ಕಾರುಣ್ಯ ಆಶ್ರಮದ ಆಶಾಕಿರಣ ಚನ್ನಬಸವ ಸ್ವಾಮಿ ಹಿರೇಮಠ…!!!

Listen to this article

ಕಾರುಣ್ಯ ಆಶ್ರಮದ ಆಶಾಕಿರಣ ಚನ್ನಬಸವ ಸ್ವಾಮಿ ಹಿರೇಮಠ.

ಸಿಂಧನೂರು:ಜುಲೈ.22 (ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಲೇಖನ) ಜುಲೈ -22 ರಂದು 43 ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮ ನಗರದ ಕುಷ್ಟಗಿ ರಸ್ತೆಯಲ್ಲಿರು ಕಾರುಣ್ಯ ನೆಲೆ ವೃದ್ಧಾಶ್ರಮದ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮ ಅನಾಥರ, ಬುದ್ದಿಮಾಂದ್ಯರ ಹಾಗೂ ನಿರ್ಗತಿಕರ ಪಾಲಿಗೆ ಆಶ್ರಯ ತಾಣವಾಗಿದೆ. ಈ ಆಶ್ರಮದಲ್ಲಿ ಊಟ,ವಸತಿ, ಆರೋಗ್ಯ ವ್ಯವಸ್ಥೆಯನ್ನು ಉಚಿತವಾಗಿ ಮಾಡಲು ನಿರಂತರವಾಗಿ ಜೋಳಿಗೆ ಹಾಕಿಕೊಂಡು ಇವರ ಆಶ್ರಯದಾತ ಆಗಿರುವ ಕಾರುಣ್ಯಾಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹೀರೇಮಠ ಹರೇಟನೂರು ಇವರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈ ಆಶ್ರಮದಲ್ಲೇ ಇದ್ದು ಉತ್ತಮ ವಾತಾವರಣ ನಿರ್ಮಾಣ ಮಾಡಿ, ಇಲ್ಲಿರುವ ಹಿರಿಯ ಅನಾಥ ಜೀವಿಗಳಿಗೆ, ಬುದ್ದಿಮಾಂದ್ಯ ನಿರ್ಗತಿಕರನ್ನು ಸಲುಹುತ್ತಾ ಅವರೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಮೂಲತಃ ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ಪ್ರಧಾನ ಅರ್ಚಕ ಹಾಗೂ ಶ್ರೀ ಮಠ ಸೇವಾ ಟ್ರಸ್ಟ್ ಅಧ್ಯಕ್ಷ ಅಮರಯ್ಯ ಸ್ವಾಮಿ ಹಿರೇಮಠರ ಪುತ್ರರಾಗಿರುವ ಇವರು ಈಗಾಗಲೇ ಬಹಳಷ್ಟು ಜನರಿಗೆ ಸರಕಾರಿ ಯೋಜನೆ ಅಡಿ ಹಾಗೂ ಖಾಸಗಿಯಾಗಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸುವ ಮೂಲಕ ತಮ್ಮ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು.

ಕಳೆದ ಮೂರು ವರ್ಷಗಳಿಂದ ಶ್ರೀಮಠ ಸೇವಾ ಟ್ರಸ್ಟ್ ಅಡಿಯಲ್ಲಿ ಕಾರುಣ್ಯ ನೆಲೆ ವೃದ್ಧಾಶ್ರಮ ತೆರೆದು ಇದೀಗ ಸುಮಾರು 60ಜನರಿಗೆ ಆಶ್ರಯದಾತ ಆಗಿರುವುದು ಶ್ಲಾಘನೀಯ.

ಆರಂಭದಲ್ಲಿ ಕೇವಲ 25ಜನ ವೃದ್ಧರ ಆರೈಕೆಯೊಂದಿಗೆ ಆರಂಭಿಸಿದ ಈ ಕಾರುಣ್ಯ ಆಶ್ರಮದ ವರ್ಷಗಳು ಕಳೆದಂತೆ ತನ್ನ ಸೇವಾಕಾರ್ಯದ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗಿ, ಹಲವರಿಗೆ ಆಸರೆಯಾಗಿದೆ. ಈ ಆಶ್ರಮಕ್ಕೆ ಇಲ್ಲಿಯವರೆಗೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗದೇ, ಇಲ್ಲಿಯವರೆಗೆ ದಾನಿಗಳ ನೆರವಿನಿಂದಲೇ ನಡೆಯುತ್ತಿದೆ. ಮುಂದಿನ ದಿನಗಳಲ್ಲಿಯಾದರು ಈ ಆಶ್ರಮಕ್ಕೆ ಸರಕಾರಿ ಸವಲತ್ತುಗಳು ಸಿಗಲಿ ಮತ್ತು ಅನಾಥರಿಗೆ, ನಿರ್ಗತಿಕರಿಗೆ, ಆಸರೆಯಾಗಿರುವ ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸವಸ್ವಾಮಿ ಹೀರೇಮಠ ಹರೇಟನೂರು ಅವರಿಗೆ ದೇವರು ಇನ್ನಷ್ಟು ಹೆಚ್ಚು ಸೇವೆ ಸಲ್ಲಿಸಲು ಆಶೀರ್ವದಿಸಲಿ ಎಂದು ಈ ಮೂಲಕ ಅವರ ಸೇವಾ ಕಾರ್ಯಗಳನ್ನು ನೆನೆಯುತ್ತ ಅವಿನಾಶ ದೇಶಪಾಂಡೆ, ಕಾರ್ಯದರ್ಶಿ
ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ (ರಿ) ಸಿಂಧನೂರ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend