ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಂಕಷ್ಟ ಪರಿ ಸ್ಥಿತಿಯಲ್ಲಿ ಕೈಹಿಡಿದ ನರೇಗಾ, ಉದ್ಯೋಗ ಖಾತ್ರಿ ಯೋಜನೆ…!!!

Listen to this article

ವರದಿ ಜೂನ್ 23 ಕೂಡ್ಲಿಗಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಸಂಕಷ್ಟ ಪರಿ ಸ್ಥಿತಿಯಲ್ಲಿ ಕೈಹಿಡಿದ ನರೇಗಾ, ಉದ್ಯೋಗ ಖಾತ್ರಿ ಜೀವನ ಖಾತ್ರಿ:=- ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಿ. ಓಬಣ್ಣ ಜುಮ್ಮೋಬನಹಳ್ಳಿ .

ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕೂಲಿ ಕಾರ್ಮಿಕರಿಂದ ನರೇಗಾ ಯೋಜನೆಯಡಿ ಕೆರೆಯಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜಮ್ಮೋಬನಹಳ್ಳಿ ಜಿ. ಓಬಣ್ಣ ನವರ ಮಾತನಾಡಿ ಜುಮ್ಮೋಬನಹಳ್ಳಿ ಯ ಜನರು ಕೆಲಸವಿಲ್ಲದೆ ಬೇರೆ ಸ್ಥಳಗಳಿಗೆ ದುಡಿಯಲು ವಲಸೆ ಹೋಗುತ್ತಿದ್ದರು ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಿ ಕೆಲಸ ಇಲ್ಲದ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆರೆಯಲ್ಲಿ ಹೂಳೆತ್ತುವ ಕೆಲಸ ಪ್ರಾರಂಭವಾಯಿತು. ಈ ಕಾಮಗಾರಿ ಕೆಲಸ ಇಲ್ಲದಿದ್ದರೆ ಜನಜೀವನ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು ಈ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಕೆಲಸ ಸಿಕ್ಕಿರುವುದರಿಂದ ನಮ್ಮ ಜನಗಳ ಜೀವನ ಕಾತ್ರಿ ಎಂದು ಹೇಳಿದರು. ಸಮಾಜ ಸೇವಕ ಹಾಗೂ ದಲಿತ ಮುಖಂಡರಾದ ಅರುಣ್ ಕುಮಾರ್ ಮಾತನಾಡಿ
ಸುಮಾರು 1300 ಕಾರ್ಮಿಕರು ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಒಂದು ಗುಂಡಿಗೆ 10ಜನ ಗಳಂತೆ ಪ್ರತಿಯೊಂದು ಗುಂಡಿಗೂ 10 ಜನಗಳ ಪಂಗಡಗಳನ್ನು ಮಾಡಿ ಕಾಮಗಾರಿ ಕೆಲಸ ಮಾಡಲು ವ್ಯವಸ್ಥೆ ಮಾಡಲಾಗಿದೆ ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಕೆಲಸ ಮಾಡುವಂತೆ ಜಾಗೃತಿ ಮೂಡಿಸಲಾಗಿದೆ ಹಾಗೂ ಈ ಯೋಜನೆಯಲ್ಲಿ ಹೆಣ್ಣುಮಕ್ಕಳಿಗೂ ಮತ್ತು ಗಂಡು ಮಕ್ಕಳಿಗೂ ಒಬ್ಬರಿಗೆ 289 ರೂಪಾಯಿ ಕೂಲಿ ,ಸಮಾನ ಕೂಲಿ ಕೊಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚನ್ನಬಸಮ್ಮ ಬಸಣ್ಣ, ಮಾಜಿ ಗ್ರಾಮ ಪಂ ಅಧ್ಯಕ್ಷ ಜಿ ಶರಣೆಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದಾಸಣ್ಣ ಸಾಕಮ್ಮ , ಬೋರಣ್ಣ ಸಾವಿತ್ರಮ್ಮ , ಎಚ್ ಪಾಪಣ್ಣ, ಗೌಡ್ರು ಸಣ್ಣ ಬಯ್ಯ, ಗುರು ಚಿನ್ನಯ್, ನಾಗರಾಜ, ತಿಪ್ಪಮ್ಮ ಶಾಂತಮ್ಮ , ಮಲ್ಲಪ್ಪ , ಯುವ ಮುಖಂಡರಾದ ರಾಜಣ್ಣ ಕೇಟ, ನಾಗರಾಜ, ಎಸ್ ಎಚ್ ಶಿವಕುಮಾರ ಕೂಲಿ ಕಾರ್ಮಿಕರು ಹಾಗೂ ಮುಖಂಡರು ಉಪಸ್ಥಿತರಿದ್ದರು..

ವರದಿ.ಡಿ, ಎಂ, ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend