ಸೂರ್ಯಕಾಂತಿ ಬೀಜ ಮೊಳಕೆ ಬರಲಿಲ್ಲ ರೈತರಿಗೆ ಫಲ ಸಿಗಲಿಲ್ಲ ಬಿತ್ತಿ ದವರಿಗೆ ನ್ಯಾಯ ಸಿಗಲಿಲ್ಲ…!!!

Listen to this article

ವರದಿ ಜೂನ್ 15 ಕೂಡ್ಲಿಗಿ

ಸೂರ್ಯಕಾಂತಿ ಬೀಜ ಮೊಳಕೆ ಬರಲಿಲ್ಲ ರೈತರಿಗೆ ಫಲ ಸಿಗಲಿಲ್ಲ ಬಿತ್ತಿ ದವರಿಗೆ ನ್ಯಾಯ ಸಿಗಲಿಲ್ಲ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಖಾನಹೊಸಹಳ್ಳಿ ಹೋಬಳಿಯ ನೂರಾರು ಜನ ರೈತರು ಮುಂಗಾರು ಮಳೆಗೆ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದು ಬೀಜಗಳು ಮೊಳಕೆ ಒಡೆದು ರೈತರ ಮನಸ್ಸಿನಲ್ಲಿ ಹುಸಿ ಬರಿಸದೆ ದುಃಖದ ಕಣ್ಣೀರು ಮನಸ್ಸಿಗೆ ಬೇಸರ ತಂದೊಡ್ಡಿವೆ ಕಾರಣ ಕಾನ ಹೊಸಳ್ಳಿ ಭಾಗದ ಅನೇಕ ರೈತರು ತಮ್ಮ ಜಮೀನುಗಳಲ್ಲಿ ಸೂರ್ಯಕಾಂತಿ ಕೆಬಿ ಎಸ್ ಎಚ್ 41. ಕರ್ನಾಟಕ ರಾಜ್ಯ ಬೀಜ ನಿಗಮ ಬಳ್ಳಾರಿ ಇವರು ಸರಕಾರಿ ಸಾಯೋ ಗದಲ್ಲಿ ಬೀಜಗಳನ್ನು ಮಾರಾಟ ಮಾಡುತ್ತಿದ್ದು ಇವರು ನೀಡಿದ ಸೂರ್ಯಕಾಂತಿ ಬೀಜವನ್ನು ಕೂಡ್ಲಿಗಿ ತಾಲೂಕಿನ ಕೃಷಿ ಇಲಾಖೆಯ ಆರ್ ಎಸ್ ಕೆ ಕೃಷಿ ಕೇಂದ್ರಗಳು ರೈತರಿಗೆ ಬೀಜಗಳನ್ನು ಬಿತ್ತನೆಗಾಗಿ ಮಾರಾಟ ಮಾಡಿದ್ದು ಸಂಪೂರ್ಣವಾಗಿ ಕಳಪೆ ಬೀಜ ಗಳಾಗಿದ್ದು ರೈತರು ಬಿತ್ತಿದ ಜಮೀನುಗಳಲ್ಲಿ ಬೀಜ ಮೊಳಕೆ ಒಡೆಯಲು ತನ್ನ ಶಕ್ತಿ ಸಾಮರ್ಥ್ಯ ಇಲ್ಲದೆ ಭೂಮಿಯ ಒಳಗಡೆ ಮಳೆಕೆ ಹೊಡೆದು ಹೊರಗಡೆ ಬಾರದೆ ವಿಲವಿಲ ಒದ್ದಾಡಿ ಸತ್ವಾಂಶ ಇಲ್ಲದ ಶಕ್ತಿಹೀನ ಕಳಪೆ ಸೂರ್ಯಕಾಂತಿ ಬೀಜವು ಭೂಮಿಯಿಂದ ಹೊರಬಾರದೆ ತನ್ನನ್ನೇ ನಂಬಿರುವ ನಂಬಿ ಬಿತ್ತಿರುವ ರೈತನಿಗೆ ದೊಡ್ಡ ನಷ್ಟವನ್ನು ತಂದೊಡ್ಡಿದೆ ಇದನ್ನಾಧರಿಸಿ ಇಂದು ಖಾನಹೊಸಳ್ಳಿ ಕೃಷಿ ಇಲಾಖೆಯ ಮುಂದೆ ಕಳಪೆ ಸೂರ್ಯಕಾಂತಿ ಬೀಜವನ್ನು ಬಿತ್ತಿದ ರೈತರು ನ್ಯಾಯ ಕೇಳಲು ಬೀಜದ ಕಾಲುಚೀಲಗಳನ್ನು ಇಡಿದು ನ್ಯಾಯ ಕೇಳಲು ಮುಂದಾದರು ಇದನ್ನು ಬಗೆಹರಿಸಿ ಪರಿಶೀಲಿಸಲು ಕರ್ನಾಟಕ ರಾಜ್ಯ ಬೀಜ ನಿಗಮ ಬಳ್ಳಾರಿ ವ್ಯವಸ್ಥಾಪಕರಾದ ನಾಗರಾಜ್ ನಾಯಕ್ ಇನ್ನೊಬ್ಬ ಸಹೋದ್ಯೋಗಿ ಸಂಗಮೇಶ ಅಂಗಡಿ ಇವರುಗಳು ಉಪಸ್ಥಿತರಿದ್ದರು ನೊಂದ ರೈತರ ಸಮಸ್ಯೆ ಈಡೇರಿಸಲು ಬಂದವರು ರೈತರ ಸಮಸ್ಯೆ ಈಡೇರಿಸಲಿಲ್ಲ ಕಾರಣ ರೈತರೆಲ್ಲರೂ ನಿಮ್ಮ ಕಂಪನಿಯ ಕಳಪೆ ಬೀಜದಿಂದ ನಾವು ಬಿತ್ತನೆ ಮಾಡಿ ಬೀದಿಗೆ ಬಂದಿದ್ದೇವೆ ಸೂರ್ಯಕಾಂತಿ ಬೀಜವು ತಮ್ಮ ಹೊಲದಲ್ಲಿ ಹುಟ್ಟಿಲ್ಲ ಆದಕಾರಣ ನಮಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು ಆದರೆ ರೈತರಿಗೆ ಪರಿಹಾರ ನೀಡದೆ ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಜೊತೆ ಚರ್ಚೆ ಮಾಡುತ್ತೇವೆ ಈಗಾಗಲೇ ಪರಿಹಾರ ಕೊಡಲಾಗದು ಬಿತ್ತನೆಗೆ ಬೇರೆ ಬೀಜವನ್ನು ನೀಡುತ್ತೇವೆ ಎಂದು ಜಾರಿಕೆ ಉತ್ತರ ನೀಡಿದರು ಇದಕ್ಕೆ ರೈತರು ಒಪ್ಪಲಿಲ್ಲ ವ್ಯವಸ್ಥಾಪಕ ನಾಗರಾಜ್ ನಾಯಕ್ ಈಗಾಗಲೇ ನಾವು ಲ್ಯಾಬಿನಲ್ಲಿ ಬೀಜವನ್ನು ಪರೀಕ್ಷಿಸಲಾಗಿ ಬೀಜದಲ್ಲಿ ಯಾವುದೇ ರೋಗವಿಲ್ಲವೆಂದು ರಕ್ಷ ಪರೀಕ್ಷೆಯಲ್ಲಿ ಪಾಸಾಗಿದ್ದು ಪರಿಹಾರ ಕೊಡಲಾಗದು ಎಂದು ರೈತರಿಗೆ ಹೇಳುತ್ತಾ ಬಿತ್ತಿದ ರೈತರ ಜಮೀನುಗಳನ್ನು ಸಹಾಯಕ ಕೃಷಿ ನಿರ್ದೇಶಕರಾದ ವಾಮದೇವ ಅವರ ನೇತೃತ್ವದಲ್ಲಿ ರೈತರ ಜಮೀನುಗಳನ್ನು ಪರಿಶೀಲಿಸಿದರು ಸಹಾಯಕ ಕೃಷಿ ನಿರ್ದೇಶಕರು ಮಾತನಾಡಿ ಈಗಾಗಲೇ ರೈತರು 400ರಿಂದ 500 ಎಕರೆ ಜಮೀನುಗಳಲ್ಲಿ ಸೂರ್ಯಕಾಂತಿ ಕೆ ಬಿ ಎಸ್ ಎಚ್ 41 ಬೀಜಗಳನ್ನು ಬಿತ್ತನೆ ಮಾಡಿದ್ದು ಬೀಜದಲ್ಲಿ ಸತುವಿನಂಶ ಇಲ್ಲದ ಕಾರಣ ಬೀಜ ಮೊಳಕೆ ಒಡೆದು ಭೂಮಿಯಿಂದ ಹೊರಬರಲಿಲ್ಲ 20 ರಿಂದ 25 ಪರ್ಸೆಂಟ್ ಎಷ್ಟು ಬೀಜ ಹುಟ್ಟಿದ್ದು ಈಗಾಗಲೇ ನಮ್ಮ ಇಲಾಖೆಯಿಂದ ಲ್ಯಾಬಿಗೆ ಪರೀಕ್ಷಿಸಲು ಕಳುಹಿಸಿದ್ದು ಇನ್ನೂ ಬಂದಿಲ್ಲ ಬಂದನಂತರ ಸರಿಯಾಗಿದೆ ಎಂದರೆ ನಾವು ಏನೂ ಮಾಡಲಾಗದು ಬೀಜ ಸರಿಯಿಲ್ಲ ಎಂದು ಬಂದರೆ ಸಂಬಂಧಪಟ್ಟ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ಚಾಮನೂರ್ ಟ್ರೈನ್ ಸಬ್ಇನ್ಸ್ಪೆಕ್ಟರ್ ನಾಗರತ್ನಮ್ಮ ಪೊಲೀಸ್ ಸಿಬ್ಬಂದಿಗಳು ಕೃಷಿ ಇಲಾಖೆ ಅಧಿಕಾರಿಗಳು ನೂರಾರು ರೈತರು ಭಾಗವಹಿಸಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend