ನಾಗಬೇನಾಳ ಗ್ರಾಮಪಂಚಾಯಿತಿ ಆಡಳಿತ ವ್ಯವಸ್ಥೆಯಲ್ಲಿ ಬಡವರ ಬದುಕು ಬೀದಿ ಪಾಲು….

Listen to this article

ಪ್ರತಿಯೊಂದು ನಾಲ್ಕೈದು ಹಳ್ಳಿಗಳಿಗೊಂದು, ಅಲ್ಲಿರುವ ಹಳ್ಳಿಗಳು ಅಭಿವೃದ್ಧಿಯಾಗಲಿ ಅನ್ನುವ ಉದ್ದೇಶದಿಂದ ನಮ್ಮ ರಾಜ್ಯಸರ್ಕಾರ ಗ್ರಾಮಪಂಚಾಯಿತಿ ಎನ್ನುವ ಒಂದು ಪ್ರಾಥಮಿಕ ಹಂತದ ಆಡಳಿತ ವ್ಯವಸ್ಥೆಯನ್ನು ಮಾಡಿತು. ಆದರೆ ಇಲ್ಲಿ ನಡೆಯುವುದೇ ಬೇರೆ ರಾಜಕೀಯ ಅಂದರೆ, ಈ ಒಂದು ಗ್ರಾಮ ಮಟ್ಟದ ಜನಪ್ರತಿನಿದಿನಗಳು ಆಯ್ಕೆಯಾದ ತಕ್ಷಣ ಇನ್ನೇನು ನಾನೇ ರಾಜ್ಯದ ಮುಖ್ಯಮಂತ್ರಿಯೇನೋ ಅನ್ನುವ ರೀತಿಯಲ್ಲಿ ತಮ್ಮ ಉದ್ದಟತನದ ಒಂದು ರಾಜಕೀಯವನ್ನು ಮಾಡುತ್ತಾರೆ, ಅಂತವರಿಗೆ ಕೆಲ ತಳ, ಬುಡ ಏನುಗೊತ್ತಿಲ್ಲದ ಪ್ರಮೋಷನ್ ಗ್ರಾಮಪಂಚಾಯಿತಿ ಅಭಿವೃದ್ಧಿಅಧಿಕಾರಿಗಳ.
ಸಪೋರ್ಟ್ ಇವೆಲ್ಲವುದರಿಂದ ಇಲ್ಲಿ ಹಾಳಗುವುದು ಸಾರ್ವಜನಿಕರೇ ಇಲ್ಲಿ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಸರ್ಕಾರದ ಹಣ ಹಾಗೂ ಜನಸಾಮಾನ್ಯರ ಹಣವನ್ನು ಮನಸ್ಸಿಗೆ ಬಂದ ಹಾಗೆ ದುರುಪಯೋಗವನ್ನು ಮಾಡುತ್ತಾರೆ ಇದನ್ನೆಲ್ಲಾ ನೋಡಿಯು ನೋಡದೆ ರೀತಿಯಲ್ಲಿರುವ ಮೇಲಾಧಿಕಾರಿಗಳು ಇಂತಹ ಆಡಳಿತ ವ್ಯವಸ್ಥೆಯಲ್ಲಿ ಎಲ್ಲಿ ಉದ್ದಾರವಾಗುತ್ತಾರೆ ನಮ್ಮ ಗ್ರಾಮಗಳಲ್ಲಿನ ಜನಸಾಮಾನ್ಯರು.
ಅಂದರೆ ಈ ಒಂದು ಸಾಲಿನಲ್ಲಿ ನಿಲ್ಲುವ ಗ್ರಾಮಪಂಚಾಯಿತಿ ಇರುವುದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮ ಪಂಚಾಯ್ತಿಯ ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ ನಕಲಿ ಕಾಮಗಾರಿಗಳಿಗೆ ಹಾಜರಿ ಹಾಕಿ ಹಣ ಲೂಟಿ ಮಾಡಿದ್ದು ಕಂಡು ಬಂದಿರುತ್ತದೆ. ಗುತ್ತಿಗೆದಾರರು ಕೊಡುವ ಕಮಿಷನ್ ಗಾಗಿ ಕಣ್ಣು ಮುಚ್ಚಿ ಸಹಿ ಮಾಡಿ ಅಧಿಕಾರ ದುರ್ಭಳಕೆನ್ನು ಇಲ್ಲಿನ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಡಿಕೊಂಡಿದ್ದಾರೆ.
ಎನ್ನುವ ಸುದ್ದಿ ಈ ಒಂದು ಗ್ರಾಮಪಂಚಾಯಿತಿಗೆ ಸೇರಿದ ಹಳ್ಳಿಗಳಲ್ಲಿ ಹೋಗೆ ಹಾಡುತ್ತಿದ್ದು ಜನಸಾಮಾನ್ಯರ ನಿದ್ದೆ ಕೆಡಿಸಿದೆ.

ಅಂದರು ತಪ್ಪಾಗಲಾರದು, ಇಲ್ಲಿನ ಅಭಿವೃದ್ಧಿ ಅಧಿಕಾರಿ ಉದ್ಯೋಗ ಖಾತ್ರಿ ನರೇಗಾ ಯೋಜನೆಯನ್ನು ಬೇಕಾ ಬಿಟ್ಟಿ ದುರ್ಬಳಕೆ ಮಾಡಿಕೊಂಡು ಎಲ್ಲೋ ಬೇರೊಂದು ಕಡೆ ಕೆಲಸ ಮಾಡುವವರ ಹೆಸರಲ್ಲಿ ಸರ್ಕಾರದ ಹಣವನ್ನು ಜಮಾ ಮಾಡಿ ನಾನಲ್ಲ ಅವನು, ಇದ್ದ ಸಮಯದಲ್ಲಿ ನಡೆದ ಕಾಮಗಾರಿ ಎನ್ನುತ್ತಾ ಒಬ್ಬರ ಮೇಲೊಬ್ಬರು ಕುಂಟು ನೆಪವನ್ನು ಹೇಳುತ್ತಾ ಸಾರ್ವಜನಿಕರಿಗೆ ಚಳ್ಳೆಹಣ್ಣನ್ನು
ತಿನ್ನಿಸುತ್ತಾರೆ ಎನ್ನುತ್ತಾರೆ ಆ ಗ್ರಾಮಗಳ ಸಾರ್ವಜನಿಕರು ಮತ್ತು ಸಂಬಂಧಪಟ್ಟ ಗ್ರಾಮಗಳಲ್ಲಿ ಸ್ವಚ್ಛತೆಕೂಡ ಮರೀಚಿಕೆಯಾಗಿದ್ದು ಸಾರ್ವರ್ಥಿಕ ಕಾಯಿಲೆಗಳಿಗೆ ಆಹ್ವಾನವನ್ನು ನೀಡುತ್ತಿದ್ದು ಸಂಬಂಧಪಟ್ಟವರು ಇದರ ಬಗ್ಗೆ ಸ್ವಲ್ಪವೂ ಕಾಳಜಿವಹಿಸದಿರುವುದು ತುಂಬಾ ದುಃಖ್ಖದ ಸಂಗತಿ ಹಾಗೂ ಮೂಲ ಭೂತ ಸೌಕರ್ಯಗಳನ್ನು ನಿರ್ಲಕ್ಷಿಸುತ್ತಿದ್ದು SBM ಯೋಜನೆಯಡಿಯಲ್ಲಿ ಹಲವಾರು ಹೆಸರಲ್ಲಿ ಶೌಚಾಲಯದ ಹಣವು ಸಹ ದುರ್ಬಳಕೆಯಾಗಿದೆ ಎನ್ನುವುದು ಸಹ ಇಲ್ಲಿನ ಕೆಲವರ ಆರೋಪ, ಹಾಗೂ ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ರಸ್ತೆಗಳನ್ನು ಸಹ ಸರಿಯಾದ ರೀತಿಯಲ್ಲಿ ಮಾಡದೇ ಇರುವುದು ಹಾಗೂ ಇದೆಲ್ಲದರ ಹಣ ಮಾತ್ರ ದುರ್ಬಳಕೆಯಾಗಿದೆ ಎನ್ನುತ್ತಾರೆ ಕೆಲ ನೋವುಂಡ ಪ್ರಜ್ಞಾವಂತ ಸಾರ್ವಜನಿಕರು.

ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯ ಕುರಿತು ಒಂದಿಷ್ಟು ಮಾಹಿತಿ

ನೆನಪಿಟ್ಟುಕೊಳ್ಳಿ:ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆ ಎನ್ನುವುದು ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಬಡ ಅಕುಶಲ ಕೂಲಿಕಾರರಿಗಾಗಿ ತಂದಂತಹ ಕಾರ್ಯಕ್ರಮ.ಅಂದರೆ ಕೂಲಿ ಮಾಡುವವರಿಗಾಗಿ ಕೂಲಿ ನೀಡಲು.ಇದಕ್ಕಾಗಿ ನೀವು ಯಾವುದೇ ವ್ಯಾಯಾಮ ಮಾಡಬೇಕಿಲ್ಲ.ನಿಮ್ಮ ಗ್ರಾಮ ಪಂಚಾಯತಿಗೆ ಹೋಗಿ ಕಾರ್ಯದರ್ಶಿಯವರನ್ನು ಭೇಟಿಯಾಗಿ ಉದ್ಯೋಗ ಚೀಟಿ ಮಾಡಿಸಿಕೊಳ್ಳುವುದು.ವಾಸ್ತವವಾಗಿ ಅವರೇ ನಿಮ್ಮ ಹತ್ತಿರ ಬಂದು ಉದ್ಯೋಗ ಚೀಟಿ ಮಾಡಿಕೊಡಬೇಕು,ಇರಲಿ;ಅವರು ಲಾಡ್‌ಸಾಬುಗಳಲ್ಲ?ನೀವೇ ಹೋಗಿ.ಈ ಉದ್ದೋಗ ಚೀಟಿ ಪಡೆದ ಮೇಲೆ ನೀವು ಗ್ರಾಮ ಪಂಚಾಯತಿಯಲ್ಲಿ ಕೂಲಿ ಮಾಡಲು ಅರ್ಹತೆ ಪಡೆಯುತ್ತೀರಿ.ನಂತರ ನಿಮಗೆ ಕೂಲಿಯ ಅಗತ್ಯವಿದ್ದಾಗ ಪಂಚಾಯತಿಗೆ ಹೋಗಿ ಉದ್ಯೋಗದ ಬೇಡಿಕೆ ಇಡಿ,ಇದಕ್ಕಾಗಿ ಒಂದು ಫಾರ್ಮ್ ತುಂಬಿಕೊಡಬೇಕು;ನೀವು ಹಿಂಗನ್ನಿ,ಅವರು ತುಂಬಿಕೊಳ್ಳುತ್ತಾರೆ.ಅದರ ಒಂದು ನೆರಳು ಪ್ರತಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಿ,ನಿಗದಿತ ಹದಿನೈದು ದಿನಗಳಲ್ಲಿ ಅವರು ನಿಮಗೆ ಕೂಲಿ ಕೊಡುತ್ತಾರೆ.ಕೊಡದಿದ್ದರೆ ಅದು ಬೇರೆ ವಿಷಯ,ನೋಡಿಕೊಳ್ಳೋಣ.ಗ್ರಾಮ ಪಂಚಾಯತಿಯಿಂದ ಸದ್ಯ ಆ ಯೋಜನೆಯಿಂದ ದೊರೆಯುವ ಕೂಲಿ 289 ರೂಪಾಯಿ,ನೀವು ಭೋಳಿಮಕ್ಕಳ ಹೊಲಕ್ಕೆ ಹೋಗಿ ನೂರು ರೂಪಾಯಿ ನೂರೈವತ್ತು ರೂಪಾಯಿಗೆ ಕೂಲಿ ಮಾಡುತ್ತೀರಲ್ಲ,ಅದಕ್ಕಿಂತಲೂ ಎರಡು ಪಟ್ಟು ಹೆಚ್ಚು!ಗ್ರಾಮ ಪಂಚಾಯತಿ ಇದಕ್ಕಾಗಿ ತಯಾರಿಸಿದ ಕ್ರಿಯಾಯೋಜನೆಯಲ್ಲಿ ನಿಮಗೆ ವಿಫುಲವಾದ ಕೂಲಿಯ ಅವಕಾಶವಿದೆ.ನಿಮಗೆ ವಾರ್ಷಿಕ ನೂರು ದಿನಗಳ ಕೂಲಿಯನ್ನು ಆ ಅಧಿನಿಯಮದ ಅಡಿಯಲ್ಲಿ ನೀಡಲೇಬೇಕು,ಅದು ನಿಮ್ಮ ಹಕ್ಕು.ನೀವು ಪಡೆಯುತ್ತೀರಿ.

ಇನ್ನೊಂದು ಸಂಗತಿ:ಈ ಯೋಜನೆಗೂ ಗ್ರಾಮ ಪಂಚಾಯತಿಯ ಸದಸ್ಯರಿಗೂ ಯಾವುದೇ ಸಂಬಂಧವಿಲ್ಲ.ಈ ಯೋಜನೆಯಲ್ಲಿ ಅವರ ಯಾವ ಪಾತ್ರವೂ ಇಲ್ಲ.ಕ್ರಿಯಾಯೋಜನೆ ತಯಾರಿಸುವಾಗ ಅವರ ಸಭೆ ಕರೆಯಲಾಗುತ್ತದಾದರೂ ಅದು ಬೇಡಿಕೆ ಬಂದ ಕಾಮಗಾರಿಗಳ ಅಗತ್ಯತೆಯ ಬಗ್ಗೆ ಚರ್ಚಿಸಲಷ್ಟೇ!ಯಾರಾದರೂ ಸದಸ್ಯರು ಇವು ನಮ್ಮ ಕೆಲಸ ಎಂದರೆ ಗೊತ್ತಲ್ಲ?ಬಾಯಿ ಬಿಚ್ಚಿ!ಪಿಡಿಓ ಕೂಡಾ ಈ ಮಾತನ್ನು ಅನುಮೋದಿಸಿದರೆ ಮುಲಾಜಿಲ್ಲದೆ ದೂರು ನೀಡಿ,ಪತ್ರಿಕಾ ಸಂಪರ್ಕಗಳಿಗೆ ವಿಷಯ ಮುಟ್ಟಿಸಿ.ನನ್ನ ಪತ್ರಿಕೆಗೂ ಈ ಬಗ್ಗೆ ದೂರು ನೀಡಿ.

ಉದ್ಯೋಗಖಾತ್ರಿ ಯೋಜನೆಯ ಅನುಷ್ಠಾನ ಸಂಪೂರ್ಣವಾಗಿ ಪಿಡಿಓ ಅವರು ನಿರ್ವಹಿಸಬೇಕು.ಅದು ಸರ್ಕಾರದ ಕೆಲಸ.ಮತ್ತೊಮ್ಮೆ ಹೇಳುತ್ತಿದ್ದೇನೆ:ಉದ್ಯೋಗಖಾತ್ರಿ ಯೋಜನೆಗೂ ಗ್ರಾಮ ಪಂಚಾಯತಿ ಸದಸ್ಯರಿಗೂ ಯಾವುದೇ ಸಂಬಂಧವಿಲ್ಲ.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ:ನೀವು ಈ ಯೋಜನೆಯ ಸಂಪುರ್ಣ ಮಾಹಿತಿಯನ್ನು ಗ್ರಾಮೀಣ ಪ್ರದೇಶದ ಅಕುಶಲ ಕೂಲಿ ಕಾರ್ಮಿಕರಿಗೆ ತಿಳಿಸಬೇಕು.ಇದರ ಸರಿಯಾದ ನಿರ್ವಹಣೆ ಮಾಡುವ ಮೂಲಕ ಯೋಜನೆಯ ಸರಿಯಾದ ಅನುಷ್ಠಾನಕ್ಕೆ ಕಾರಣವಾಗಬೇಕು.ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಬೇಕು.ಕಣ್ಮುಚ್ಚಿ ಯಾವನ್ಯಾವನೋ ನಾಲಾಯಕ್, ಅಧಿಕಾರಿಗಳು ಎನ್‌ಎಮ್‌ಆರ್ ಗೆ ಸಹಿ ಹಾಕಿ ಅಂದ ತಕ್ಷಣ ಹಾಕಬೇಡಿ,ಲೇಬರ್ ಯಾರು,ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಜವಬ್ದಾರಿ ನಿಮ್ಮದು.ಮೊದಲು ಅರ್ಹ ಕಾರ್ಮಿಕರನ್ನು ಗುರುತಿಸಿಕೊಳ್ಳಿ.ಮತ್ತು ಕೆಲಸವನ್ನು ನೀಡಿ.ದೊಣ್ಣೆ ನಾಯಕರ ಹಿತಾಸಕ್ತಿಗೆ ಬಲಿಯಾಗಬೇಡಿ.ಕಾಲ ಬದಲಾಗಿದೆ.ಯಾರಾದರೂ ಸುಮ್ಮನಿರುತ್ತಾರೇನೋ?ಜನ ಆಕ್ರೋಶ ಪತ್ರಿಕೆ ಸುಮ್ಮನಿರದು.ಈ ಬಗ್ಗೆ ಎಳೆ ಎಳೆಯಾಗಿ ಮಾಹಿತಿಯನ್ನು,ಭ್ರಷ್ಟಾಚಾರವನ್ನು ಜನರ ಮುಂದೆ ಮತ್ತು ಸರ್ಕಾರದ ಮುಂದೆ ಬಿಡಿಸಿ ಇಡುತ್ತದೆ.ಜನಾಂದೋಲನಕ್ಕೆ ಕಾರಣವಾಗುತ್ತದೆ.ಎಂದು

ತಿಳಿತಲ್ಲ?ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆ ಬಡ ಕೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ರೈತರ ಹಿತಾಸಕ್ತಿ ಮತ್ತು ನಿಸರ್ಗದ ರಕ್ಷಣೆಯ ಉದ್ದೇಶದಿಂದ ರೂಪಿಸಲಾದದ್ದು.ಈ ಕೋವಿಡ್ ಸಂಕೀರ್ಣ ಸಂದರ್ಭದಲ್ಲಿ ಸುರಕ್ಷಿತವಾಗಿ ಈ ಯೋಜನೆಯ ಉಪಯೋಗ ಪಡೆದುಕೊಳ್ಳಿ.ಅದು ಏನೇ ಇರಲಿ, ಆದರೆ ಈ ಒಂದು ಗ್ರಾಮಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು ಒಂದು ವರುಷದಲ್ಲಿ 3 ರಿಂದ 4 ಜನರು ಬದಲಾವಣೆಯಾಗುತ್ತರೆಯಂತೆ ಆಗಿದ್ದರೆ ಏನಿರಬಹುದು ಇಲ್ಲಿನ ಮಹಿಮೆಯಂಬುದು ಇನ್ನು ಸಹ ಯಾರಿಗೂ ತಿಳಿಯದಾಗಿದೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು ಮತ್ತು ಆಶ್ರಯ ಮನೆಯನ್ನು ಬಡವರಿಗೆ ಮಾಡಿಕೊಡಬೇಕೆಂದರೆ ಇಲ್ಲಿರುವ ಸದಸ್ಯರುಗಳಿಗೆ ಕೈ ಬಿಸಿಮಾಡಿದಾಗ ಮಾತ್ರ, ಕಾರ್ಯ ಆಗುವುದು ಅನ್ನುತ್ತಾರೆ ಇಲ್ಲಿನ ಬಡಜನರು ಎಂಥಹ “ತುಘಲಕ್ “ಆಡಳಿತ ಅಲ್ವಾ ಇನ್ನಾದರೂ ಇಲ್ಲಿನ ಬಡಜನರ ಬದುಕು ಅಸನಾಗಲಿ ಎಂಬುದು ನಮ್ಮ ಒಂದು ಹೆಬ್ಬಾಯಕೆ ಹಾಗೂ ಇಲ್ಲಿನ ತಪ್ಪಿತಸ್ತರಿಗೆ ಇಲಾಖೆಯ ಮೇಲಾಧಿಕಾರಿಗಳು ಸರಿಯಾದ ಶಿಕ್ಷೆಯನ್ನು ಕೊಡುವುದಕ್ಕೆ ಮುಂದಾಗಲಿ ಎಂಬುದು ನಮ್ಮ ಆಶಯ….

ವರದಿ. ಮುಕ್ಕಣ್ಣ ಹುಲಿಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend