ಕೊಪ್ಪಳದ ಮಿನಿ ರಂಗನತಿಟ್ಟು,ಗಿಣಿಗೇರಿ ಕೆರೆ.

Listen to this article

ವರದಿ.ದಾವಲ್ ಮಲ್ಲಿಕ್

ಕೊಪ್ಪಳದ ಮಿನಿ ರಂಗನತಿಟ್ಟು:ಗಿಣಿಗೇರಿ ಕೆರೆ.

ಗವಿಶ್ರೀಗಳ ಸಂಕಲ್ಪದಂತೆ ಕಳೆದ ಎರಡು ವಾರದಿಂದ ಸಾಗಿರುವ 248 ಎಕರೆ ವಿಸ್ತೀರ್ಣದ ಗಿಣಿಗೇರಿ ಕೆರೆ ಪುನಶ್ಚೇತನ ಕಾರ್ಯದ ಪ್ರಗತಿ ಉತ್ತಮ ರೀತಿಯಲ್ಲಿ ಸಾಗಿದ್ದು ದಿನದಿಂದ ದಿನಕ್ಕೆ ಕೆರೆಯ ಚಿತ್ರಣ ಬದಲಾಗುತ್ತಿದೆ.ಸುತ್ತಮುತ್ತಲಿನ ಗ್ರಾಮಗಳ ಜಲಸಂಪರ್ಕ ಕೊಂಡಿಯಾದ ಈ ಕೆರೆಯ ಪುನಶ್ಚೇತನ ದಿಂದ ಮಳೆಗಾಲದಲ್ಲಿ ಅತೀ ಹೆಚ್ಚು ನೀರು ಸಂಗ್ರಹವಾಗಿ ರೈತರಿಗೆ ವರವಾಗುವುದು ಸ್ಪಷ್ಟವಾದ ಸಂಗತಿ.

ಶ್ರೀಗಳ ದೂರದೃಷ್ಟಿ,ಸಮಾಜಮುಖಿ ‌ಕಾಳಜಿ,ಪರಿಸರದ ಮೇಲಿನ ಮಮಕಾರ ಅನನ್ಯ.ಅವರ ಒಂದು ‌ಕರೆಗೆ ಇಡೀ ಕೊಪ್ಪಳ ಜಿಲ್ಲಾಡಳಿತ, ಜನಪ್ರತಿನಿಧಿಗಳು ಪಕ್ಷಾತೀತವಾಗಿ ದೇಣಿಗೆ,ಸಹಕಾರ ನೀಡುವುದರ ಮೂಲಕ ಶ್ರೀಗಳ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.ಮಾಧ್ಯಮ ಮಿತ್ರರು ವರದಿ ಮಾಡುವುದರ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ಕಾರ್ಖಾನೆಯ ಮಾಲೀಕರು,ಕೋಳಿಫಾರಂ,ಇಟ್ಟಂಗಿ ಭಟ್ಟಿಯವರು,ಜೆಸಿಬಿ,ಟಿಪ್ಪರ್ ಮಾಲಕರು ಸಹಕಾರ ನೀಡಿದ್ದಾರೆ,ಗಿಣಿಗೇರಿ ಗ್ರಾಮಸ್ಥರು,ಸಂಘ ಸಂಸ್ಥೆಗಳು, ಅಧಿಕಾರಿಗಳು, ಸಮಾಜಸೇವಕರು,ಶಿಕ್ಷಕರು,ಆರೋಗ್ಯ ಇಲಾಖೆ,ಇನ್ನಿತರ ಇಲಾಖೆ,ದಾನಿಗಳು,ಯುವಕರು, ಸುತ್ತಮುತ್ತಲಿನ ಗ್ರಾಮಸ್ಥರು ದೇಣಿಗೆ ನೀಡಿ ಕಾಮಗಾರಿಗೆ ಸಾಥ್ ನೀಡಿದ್ದಾರೆ.ದಿನನಿತ್ಯವು ಶ್ರಮದಾನಿಗಳಿಗೆ ಅನ್ನ ಸಂತರ್ಪಣೆ ಸಾಗಿದೆ‌.ಯುವಕರ ಪಡೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ.ಕೋಟಿ ರೂಪಾಯಿ ಹಣದಲ್ಲಿ ನಡೆಯಬೇಕಾದ ಈ ಕಾಮಗಾರಿ ಶ್ರೀಗಳ, ದಾನಿಗಳ,ಸಂಘ ಸಂಸ್ಥೆ, ರೈತರ,ಸಾರ್ವಜನಿಕರ ತನು ಮನ ಧನ ಸಹಕಾರದಿಂದ ಸಾಗಿದ್ದು ಹೆಮ್ಮೆ, ಒಂದು ಮಾದರಿ.

ಸಿಪಿಆಯ್ ವಿಶ್ವನಾಥ ಹಿರೇಗೌಡರ, ಎಸ್ ಪಿ ಟಿ.ಶ್ರೀಧರ, ಡಿವಾಯ್ ಎಸ್ ಪಿ ವೆಂಕಟಪ್ಪ ನಾಯಕ,ನಿಂಗಪ್ಪ ಪಿಎಸ್ ಆಯ್ ಕುಷ್ಟಗಿ,ಎಎಸ್ ಆಯ್ ಮುಂತಾದ ಪೋಲಿಸ್ ಅಧಿಕಾರಿಗಳು ತಮ್ಮ ಒಂದು ತಿಂಗಳ ವೇತನವನ್ನು ಕೆರೆಯ ಕಾರ್ಯಕ್ಕಾಗಿ ನೀಡಿದ್ದಾರೆ.ಪ್ರತಿನಿತ್ಯ ಕಾಮಗಾರಿಯು ನಡೆಯುವಾಗ ಅಗತ್ಯ ಸೇವೆ,ಸಹಕಾರ ನೀಡಿದ್ದಾರೆ.

ಶ್ರೀಗಳ ಕನಸಿನಂತೆ ಇಲ್ಲಿ ವಾಯುವಿಹಾರಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡುವುದು.ಪ್ರಾಣಿ ಪಕ್ಷಿಗಳ ವಾಸಕ್ಕೆ ಅನುಕೂಲ ಕಲ್ಪಿಸುವುದು.ರೈತರ ಜಮೀನುಗಳಿಗೆ ನೀರನ್ನು ಒದಗಿಸುವುದು.ಪ್ರವಾಸ ತಾಣವನ್ನಾಗಿ ಮಾಡುವುದು.

ಈಗಾಗಲೇ ಗಿಣಿಗೇರಿ ಕೆರೆಯಲ್ಲಿ ಪಕ್ಷಿಗಳು ಆಗಮಿಸುತ್ತಿವೆ,ಶ್ರೀಗಳ ಮಾತಿನಂತೆ ಇದು ಕೊಪ್ಪಳದ ಬಹು ದೊಡ್ಡ ಕೆರೆ.ಇದು ಈ ಭಾಗದ ಮಿನಿ ತುಂಗಭದ್ರಾ, ಮಿನಿ ರಂಗನತಿಟ್ಟು ಎಂದಿದ್ದಾರೆ.ಇನ್ನು ಕೆಲವೇ ದಿನದಲ್ಲಿ ಇದು ಸುಂದರವಾಗಿ ಕಂಡು ಬಂದು ನೋಡುಗರಿಗೆ ಅಚ್ಚರಿ ಮೂಡಿಸುವುದಂತು ಖಚಿತ

ಕೆರೆಗಾಗಿ ದಾನ ನೀಡಿದ,ಸೇವೆ ಮಾಡಿದ,ಸಹಕಾರ ನೀಡಿದ ಎಲ್ಲಾ ಕೈಗಳಿಗೂ ಅನಂತ ಧನ್ಯವಾದಗಳು. ನೀರು ಕೊಟ್ಟ,ಅನ್ನ ಕೊಟ್ಟ ಪುಣ್ಯ ತುಂಬಾ ದೊಡ್ಡದು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend