ಕೂಡ್ಲಿಗಿ:”ಅಂದರ್ ಬಾಹರ್-5 ಜನ ಅಂದರ್”..ನಗದು ಹಣ14ಬೈಕ್ ವಶಕ್ಕೆ,ಮದ್ಯ ಸೇವನೆ ಲಘು ಪ್ರಕರಣ ದಾಖಲು…!!!

Listen to this article

ಕೂಡ್ಲಿಗಿ:”ಅಂದರ್ ಬಾಹರ್-5 ಜನ ಅಂದರ್”..ನಗದು ಹಣ14ಬೈಕ್ ವಶಕ್ಕೆ,ಮದ್ಯ ಸೇವನೆ ಲಘು ಪ್ರಕರಣ ದಾಖಲು- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಪೊಲೀಸ್ ಠಾಣಾ ಸರಹದ್ದಿನ ತಾಲೂಕಿನ ಶಿವಪುರ ಗ್ರಾಮದ ಬಳಿ, ಶ್ರೀಕಲ್ಯಾಣ ವೀರಭದ್ರ ದೇವಸ್ಥಾನದ ಹತ್ತಿರ. ಸಾರ್ವಜನಿಕ ಸ್ಥಳದಲ್ಲಿ 16 ಜನರ ತಂಡವೊಂದು, ಇಸ್ಪೀಟ್ ಜೂಜು ಆಟದಲ್ಲಿ ತೊಡಗಿರುವ ಸಂದರ್ಭದಲ್ಲಿ. ಖಚಿತ ಮಾಹಿತಿಯನ್ನಾಧರಿಸಿ ಕೂಡ್ಲಿಗಿ ಪೊಲೀಸರು ಪಿಎಸೈ ಧನುಂಜಯ ಕುಮಾರವರ ನೇತೃತ್ವದಲ್ಲಿ, ದಾಳಿ ನಡೆಸಿದ್ದಾರೆ ದಾಳಿ ವೇಳೆ 11ಜನರು ಹೋಡಿಹೋಗಿದ್ದು. 5ಜನರು ಸಿಕ್ಕಿಬಿದ್ದಿದ್ದು ಅವರನ್ನು ಹಾಗೂ ಅವರಿಂದ ಇಸ್ಪೀಟೆಲೆಗಳು, 14ಮೋಟಾರು ಬೈಕ್ ಗಳು, 8100₹ನಗದು ಹಣ ಜೊತೆಗೆ ಜೂಜಿಗೆ ಬಳಸಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಬಂಧಿಸಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 5ಜನ ಜೂಜು ಕೋರರು ಪೊಲೀಸ್ ವಶದಲ್ಲಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. *ದಾಳಿಯ ವೇಳೆ ಬೇಳೆ ಬೇಯಿಸಿಕೊಳ್ಳೋರು..*- ಇಸ್ಪೀಟ್ ಮಟ್ಕಾ ಜೂಜು ಅಡ್ಡೆ ಮೇಲೆ ದಾಳಿ, ಹಾಗೂ ಮಧ್ಯ ಅಕ್ರಮ ಮಾರಾಟದ ಸಂದರ್ಭದಲ್ಲಿ. ಪ್ರಾಮಾಣಿಕ ಅಧಿಕಾರಿಗಳು ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿದಾಗ ಮತ್ತು ಮಾಡುವ ಸನ್ನಿವೇಶ ಇದ್ದಾಗ. ಇದನ್ನರಿತ ಕೆಲ ಪಾಕಂಡಿ ಭ್ರಷ್ಟ ಪೊಲೀಸ್ ಸಿಬ್ಬಂದಿಯವರೇ ಜೂಜು ಕೋರರಿಗೆ, ಮೊಬೈಲ್ ಮೂಲಕ ಅಥವಾ ಜೂಜುಕೋರರ ಆಪ್ತರಿಗೆ. ಅಥವಾ ಅಡ್ಡೆಯನ್ನ ನಿರ್ವಹಿಸುತ್ತಿರುವವರಿಗೆ, ಗುಪ್ತವಾಗಿ ಮಾಹಿತಿ ನೀಡೋ ಮೂಲಕ ಅವರನ್ನು ಬಚಾವ್ ಮಾಡುತ್ತಿದ್ದಾರೆ ಎಂಬ ಗುಮಾನಿಗಳು ಕೇಳಿಬಂದಿವೆ. ಅದಕ್ಕಾಗಿ ಜೂಜು ಕೋರರಿಂದ ಇಂತಿಷ್ಟು ಭಕ್ಷೀಸು ಪಡೆಯುತ್ತಾರೆ ಎನ್ನಲಾಗುತ್ತಿದೆ, ಕೆಲವು ಸಾರಿ ದಾಳಿ ಮಾಡಿದಾಗ ಕೆಲ ಭ್ರಷ್ಟ ಪೊಲೀಸ್ ಸಿಬ್ಬಂದಿ ಅವರಲ್ಲಿ ತಮಗೆ ಅನುಕೂಲಕ್ಕೆ ಇರೋ ಬಂಧಿತನಿಂದ. ಅನಾಮತ್ತಾಗಿ ಪ್ರಕರಣದಿಂದ ಬಿಡುಗಡೆಗೆ ಇಂತಿಷ್ಟು ಹಣ ಮಾತನಾಡಿಕೊಂಡು, ಆಕಸ್ಮಾತ್ ಕೈ ತಪ್ಪಿ ಹೋಡಿ ಹೋದ ಎಂದೋ.. ಅಥವಾ ಆತನ ವಾಹನ ಹಾಗೂ ಆತನು ಕೈಗೆ ಸಿಕ್ಕೇ ಇಲ್ಲವೇನೋ, ಸಿಕ್ಕಿದ್ದು ಆಕಸ್ಮಾತ್ ಕೈಯಿಂದ ತಪ್ಪಿಸಿ ಕೊಂಡು ಓಡಿ ಹೋದವನು. ಆತನು ತಮಗೆ ಅಪರಿಚಿತನೆಂದೋ ಎಂಬಿತ್ಯಾದಿಯಾಗಿ ಬಿಂಬಿಸಿ, ಆರೋಪಿತನನ್ನು ಪ್ರಕರಣದಿಂದ ಕೈ ಬಿಡಲಾಗುತ್ತದೆ ಎಂಬ ಆರೋಪಗಳು ಕೇಳಿಬಂದಿವೆ. ಇದು ಸಾರ್ವಜನಿಕರಲ್ಲಿ ಪ್ರಜ್ಞಾವಂತರಲ್ಲಿ ಚರ್ಚೆಯಾಗುತ್ತಿರುವ ವಾಸ್ತವ ಸಂಗತಿಯಾಗಿದೆ, ಅಧಿಕಾರಿಗಳು ದಾಳಿ ಮಾಡುತ್ತಾರೆ ಅದನ್ನು ಅವರ ಕೆಲ ಭ್ರಷ್ಟ ಸಿಬ್ಬಂದಿಯಿಂದಲೇ ವಿಫಲಗೊಳಿಸುವ ವಿಪಲ ಯತ್ನ ನಡೆಯುತ್ತಿದೆ ಎನ್ನಲಾಗಿದೆ. ದಾಳಿಯ ನಂತರ ಕೆಲ ಸಂದರ್ಭದಲ್ಲಿ ಆರೋಪಿಗಳಿಂದ ಹಣ ಕುಧುರಿಸಿಕೊಂಡು, ಆರೋಪಿಗಳನ್ನು ಕೈಬಿಟ್ಟು ಹಣ ಗಳಿಸುವುದನ್ನೇ ರೂಡಿಗೊಳಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೂಡ್ಲಿಗಿ ಪೊಲೀಸ್ ಠಾಣೆಯ ಕೆಲ ಭ್ರಷ್ಟರ ಮೇಲಿದೆ. ಸಂಬಂಧಿಸಿದಂತೆ ಅಧಿಕಾರಿಗಳೇ ಎಚ್ಚೆತ್ತುಕೊಳ್ಳಬೇಕಿದೆ, ಇಲ್ಲದಿದ್ದಲ್ಲಿ, “ಕೋತಿ ತಾನು ತಿಂದು ಓತನ ಮುಸುಡಿಗೆ ಹಚ್ಚಿತಂತೆ”. ಎಂಬಂತೆ ಬೆರೆಳೆಣಿಕೆಯ ಭ್ರಷ್ಟ ಪಾಕಂಡಿ ತಮ್ಮ ಸಿಬ್ಬಂದಿಯಂದಿಯಿಂದಾಗಿ, ಅದಿಕಾರಿಗಳು ಮಾತ್ರವಲ್ಲ ಇಡೀ ಪೊಲೀಸ್ ಠಾಣೆ ಸಾರ್ವಜನಿಕರ ದೃಷ್ಟಿಯಲ್ಲಿ. ಭ್ರಷ್ಟರ ಕೂಪದಂತೆ ಗೋಚರಿಸುತ್ತದೆ, ಮದ್ಯವರ್ತಿಗಳ ಆವಾಸ ಸ್ಥಾನ ಎಂಬಿತ್ಯಾದಿ ಕುಹಕಗಳಿಗೀಡಾಗಿ ನಗೆಪಾಟಲಿಗೀಡಾಗಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳು ಅಗತ್ಯ ಆಡಿಯೋ ವೀಡಿಯೋ ಕಾಲ್ ರೆಕಾರ್ಡ್ ರಗಳು ಲಭ್ಯಗಿದ್ದು, ಪರಿಸ್ಥಿತಿ ಸರಿಯಾಗದಿದ್ದಲ್ಲಿ ಇಲಾಖೆಯ ಉನ್ನತಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಮತ್ತು ಪತ್ರಿಕಾ ಮಾಧ್ಯಮದವರ ಕಚೇರಿಗಳಿಗೆ ರವಾನಿಸಲಾಗುವುದು, ಇದು ಇಲಾಖೆಯ ಪರ ನಮ್ಮ ಕಳಕಳಿಯಾಗಿದೆ ಎಂದು ಹೋರಾಟಗಾರರು ಈ ಮೂಲಕ ಎಚ್ಚರಿಸಿದ್ದಾರೆ…

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ-ಲಘು ಪ್ರಕರಣ ದಾಖಲು- ಕೂಡ್ಲಿಗಿ ಪಿಎಸೈ ಧನುಂಜಯ ಕುಮಾರವರು ಗಸ್ತಿನಲ್ಲಿದ್ದಾಗ, ಪಟ್ಟಣದ ಬಳ್ಳಾರಿ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ. ಮದ್ಯ ಸೇವನೆಯಲ್ಲಿ ನಿರತರಾಗಿದ್ದ ನಾಲ್ವರನ್ನು ಒಶಕ್ಕೆ ಪಡೆದು, ಕಾನೂನು ತಿಳುವಳಿಕೆ ಮೂಡಿಸಿದ್ದು. ಅವರ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಪಾನ ನಿಷೇಧ ಕಾಯ್ದೆ ಉಲ್ಲಂಘನೆ ಆರೋಪದಡಿ,ಕೂಡ್ಲಿಗಿ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ..

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend