ಪ್ರತಿಭಟನೆ ಹಮ್ಮಿಕೊಂಡಿರುವುದು aiutuc. ವತಿಯಿಂದ, ಆನ್ಲೈನ್ ಪ್ರತಿಭಟನೆ…!!!

Listen to this article

ಬಿಸಿಯೂಟ ನೌಕರರಿಗೆ ಕೋವಿಡ್ ಪ್ಯಾಕೇಜ್ ನೀಡಲು ಆಗ್ರಹಿಸಿ ಆನ್ಲೈನ್ ಪ್ರತಿಭಟನೆ.
ಬಳ್ಳಾರಿ. ಗಣಿ ನಗರಿ ಬಳ್ಳಾರಿಯಲ್ಲಿ ಇಂದು ಬಿಸಿಯೂಟ ನೌಕರರಿಗೆ ಕೋವಿಡ್ ಫ್ಯಾಕೇಜ್ಗೆ ಆಗ್ರಹಿಸಿ ಆನ್ಲೈನ್ ಪ್ರತಿಭಟನೆ ಮಾಡಲಾಯಿತು.
ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಕಳಿಸಲಾಯಿತು.
ಈ ಸಂದರ್ಭದಲ್ಲಿ ಬಿಸಿಯೂಟ ನೌಕರರ ಸಂಘದ s.g. ನಾಗರತ್ನಮ್ಮ ಅವರು ಮಾತನಾಡುತ್ತಾ ತಮ್ಮ ಸರ್ಕಾರ ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ಯಾಕೇಜ್ ಘೋಷಿಸುವಾಗ ಸ್ಕೀಮ್ ನೌಕರರಾದ ಆಶಾ ಹಾಗೂ ಅಂಗನವಾಡಿ ನೌಕರರಿಗೆ ವಿಸ್ತರಿಸುವುದನ್ನು ನಮ್ಮ ಸಂಘಟನೆ ಸ್ವಾಗತಿಸುತ್ತದೆ
ಆದರೆ ಅದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಅತ್ಯಂತ ಕನಿಷ್ಠ ವೇತನದಲ್ಲಿ ದುಡಿಯುತ್ತಿರುವ ಬಿಸಿಊಟ ನೌಕರರನ್ನು ಕೈ ಬಿಟ್ಟಿರುವುದಕ್ಕೆ ಅತ್ಯಂತ ವಿಷಾದವನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ
ಕರುನಾ ಮಹಾಮಾರಿ ಪಿಡುಗಿಗೆ ಅತ್ಯಂತ ಹೆಚ್ಚು ಜೀವ ಹಾಗೂ ಜೀವನೋಪಾಯವನ್ನು
ಕಳೆದುಕೊಂಡಿರುವುದು
ದುಡಿಯುವ ವರ್ಗ, ಹಾಗೆಯೇ ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವವರು
ಬಿಸಿಯೂಟ ನೌಕರರು.
ಇವರಿಗೆ ಉಪಕಸುಬು ಇಲ್ಲದೆ ಅವರ ಕುಟುಂಬ ತತ್ತರಿಸಿಹೋಗಿದೆ.
ಹಾಗಾಗಿ, ತಾವು ಇವರಿಗೆ ಸಹ, ಸಂಕಷ್ಟದ ಪ್ಯಾಕೇಜನ್ನು ವಿಸ್ತರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಕೆಳಕಂಡ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು 18.6.2021. ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದ್ದು,ಈ ಮನವಿ ಪತ್ರ ಸಲ್ಲಿಸುತ್ತಿದ್ದೇವೆ.
ಬೇಡಿಕೆಗಳು.:
1. ಆಶಾ ಅಂಗನವಾಡಿ ಸ್ಕೀಮ್ ನೌಕರರಿಗೆ ನೀಡಿದ ಪ್ಯಾಕೇಜ್ ಬಿಸಿಯೂಟ ನೌಕರರಿಗೆ ನೀಡಿ.
2. ಜೀವನ ಯೋಗ್ಯ ವೇತನ ನೀಡಿ.
3. ವಾರ್ಷಿಕ 12 ತಿಂಗಳ ವೇತನ ಪಾವತಿಸಿ.
4. ಶಾಲೆ ಆರಂಭಕ್ಕೂ ಮುನ್ನ ನೌಕರರಿಗೆ ಉಚಿತ ಲಸಿಕೆ ನೀಡಿ.
5. ಸೇವಾ ಭದ್ರತೆ ಆರೋಗ್ಯ ಸೌಲಭ್ಯ, ಒದಗಿಸಲು ಕ್ರಮ ಕೈಗೊಳ್ಳಿ.
ಸುದ್ದಿ. A. ಯೇಸುದಾಸ್.
ಜಿಲ್ಲಾ ಕಾರ್ಯದರ್ಶಿ. ಎಐಯುಟಿಯುಸಿ. ಬಳ್ಳಾರಿ.
ವರದಿಗಾರರು.

ಎಂಎಲ್ವೆಂಕಟೇಶ್. ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend