ರಸ್ತೆಕಾಮಗಾರಿಯನ್ನು ತಡೆದು ಗ್ರಾಮಸ್ಥರಿಂದ ತೀವ್ರ ಆಕ್ರೋಶ…!!!

Listen to this article

ಕಳಪೆ ಕಾಮಗಾರಿ
ಜಮಖಂಡಿ ತಾಲೂಕಿನ ಗದ್ಯಾಳ್ ಗ್ರಾಮ ದಲ್ಲಿ ರಸ್ತೆ ಕೆಲಸ ನಡಯತಿದ್ದು ಊರಿನ ಜನರು ಕೆಲಸ ತಡೆಗಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಸಿದ್ದಾರೆ. ಕಾರಣ ಗದ್ಯಾಳ್ ಗ್ರಾಮದಿಂದ ಕುಮಟೇ ಮಾರ್ಗವಾಗಿ ಬಬಲೇಶ್ವರ್ ಗೆ ಹೋಗುವ ರಸ್ತೆ ಗದ್ಯಾಳ್ ಊರಿನ ಸ್ವಲ್ಪ ದೂರ ಒಂದು ಹಳ್ಳ ಇದ್ದುದರಿಂದ ಜೋರಾಗಿ ಮಳೆ ಬಂದರೇ ಹಳ್ಳ ತುಂಬಿ ಹರಿಯುತ್ತೆ ರಸ್ತೆ ಮೇಲೆ ನೀರು ಬಂದು ಸಾರ್ವಜನಿಕರಿಗೆ ಹಾಗೂ ರೈತರಿಗೆ ಹೋಗಲು  ಮತ್ತು  ಬರಲು ತುಂಬಾ ಕಷ್ಟ್ ಆಗ್ತಾ ಇದೆ ಮೊದಲು ಹಳ್ಳದಲ್ಲಿ ಸೇತುವೆ ನಿರ್ಮಿಸಬೇಕು ನಂತರ ಡಾಂಬರಿಕರಣ ಮಾಡಬೇಕು ಎಂದು ಶಂಕರ್ ಗಿರೀಮಲ್ಲಪ್ಪ ದೊಡಮನಿ ಹೇಳಿದರು. ಮತ್ತು ರಸ್ತೆ ಕಾಮಗಾರಿ ಸುಸಜ್ಜಿತ ರೀತಿಯಲ್ಲಿ ನಡೆದು ಸಾರ್ವಜನಿಕರಿಗೆ ಅನುಕೂಲ ಹಾಗೂ ಉತ್ತಮವಾದ ಒಂದು ಗುಣಮಟ್ಟದಲ್ಲಿ ನಡೆಯಲಿ ಎಂದು ಗ್ರಾಮದ ಗ್ರಾಮಸ್ಥರು ತಮ್ಮ ಒಂದು ಬೇಡಿಕೆಯನ್ನು ಇಟ್ಟರು ಹಾಗೂ ಹಲವು ಕಡೆಗಳಲ್ಲಿ ನೆಪಮಾತ್ರಕ್ಕೆ ಮಾತ್ರ  ಡಾಂಬರ್ ರಸ್ತೆಗಳಿದ್ದು, ಅವುಗಳನ್ನು ನಿರ್ಮಾಣ ಮಾಡಿ ಕೆಲವೇ ದಿನಗಳಲ್ಲಿ ವಾಹನ ಸವರಾರು, ರಸ್ತೆಯನ್ನು ಉಡುಕಿ ತಮ್ಮ ವಾಹನಗಳನ್ನು ಚಲಾಯಿಸುವ ಪರಿಸ್ಥಿತಿ ಎದುರಾಗಿದೆ ಅಂತಹ ಸ್ಥಿತಿಯನ್ನು. ತಪ್ಪಿಸಿ ಉತ್ತಮವಾದ ರಸ್ತೆನಿರ್ಮಾಣ ಮಾಡಿ ಜನಸಾಮಾನ್ಯರಿಗೆ ಒಳಿತನ್ನು ಮಾಡಲಿ ಎಂಬುದು ನಮ್ಮ ಆಶಯ….

ವರದಿ. ಹಜರತ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend