ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಹೊಳಲ್ಕೆರೆಯಲ್ಲಿ ಮಾಜಿ ಸಚಿವ H ಆಂಜನೇಯನವರ ನೇತೃತ್ವದಲ್ಲಿ ಪ್ರತಿಭಟನೆ…!!!

Listen to this article

ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಹೊಳಲ್ಕೆರೆಯಲ್ಲಿ ಮಾಜಿ ಸಚಿವ H ಆಂಜನೇಯನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಕಾರ್ಯಕರ್ತರು

ಅನಿರ್ಬಂಧಿತ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ
ಕರ್ನಾಟಕ ಪ್ರದೇಶ ಕಾಂಗ್ರೆಸ್ ನಿರ್ದೇಶನದಂತೆ ರಾಜ್ಯದಾದ್ಯಂತ Petrol100 Not Out ಅಭಿಯಾನಕ್ಕೆ ಕರೆ ಕೊಟ್ಟಿದೆ. ಇದರ ಭಾಗವಾಗಿ ಸೋಮವಾರ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ನಗರದ ಪೆಟ್ರೋಲ್ ಬಂಕ್ ಗಳಲ್ಲಿ Petrol100 Not Out ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಹೊಳಲ್ಕೆರೆಯಲ್ಲಿ ಪ್ರತಿಭಟನೆ ನಡೆಸಿದರು

ಕೋವಿಡ್-19 ಹೊಡೆತಕ್ಕೆ ಸಿಲುಕಿ ಜೀವನ ನಡೆಸಲೂ ಹೆಣಗಾಡುತ್ತಿರುವ ಮದ್ಯೆ ಜನಸಾಮಾನ್ಯರ ಮೇಲೆ‌ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಊಹೆಗೂ ನಿಲುಕದಷ್ಟು ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಮಾಜಿ ಸಚಿವ H ಆಂಜನೇಯ ನೇತೃತ್ವದಲ್ಲಿ ಸೋಮವಾರ ಹೊಳಲ್ಕೆರೆ ಪಟ್ಟಣದ ವಿ.ಜಿ ಶೆಟ್ರು ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಲಾಯಿತು.

ಕಳೆದ 13 ತಿಂಗಳಲ್ಲಿ ಪೆಟ್ರೋಲ್ ಲೀಟರ್ ಗೆ 25.72 ರೂಪಾಯಿ ಹಾಗೂ ಡೀಸೆಲ್‌ 23.93 ರೂಪಾಯಿಯಷ್ಟು ಏರಿಕೆ ಕಂಡಿದೆ. ಇದು ಕೇಂದ್ರ ಸರ್ಕಾರದ ಕೃಪಾಪೋಷಿತವಲ್ಲದೇ ಮತ್ತೇನು ಈಗಲಾದರೂ
ಕೇಂದ್ರಸರ್ಕಾರ ಜಾಣ ಕಿವುಡುತನ ಪ್ರದರ್ಶಿಸದೇ ಸಾಮಾನ್ಯ ಜನರ ಮೇಲೆ ಮಾಡುತ್ತಿರುವ ಗದಾಪ್ರಹಾರವನ್ನು ನಿಲ್ಲಿಸಬೇಕಾಗಿದೆ ಎಂದು ಮಾಜಿ ಸಚಿವರಾದ H ಆಂಜನೇಯನವರು ಸರ್ಕಾರಕ್ಕೆ ಮನವಿ ಮಾಡಿದರು
ಇನ್ನು ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ, ಮಾಜಿ ಶಾಸಕರಾದ ಎವಿ ಉಮಾಪತಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಕಾಟೇಹಳ್ಳಿ ಶಿವಕುಮಾರ್,ಪ.ಪಂ ಮಾಜಿ ಅಧ್ಯಕ್ಷರಾದ ರುದ್ರಪ್ಪ, ಜಿಲ್ಲಾ.ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ,ಮಧುಪಾಲೇ ಗೌಡ, ವಕೀಲರಾದ ಲೋಕೇಶ್ ನಾಯ್ಕ್, ಸಾಮಾಜಿಕ ಜಾಲತಾಣ ಅದ್ಯಕ್ಷರಾದ ,ಹೇಮಂತ್ ಗೌಡ ಮುಂತಾದ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ. ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend