮಣ್ಣ, ಸತ್ಯನಾರಾಯಣ ಔಷಧಿ ಮಳಿಗೆಯ ಮಾಲಿಕರಾದ ಶ್ರೀಕಾಂತ್, ಅರವಿಂದ್, ಮೇಘನ ಹಾಗೂ ನಂಜುಂಡ ಸ್ವಾಮಿ, ಗಂಗಾಧರ, ನಾಗೇಶ್, ಆಸ್ಪತ್ರೆಯ ಸಿಬ್ಬಂದಿ ಸಿದ್ದನಾಯಕ್ ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend