ಪೊಲೀಸ್ ತನಿಖೆ ವೇಳೆಯಲ್ಲಿ ರೇಖಾ ಕದಿರೇಶ್ ಹತ್ಯೆಗೆ ಅಸಲಿ ಕಾರಣ ಬಹಿರಂಗ…!!!

Listen to this article

ಬೆಂಗಳೂರು, ಜೂನ್ 26: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆಯ ಅಸಲಿಯತ್ತು ಬಹಿರಂಗಗೊಂಡಿದೆ.

ರೇಖಾ ಕದಿರೇಶ್ ಕೊಲೆಗೆ ಪೀಟರ್ ಪ್ಲಾನ್ ಮಾಡಿರುವುದನ್ನು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಪೀಟರ್‌ನನ್ನು ರೇಖಾ ಕದಿರೇಶ್ ನಿರ್ಲಕ್ಷಿಸಿದ್ದಕ್ಕೆ ಕೊಲೆಗೆ ಪ್ರಮುಖ ಕಾರಣವಾಗಿದೆ.

ಮಾಜಿ ಕಾರ್ಪೋರೇಟರ್ ರೇಖಾ ಪತಿ ಕದಿರೇಶ್‌ನನ್ನು ಕೊಲೆ ಮಾಡಿಸಿದ್ದೇ ರೇಖಾ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪೀಟರ್ ಹೇಳಿಕೆ ಕೇಳಿ ಪೊಲೀಸರು ಬೆಚ್ಚಿಬಿದ್ದಿದ್ದು, ಮಾಜಿ ಕಾರ್ಪೋರೇಟರ್ ಹತ್ಯೆ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಪೀಟರ್‌ನ ಆ ಒಂದು ಹೇಳಿಕೆ ತನಿಖೆಯ ದಿಕ್ಕನ್ನೇ ಬದಲಿಸಿದೆ.

ಕಳೆದ ಒಂದೂವರೆ ವರ್ಷದಿಂದ ಪೀಟರ್‌ನನ್ನು ರೇಖಾ ಕದಿರೇಶ್ ದೂರವಿಟ್ಟಿದ್ದರು. ಪೀಟರ್ ಇತ್ತೀಚೆಗೆ ಮನೆಕಟ್ಟಲು ಮುಂದಾಗಿದ್ದು, ಈ ವೇಳೆ ಹಣದ ಸಹಾಯಕ್ಕಾಗಿ ರೇಖಾ ಬಳಿ ಪೀಟರ್ ಹಣ ಕೇಳಿದ್ದನು.

ಪೀಟರ್ ಎಷ್ಟೇ ಕೇಳಿದರೂ, ಬೇಡಿದರೂ ರೇಖಾ ಒಂದೇ ಒಂದು ರೂಪಾಯಿ ಕೊಟ್ಟಿರಲಿಲ್ಲ. ಕದಿರೇಶ್‌ನ ಹಂತಕರನ್ನು ಕೊಂದು ಸ್ವಾಮಿನಿಷ್ಠೆ ತೋರಿದ್ದ ಪೀಟರ್‌ನನ್ನೇ ರೇಖಾ ನಿರ್ಲಕ್ಷಿಸಿದ್ದಳು ಎನ್ನಲಾಗಿದೆ.

ಪೀಟರ್ & ಟೀಂನ ಬಿಟ್ಟು ವಿನೋದ್ ಹಾಗೂ ಆತನ ಹುಡುಗರನ್ನು ರೇಖಾ ಜೊತೆಗಿಟ್ಟುಕೊಂಡಿದ್ದರು. ಅಲ್ಲದೇ ಇತ್ತ ಪೀಟರ್ ಹಾಗೂ ಕದಿರೇಶ್‌ನ ಸಂಬಂಧಿಗಳನ್ನನ್ನು ನಿರ್ಲಕ್ಷಿಸಿದ್ದರು. ಅಷ್ಟರಲ್ಲಿ ಮಾಲಾ ಸೊಸೆ ಪೂರ್ಣಿಮಾರನ್ನು ಚುನಾವಣೆಗೆ ನಿಲ್ಲಿಸಲು ಕದಿರೇಶ್ ಫ್ಯಾಮಿಲಿ ಸಜ್ಜಾಗಿತ್ತು. ಆದರೆ ಇದಕ್ಕೊಪ್ಪದೆ ತಾನೆ ಚುನಾವಣೆಗೆ ನಿಲ್ಲುವುದಾಗಿ ರೇಖಾ ಕದಿರೇಶ್ ಹೇಳಿಕೆ ಕೊಟ್ಟಿದ್ದರು.

ಹತ್ಯೆಗೆ ಪೀಟರ್ ಕೊಟ್ಟ ಆ ಕಾರಣಗಳು

1) ಕದಿರೇಶ್ ಹತ್ಯೆ ಮಾಡಿಸಿದ್ದೇ ರೇಖಾ

2) ಕದಿರೇಶ್ ಹತ್ಯೆ ಮಾಡಿದ ಆರೋಪಿಗಳಿಗೆ ಬೇಲ್ ಕೊಡಿಸಿದ್ದು ಇದೇ ರೇಖಾ

3) ರೇಖಾ ಕಾರ್ಪೋರೇಟರ್ ಆದ ಬಳಿಕ ಪೀಟರ್ ಟೀಂನ ದೂರವಿಟ್ಟಿದ್ದ ರೇಖಾ

4) ಮನೆ ಕಟ್ಟುವ ವೇಳೆ ಹಣ ಕೇಳಿದ್ರೆ ರೇಖಾ ಕಡೆಯಿಂದ ನೋ ರೆಸ್ಪಾನ್ಸ್

5) ಕಳೆದ ಒಂದೂವರೆ ವರ್ಷದಿಂದ ಒಂದೇ ಒಂದು ರೂಪಾಯಿ ನೀಡದ ರೇಖಾ

6) ಬೇರೊಬ್ಬನ ಜೊತೆ ರೇಖಾಗೆ ಆತ್ಮೀಯ ಒಡನಾಟವಿದ್ದಿದ್ದು, ಕದಿರೇಶ್‌ನನ್ನು ಅಣ್ಣನಂತೆ ನೋಡಿದ ಪೀಟರ್‌ಗೆ ಈ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿತ್ತು.

ಪೀಟರ್ ಕೊಟ್ಟ ಈ ಎಲ್ಲಾ ಹೇಳಿಕೆಯಿಂದ ತನಿಖೆಗೆ ಮತ್ತೊಂದು ಆಯಾಮ ಸಿಕ್ಕಿದೆ. ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸಂಬಂಧ ಕದಿರೇಶ್ ಅಕ್ಕ ಮಾಲಾನನ್ನು ಕೂಡಾ ವಿಚಾರಣೆ ಮಾಡಲಾಗಿದೆ.

ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮತ್ತೊರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೀಟರ್‌ಗೆ ಸಹಾಯ ಮಾಡಿದ್ದ ರಾಜೇಶ್‌ನನ್ನು ಬಂಧಿಸಿದ್ದಾರೆ.

31ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ ಹೊರಬಂದಿದ್ದು, ಸ್ಟಿಫನ್, ಅಜಯ್, ಪುರುಷೋತ್ತಮ್‌ಗೆ 14 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮಾಲಾ ಮತ್ತು ಮಾಲಾ ಸೊಸೆ ಪೂರ್ಣಿಮಾ ವಿಚಾರಣೆ ನಡೆಸಲಾಗುತ್ತಿದ್ದು, ಬೆಳಗ್ಗೆಯಿಂದಲೂ ವಿಚಾರಣೆ ಪೊಲೀಸರು ಮಾಡುತ್ತಿದ್ದಾರೆ. ಇದೀಗ ಇಬ್ಬರನ್ನು ಬೇರೆಡೆಗೆ ಶಿಫ್ಟ್ ಮಾಡಿದ್ದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಪೊಲೀಸರು ನಡೆಸಲಿದ್ದಾರೆ.

ವರದಿ. ನಳಿನಿ ಬೆಂಗಳೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend