ಎಳ್ಳ ಅಮಾವಾಸ್ಯೆ ಮಹತ್ವ ಸಾರಿದ ಕಲಾವಿದ ಗವಿಶಿದ್ಧಯ್ಯ…!!!

Listen to this article

ಎಳ್ಳ ಅಮಾವಾಸ್ಯೆ ಮಹತ್ವ ಸಾರಿದ ಕಲಾವಿದ ಗವಿಶಿದ್ಧಯ್ಯ

ಚೆರಗ ಚೆಲ್ಲತ್ತಾ ಹಾಡಿ ಸಂಭ್ರಮಿಸಿದ ಚಿನ್ನರು

ಮೇವುಂಡಿ.
ಚೆರಗ ಚೆಲ್ಲೋನ ನಾವು ಚೆರಗ ಚೆಲ್ಲೋನ ….ಹೆಜ್ಜೆ ಹಾಕುತ ಬಂದೆವೋ ಸುಗ್ಗಿಯ ಮಾಡುತ ನಲಿದೇವೋ…ಹೀಗೆ ಅನೇಕ ಹಾಡುಗಳು ಕೇಳಿ ಬಂದಿದ್ಧು ಮೇವುಂಡಿ ಗ್ರಾಮದ ಹೊಲದಲ್ಲಿ.. ಎಳ್ಳ ಅಮಾವಾಸ್ಯೆ ನಿಮಿತ್ಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಮಕ್ಕಳಿಗೆ ನಮ್ಮ ಹಬ್ಬಗಳ ಮಹತ್ವ ಸಾರಲು ಹಮ್ಮಿಕೊಂಡ ಎಳ್ಳ ಅಮಾವಾಸ್ಯೆಯ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಎಳ್ಳ ಅಮವಾಸ್ಯೆಯ ಮಹತ್ವ ಸಾರುವ ಅನೇಕ ಗೀತೆಗಳನ್ನು ಹಾಡಿದರು. ಕಲಾವಿದರೊಂದಿಗೆ ಧ್ವನಿಗೊಡಿಸಿದ ಚಿನ್ನರು ಜನಪದ ಗೀತೆಗಳನ್ನು ಹಾಡಿ ನಲಿದರು .

ವಿಶೇಷ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ವಿ ಸಂಕನೂರು ಮಾತನಾಡಿ ಸರ್ವತೋಮಕ ಅಭಿವೃದ್ಧಿಗೆ ಶಿಕ್ಷಣವೇ ಪೂರಕವಾಗಿದ್ಧು ಎಲ್ಲರು ಶಿಕ್ಷಣ ಪಡೆಯುವುದು ಕಡ್ಡಾಯವಾಗಿದೆ ಇದರ ಜೊತೆಗೆ ಪಠ್ಯತರ ಚಟುವಟಿಕೆಗಳು ಅವಶ್ಯವಾಗಿದ್ಧು ಹಬ್ಬ ಉತ್ಸವಗಳು ಮೌಲ್ಯಗಳನ್ನು ಸಾರುತ್ತವೆ ಎಂದು ಮಕ್ಕಳೊಂದಿಗೆ ಬೆರತು ಅನೇಕ ವಿಷಯಗಳನ್ನು ಹಂಚಿಕೊಂಡರು.

ಮುಖಂಡರಾದ ಶ್ರೀ ಬಸವರಾಜ ಕೊರ್ಲಹಳ್ಳಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಗುರಿ ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 

ಶಿವಕುಮಾರ ಬ್ಯಾಳಿ ಪ್ರಸ್ತಾವಿಕವಾಗಿ ಮಾತನಾಡಿದರು

 

ಇ ಸಂದರ್ಭದಲ್ಲಿ ಪಿ.ಡಿ.ಒ ಸಂತೋಷ ಹೂಗಾರ, ಸಂತೋಷ ಮಸೂತಿ, ಕೊಟ್ಟಪ್ಪ ಬ್ಯಾಳಿ,ಮಹಾಂತೇಶ ಹಲವಾಗಲಿ,ಎಮ್.ಎಸ್ ಗೂಗಾರ,ಹಾಲಪ್ಪ ಕೊರ್ಲಹಳ್ಳಿ, ಸುರೇಶ ಅಡ್ನೂರು ಯಲ್ಲಪ್ಪ ಕುಂಬಾರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ದಿನಾಂಕ-2-1-2022.

ಶಿವಕುಮಾರ ಬ್ಯಾಳಿ-9901885856…

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend