ವಿದ್ಯುತ್ ತಂತಿ ಕಾಣೆಯಾಗಿದೆ ಹುಡುಕಿಕೊಡಿ, ಸಂಬಂಧ ಪಟ್ಟ ಅಧಿಕಾರಿಗಳೇ …!!!

Listen to this article

ಜನವರಿ 12 ಕೂಡ್ಲಿಗಿ

ವಿದ್ಯುತ್ ತಂತಿಯ ಮೇಲೆ ಆವರಿಸಿದ ಬಳ್ಳಿಯನ್ನು ತೆರವುಗೊಳಿಸಿ ಆಗುವ ಅನಾಹುತಗಳನ್ನು ತಪ್ಪಿಸಿವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೇಂದ್ರ ಬಿಂದುವಿನಲ್ಲಿ ಜೆಸ್ಕಾಂ ಇಲಾಖೆ ಇದ್ದರೂ ಕಂಡು ಕಾಣದಂತೆ ಕಣ್ಣಿಲ್ಲದ ಕುರುಡರಂತೆ ಅಥವಾ ತಮಗೆ ಗೊತ್ತಿಲ್ಲವೇನೋ ಎಂದು ತಿಳಿಯದಾಗಿದೆ ಆದರೆ ಸಾಮಾನ್ಯವಾಗಿ ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗಗಳಲ್ಲಿ ತಂತಿಗೆ ತಾಗುವಂತೆ ಇರುವ ಮರಗಳ ಕೊಂಬೆಗಳನ್ನು ಕಡಿದು ಮಾರ್ಗವನ್ನು ಸುಗಮಗೊಳಿಸುವ ಕಾರ್ಯವನ್ನು ವಿದ್ಯುತ್ ಇಲಾಖೆ ಮಾಡುತ್ತದೆ. ಆದರೆ ಕೂಡ್ಲಿಗಿ ಪಟ್ಟಣದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮುಂಬಾಗದ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಆಶ್ರಯಿಸಿ. ಸದಾ ಕಾಲ ವಿದ್ಯುತ್ ಹರಿಯುವ ತಂತಿಯನ್ನೇರಿ. ಹಸಿರು ಬಳ್ಳಿಗಳು ಸುತ್ತಿಕೊಂಡು ಬೆಳೆದು ನಿಂತಿವೆ. ಒಂದು ವೇಳೆ ವಿದ್ಯುತ್ ನಲ್ಲಿ ಏನಾದರೂ ತೊಂದರೆಯಾದರೆ ಅಮಾಯಕರು ಯಾರಾದರೂ ಈ ಗಿಡಗಳನ್ನು ಮುಟ್ಟಿದರೆ ಪ್ರಾಣ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಇಲ್ಲಿ ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಅದ್ಯಾಕೋ ಗೊತ್ತಿಲ್ಲವಿದ್ಯುತ್ ಇಲಾಖೆಯ ಅಧಿಕಾರಿಗಳಾಗಲೀ.ಸಿಬ್ಬಂದಿಗಳ ಆಗಲಿ. ಇದರತ್ತ ತಿರುಗಿ ನೋಡದೆ ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ವಿದ್ಯುತ್ ಕಂಬದ ಸುತ್ತ ಮುಳ್ಳಿನ ಬೇಲಿ, ಗಿಡಬಳ್ಳಿಗಳು, ಹುಲುಸಾಗಿ ಬೆಳೆಯುತ್ತಿದ್ದು ಹಾವು ಕ್ರಿಮಿಕೀಟಗಳು ವಿಷಜಂತುಗಳು ವಾಸಿಸುವ ತಾಣವಾಗಿದೆ. ಕಾರಣ ಈಗಲಾದರೂ ಸಂಬಂಧಪಟ್ಟ ಕೆಇಬಿ ಅಧಿಕಾರಿಗಳು ಶೀಘ್ರದಲ್ಲಿ ಸ್ಥಳ ಪರಿಶೀಲಿಸಿ ವಿದ್ಯುತ್ ಕಂಬದ ಸುತ್ತ ಬೆಳೆದಿರುವ ಮುಳ್ಳಿನ ಬೇಲಿಯನ್ನು, ಹಾಗೂ ವಿದ್ಯುತ್ ತಂತಿಗೆ ಆವರಿಸಿದ ಬಳ್ಳಿಯನ್ನು ತೆರವುಗೊಳಿಸಿ,ಇಲ್ಲಿ ವಾಸಿಸುವ ಕುಟುಂಬಗಳಿಗೂ ಹಾಗೂ ಸಾರ್ವಜನಿಕರಿಗೂ ವಿದ್ಯುತ್ ಅಪಾಯದಿಂದ ಆಗುವ ದುರಂತಗಳನ್ನು ತಪ್ಪಿಸಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend