ಕಾನಿಪ ಧ್ವನಿ ಸಂಘಟನೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದಂತ ಕೆ.ವಿ.ಪ್ರಭಾಕರ್, ಪತ್ರಕರ್ತರ ಸಮಸ್ಯೆಗಳ ಕುರಿತು ಮನವಿ….!!!

Listen to this article

ಕಾನಿಪ ಧ್ವನಿ ಸಂಘಟನೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದಂತ ಕೆ.ವಿ.ಪ್ರಭಾಕರ್,ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳಿಗೆ, ಮುಖ್ಯಮಂತ್ರಿ ಯವರ ಆಪ್ತ ಕಾರ್ಯದರ್ಶಿ,ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಶಾಸನ ಸಚಿವರಾದ ಹೆಚ್.ಕೆ.ಪಾಟೀಲ್,ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ರವರಿಗೆ ನಾಡಿನ ಪತ್ರಕರ್ತರ 16 ಜ್ವಲಂತ ಸಮಸ್ಯೆ ಬೇಡಿಕೆಗಳಿಗೆ ಕ್ರಮ ಕೈಗೊಳ್ಳುವುದರ ಕುರಿತು ಮನವಿ:- ಕಳೆದ 75 ವರ್ಷಗಳಿಂದ ಅನೇಕ ಜ್ವಲಂತ ಸಮಸ್ಯೆಗಳನ್ನು ನಾಡಿನ ಪತ್ರಕರ್ತರು ಅನುಭವಿಸುತ್ತಲೇ ಬಂದಿದ್ದಾರೆ.ಈ ಕುರಿತು ಸರ್ಕಾರ ಬೇಡಿಕೆಗಳಿಗೆ ಸ್ಪಂಧಿಸುತ್ತಿಲ್ಲ. ಹದಿನಾರು ಸಾವಿರ ಪತ್ರಕರ್ತರುಗಳ ಪೈಕಿ ಕೇವಲ ಹದಿನಾರು ನೂರು ಪತ್ರಕರ್ತರನ್ನ ಮಾತ್ರ ನಿಜವಾದ ಪತ್ರಕರ್ತರು ಎನ್ನುವ ರೀತಿ ಪರಿಗಣಿಸಿ ಅವರುಗಳಿಗೆ ಅಕ್ರಿಡೇಷನ್ ಕಾರ್ಡ್,ಮೀಡಿಯಾ ಕಿಟ್ ಇನ್ನೀತರ ಸೌಲಭ್ಯಗಳನ್ನು ಒದಗಿಸುತ್ತಲೇ ಬಂದಿರುವುದು ನೋವಿನ ಸಂಗತಿ. ಆರ್.ಎನ್.ಐ. ಹೋಂದಿರುವಂತ ಸಂಪಾದಕರು ಹಾಗೂ ಪತ್ರಕರ್ತರುಗಳು ಸರ್ಕಾರದ ಮಟ್ಟಿಗೆ ನಕಲಿ ಪತ್ರಕರ್ತರೇ ಎನ್ನುವ ಅನುಮಾನ ಮೂಡಿಸಿರುವುದಂತು ಖಂಡಿತ.ಒಡೆದು ಆಳುವ ನೀತಿಯಂತೆ ಈ ರೀತಿ ಪತ್ರಕರ್ತರ ಮಧ್ಯ ತಾರತಮ್ಯ ನೀತಿ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಖಂಡಿತ ಪ್ರಶ್ನಿಸುತ್ತೇನೆ. ಮಂಗಳ ಮುಖಿಯವರ ಮೇಲೆ ಇರುವ ಕಾಳಜಿ ಉಚಿತ ಬಸ್ ಪಾಸ್ ವಿಚಾರದಲ್ಲಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಲೇ ಸಾಗಿರುವ ಪತ್ರಕರ್ತರ ಮೇಲೆ ಸರ್ಕಾರ ಯಾಕೆ ಮುತುವರ್ಜಿ ವಹಿಸುತ್ತಿಲ್ಲ.ರಾಜ್ಯಾಧ್ಯಂತ ಬೇಡ, ಕನಿಷ್ಠ ಜಿಲ್ಲಾ ಮಟ್ಟಕ್ಕಾದರೂ ಓಡಾಡಲು ಅವಕಾಶ ಕಲ್ಪಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟಂತ ದಿಗ್ಗಜರಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದ್ದು ಅದರ ಪ್ರತಿಗಳ ವಿವರ ಇದರೊಂದಿಗೆ.
*ಜಾಹೀರಾತು ನೀತಿ 2013 ಅನುಷ್ಠಾನ ನಿಯಮ 14 ರ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಾಲಿಕತ್ವದ* ಪತ್ರಿಕೆಗಳಿಗೆ ಜಾಹೀರಾತುಗಳನ್ನು ಯಥಾವತ್ತಾಗಿ 2013 ನೇ ಇಸ್ವಿಯ ಅನುಷ್ಠಾನದಂತೆ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು. ಪತ್ರಕರ್ತರ ಮಸಾಶನ ಹೆಚ್ಚಿಸಬೇಕು,ಪತ್ರಕರ್ತರ ರಕ್ಷಣಾ ಕಾಯ್ದೆ ಅನುಷ್ಠಾನಗೊಳ್ಳಬೇಕು.
*ಜಿಲ್ಲಾ ಮಟ್ಟದ ಪತ್ರಿಕಾ ಭವನಗಳನ್ನು kuwj ಸುಪರ್ಧಿಯಿಂದ ವಿಮುಕ್ತಿಗೊಳಿಸಿ ಪ್ರತಿಯೊಂದು ಪತ್ರಕರ್ತರ ಸಂಘಟನೆಗಳ ಉಪಯೋಗಕ್ಕೆ ಜಿಲ್ಲಾ* ವಾರ್ತಾಧಿಕಾರಿಗಳ ಮುಖಾಂತರ ನಿರ್ವಹಿಸಲು ಕೂಡಲೇ ಕ್ರಮಕೈಗೊಳ್ಳಬೇಕು.
ರಾಜ್ಯದ ಪತ್ರಕರ್ತರ ಮೇಲೆ ನಮೂದಾಗಿರುವ ಸುಳ್ಳು ಕೇಸ್ ಗಳನ್ನು ಹಿಂಪಡೆಯಬೇಕು.
*ಕಾರ್ಮಿಕ ಇಲಾಖೆಯ ಆಯುಕ್ತರ ಮುಖಾಂತರ ಪತ್ರಕರ್ತರ ಪರ ಜಾರಿಯಾಗಿರುವ ಗೌರವಾನ್ವಿತ ಸವೋರ್ಚ್ಚ ನ್ಯಾಯಾಲಯದ ತೀರ್ಪಿನಂತೆ ಮಜೀತಿಯಾ ವೇತನ ಮಂಡಳಿಯ ಶಿಫ್ಪಾರಸ್ಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಹಾಗೂ ಇದರ ಜೊತೆಗೆ ಇನ್ನೀತರ ಬೇಡಿಕೆಗಳು ಮನವಿ ಪತ್ರದಲ್ಲಿದ್ದು ಈ ಕುರಿತು ನಾಡಿನ ಪ್ರತಿಯೊಬ್ಬ ಪತ್ರಕರ್ತರು ತಿಳಿದು ಕೊಳ್ಳಲೇಬೇಕೆಂದು ಮನವಿ* . ಈ ಮನವಿಯ ಸಾರಂಶವನ್ನು ಪತ್ರಕರ್ತರು ತಮ್ಮ ತಮ್ಮ ಪತ್ರಿಕೆ,ಚಾನಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಬೇಕೆಂದು ವಿನಂತಿ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ…

ವರದಿ. ಮಂಜುನಾಥ್. ಎನ್.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend