ಬಿತ್ತಿದ ಹೊಲಗಳಿಗೆ ಕಾಡು ಹಂದಿಗಳ ಹಾವಳಿ ಕ್ರಮಕ್ಕೆ ಆಗ್ರಹ…!!!

Listen to this article

ಬಿತ್ತಿದ ಹೊಲಗಳಿಗೆ ಕಾಡು ಹಂದಿಗಳ ಹಾವಳಿ ಕ್ರಮಕ್ಕೆ ಆಗ್ರಹ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲುಕಿನ ಜಂಗಮಸೋವೇನಹಳ್ಳಿ ಗ್ರಾಮದಲ್ಲಿ , ಕಾಡು ಹಂದಿಗಳ ಹಿಂಡು ಕೃಷಿಕರ ಜಮೀನಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಹಾಗು ಶೇಂಗಾ ಬೆಳೆಗಳನ್ನು ನಾಶಮಾಡುತ್ತಿವೆ.
ಮೆಕ್ಕೆಜೋಳ ಬೆಳೆಯಲು 1 ಎಕರೆ ಜಮೀನಗೆ 2 ಪಾಕೇಟ್ ಬೀಜ 2 ಚೀಲ ರಾಸಾಯನಿಕ ಗೊಬ್ಬರ, ಬಿತ್ತನೆ ಸೇರಿ ಸೂಮಾರು 10 ಸಾವಿರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.ಆದೇರೀತಿ ಶೇಂಗಾ ಬೆಳೆಯಲು 1ಎಕರೆ ಜಮೀನಗೆ 50kg ಬೀಜ 2 ಚೀಲ ರಾಸಾಯನಿಕ ಗೊಬ್ಬರ ಬಿತ್ತನೆ ಸೇರಿ ಸೂಮಾರು 12 ಸಾವಿರ ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡುತ್ತಾರೆ ಬಿತ್ತನೆ ಮಾಡಿದ ಹೊಲದಲ್ಲಿ ಮೆಕ್ಕೆಜೋಳ ಹಾಗು ಶೇಂಗಾ ಬೀಜಗಳನ್ನು ಕಾಡುಹಂದಿಗಳು (ಮಿಕ) ನಾಶ (ಗೂರಿ) ಮಾಡಿ ರೈತರನ್ನು ಹೈರಾಣಗಿಸಿವೆ ಬಹುತೇಕ ಕೃಷಿಕರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೀಜಗಳನ್ನು ಕಾಡು ಹಂದಿಗಳು ನಾಶ ಮಾಡವೆ ಬಿತ್ತನೆ ಮಾಡಿದ ಬೀಜಗಳನ್ನು ರಕ್ಷಣೆ ಮಾಡಲು ರಾತ್ರಿಯಿಡೀ ಕಾಡು ಪ್ರಾಣಿಗಳಾದ ಕರಡಿ ಚಿರತೆ ದಾಳಿಗಳ ಆತಂಕ ನಡುವೆ ಕಾಡುಂದಿಗಳಿಂದ ಬಿತ್ತನೆ ಮಾಡಿದ ದಿನದಿಂದ ಮೊಳಕೆ ಹೊಡೆಯುವತನಕ ಬೀಜಗಳನ್ನು ರಕ್ಷಣೆ ಮಾಡಲು ರಾತ್ರಿಯಿಡೀ ಜಾಗರಣೆ ಮಾಡಿ ಅಂದರೆ ದ್ವನಿವರ್ಧಕ ಎಣ್ಣೆ ಡಬ್ಬಿಗಳ ಶಬ್ದಗಳ ಮೂಲಕ ಬೆದರಿಸಿ ಬೆಳೆಗಳನ್ನು ರಕ್ಷಣೆ ಮಾಡಬೇಕಾಗಿದೆ ಮೊದಲೆಲ್ಲಾ ಅರಣ್ಯ ದಂಚಿನ ಕೃಷಿ ಜಮೀನುಗಳಲ್ಲಿ ಮಾತ್ರ ಕಾಡು ಪ್ರಾಣಿಗಳ ಬೆಳೆಗಳನ್ನು ನಾಶ ಮಾಡುತ್ತಿದ್ದವು ಆದರೆ ಈಗ ಎಲ್ಲಾ ಪ್ರದೇಶದ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಆವಾಳಿ ಕಂಡುಬರುತ್ತದೆ ಬಿತ್ತನೆ ಬೀಜದಿಂದ ಆಧಿಯಾಗಿ ಬೆಳೆಗಳ ಸಂರಕ್ಷಸಲು ಪರಿ ಪರಿಯಾದ ಸಮಸ್ಯೆಗಳು ಕೃಷಿಕರಿಗೆ ತಂದೊಡ್ಧಿದೆ ಇದು ಬಹಳ ತೆಲೆನೋವಾಗಿ ಕಾಡುತ್ತಿದೆ ನಾಶವಾದ ಬೆಳೆಗಳಿಗೆ ಪರಿಹಾರ ಸಿಗುತ್ತಿಲ್ಲ. ಸರ್ಕಾರದ ಇನ್ನಿತರ ಸೌಲಭ್ಯ ಗಳು ಮಾಹಿತಿಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್,ಕಾರಣ ಮಾಹಿತಿ ಕೊರತೆಯಿಂದ ಸಂಕಷ್ಟಗಳು ತಪ್ಪಿದ್ದಲ್ಲ. ಅದ್ದರಿಂದ ಸಂಭಂದ ಪಟ್ಟ ಇಲಾಖಾಧಿಕರಿಗಳು, ರೈತರಿಗೆ ಮಾಹಿತಿ ತಿಳಿಸುವುದರ ಜೊತೆಗೆ ರೈತರ ನೆರವುಗೆ ದಾವಿಸಬೇಕಾಗಿದೆ..

ವರದಿ. ಬಸವರಾಜ್. ಬಿ. ಎಂ. ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend