ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಎಐಡಿವೈಒ ಯ 56 ನೇ ಸಂಸ್ಥಾಪನಾ ದಿನಾಚರಣೆ…!!!

Listen to this article

ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಎಐಡಿವೈಒ ಯ
56 ನೇ ಸಂಸ್ಥಾಪನಾ ದಿನಾಚರಣೆ.
ಬಳ್ಳಾರಿ..ಗಣಿ ನಗರದಲ್ಲಿ ಇಂದು, ಎ ಐ ಡಿ ವೈ ಒ, ವತಿಯಿಂದ 56ನೇ ಸಂಸ್ಥಾಪನಾ ದಿನಾಚರಣೆ
ಆಚರಿಸಿದರು.
ಈ ದೇಶದ ಯುವಕರ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಡುವ ನಿಟ್ಟಿನಲ್ಲಿ,
ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್,
ಅಶ್ವಾ ಕುಲ್ಲಾಖಾನ್, ಮುಂತಾದ ಕ್ರಾಂತಿಕಾರಿಗಳ
ವಿಚಾರಗಳನ್ನು ಯುವಜನರಲ್ಲಿ ಬೆಳೆಸುವ ಸದುದ್ದೇಶದಿಂದ ಕಾಮ್ರೇಡ್
ಶಿವದಾಸ ಘೋಷ್ ರವರು
ಜೂನ್ 26, 1966 ರಂದು
ಅಖಿಲ ಭಾರತ ಪ್ರಜಾಸತ್ತಾತ್ಮಕಯುವಜನ ಸಂಘಟನೆ, ಎಐಡಿವೈಒ,ಯನ್ನು, ಸ್ಥಾಪಿಸಿ, ಇಂದಿಗೆ 56ವರ್ಷಗಳು ಸಂದಿದೆ.
ಇಂದು ಬಳ್ಳಾರಿಯ ಜಿಲ್ಲಾ ಕಚೇರಿಯಲ್ಲಿ ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ರಾಮಕೃಷ್ಣ ಬಳ್ಳಾರಿಯವರ
ಎಐಡಿವೈಒ ಸಂಸ್ಥಾಪಕರಾದ ಕಾಮ್ರೆಡ್ ಶಿವದಾಸ ಘೋಷ್, ರವರ
ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ, ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಜಿಲ್ಲಾ ಕಾರ್ಯದರ್ಶಿಯಾದ, ಜಗದೀಶ್ ನೇಮ್ ಕಲ್,
ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯ ಉಪಾಧ್ಯಕ್ಷರಾದ, ಶ್ರೀ ರಾಮಕೃಷ್ಣ ಅವರು ಮಾತನಾಡುತ್ತಾ, ಸ್ವಾತಂತ್ರ ಬಂದು, ಇಪ್ಪತ್ತೈದು ವರ್ಷಗಳು ಕಳೆದರೂ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಿಲ್ಲ.
ಕಾರಣವೇನೆಂದರೆ, ನಮ್ಮನ್ನಾಳುವ ಸರ್ಕಾರಗಳ ಬಂಡವಾಳಶಾಹಿ ಪರವಾದ
ನೀತಿ ನಿಲುವುಗಳು ಅದರಲ್ಲಿಯೂ ಖಾಸಗೀಕರಣ – ಉದಾರೀಕರಣ ಜಾಗತೀಕರಣ ನೀತಿಗಳಿಂದ
ವರ್ಷದಿಂದ ವರ್ಷಕ್ಕೆ,
ವಿದ್ಯಾರ್ಥಿ ಯುವಜನರನ್ನು ಹಾಳುಮಾಡಲು ಅಶ್ಲೀಲ ಸಿನಿಮಾ, ಅಶ್ಲೀಲ ಸಾಹಿತ್ಯ
ಮಧ್ಯ, ಮಾದಕ ವಸ್ತುಗಳನ್ನು ಎಗ್ಗಿಲ್ಲದೆ ಮಾರಲು ಅನುಮತಿ ನೀಡಿ
ನೈತಿಕವಾಗಿ ಕೆಳಕ್ಕುರುಳಿ ಸುತ್ತಾ ಬಂದಿದೆ,
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ ಯುವಜನರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.
ಈ ಪರಿಸ್ಥಿತಿಯನ್ನು ಮೊದಲೇ ಮನಗಂಡಿದ್ದ,
ಕಾಮ್ರೆಡ್ ಶಿವದಾಸ ಘೋಷ್, ರವರು ನಮ್ಮ ದೇಶದಲ್ಲಿ, ಒಂದು ಕ್ರಾಂತಿಕಾರಿ ಯುವಜನ ಸಂಘಟನೆಯ ಕತೆಯಿದೆ ಎಂದು, “*ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಎಐಡಿವೈಒ”
ಯನ್ನು ಸ್ಥಾಪಿಸಿದರು.
56 ವರ್ಷಗಳಲ್ಲಿ ಹಲವಾರು ಯುವಜನರು ಹೋರಾಟಗಳನ್ನು ಸಂಘಟಿಸುತ್ತಾ , ಉನ್ನತ ವೈಚಾರಿಕತೆಯನ್ನು, ಯುವಜನರಲ್ಲಿ ಬೆಳೆಸುತ್ತಾ ಬಂದಿದೆ.
ಈ ಹೋರಾಟವನ್ನು ಗಮನಿಸಿ ಆಕರ್ಷಿತರಾದ ಸಾವಿರಾರು ಯುವಕರು ಬಳ್ಳಾರಿಯಲ್ಲೂ, ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ.
ಹಾಗೆಯೇ ಇಂದು ಬಳ್ಳಾರಿ ಜಿಲ್ಲೆ ಸಮಿತಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಜನರನ್ನು ಉದ್ದೇಶಿಸಿ ಮುಂದಿನ ಹೋರಾಟಗಳಿಗೆ ಕರೆ ನೀಡಲಾಯಿತು.
ಸುದ್ದಿ ಇವರಿಂದ. ಜಗದೀಶ್ ನೆಮಕಲ್ ಜಿಲ್ಲಾ ಕಾರ್ಯದರ್ಶಿ, ಎ ಐ ಡಿ ವೈ ಓ. ಬಳ್ಳಾರಿ.


ವರದಿಗಾರರು,ಎಂಎಲ್ ವೆಂಕಟೇಶ್ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend