ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ…!!!

Listen to this article

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಮಾದಕ ದ್ರವ್ಯವು ಸಮಾಜಕ್ಕೆ ಮಾರಕ:P S I ತಿಮ್ಮಣ್ಣ ಚಾಮನೂರು
ಕಾನಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಹೊಸಹಳ್ಳಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾನ್ಯ ಪಿಎಸ್ಐ ತಿಮ್ಮಣ್ಣ ಚಾಮನೂರ್ ರವರು ಮಾತನಾಡಿ ಮಾದಕ ದ್ರವ್ಯ ವ್ಯಸನ ಸಮಾಜಕ್ಕೆ ಮಾರಕವಾಗಿದೆ. ಇದು ಅತಿ ಹೆಚ್ಚು ಯುವಕರಲ್ಲಿ ಬೇರೂರಿಬಿಟ್ಟಿದೆ ಆದಷ್ಟು ಈ ಬೇರನ್ನು ಕಿತ್ತು ಹೊಗೆಯುವ ಪ್ರಯತ್ನ ಮಾಡಬೇಕು. ತಂಬಾಕು ಗುಟ್ಕಾ ಸ್ಟಾರ್ ವಿಮಲ್ ಇಂಥವುಗಳನ್ನು ಯಾರು ಉಪಯೋಗಿಸಬಾರದು ಈ ಸೇವನೆಯಿಂದ ಆರೋಗ್ಯ ಕೆಟ್ಟು ಕ್ಯಾನ್ಸರ್ ಅಂತ ಕಾಯಿಲೆಗಳು ಬಂದು ಮರಣ ಸಂಭವಿಸಬಹುದಾದ ಕಾಯಿಲೆಗಳು ಉಲ್ಬಣವಾಗುತ್ತದೆ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ಯುವಕರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸಬೇಕಾಗಿದೆ. ಯಾರಾದರೂ ಅಂಗಡಿಗಳಲ್ಲಿ ಅಥವಾ ಇನ್ನು ಯಾವುದೇ ಸ್ಥಳಗಳಲ್ಲಿ ಈ ಮಾದಕ ದ್ರವ್ಯಗಳನ್ನು ಮಾರಿದರೆ ಅಂಥವರ ಬಗ್ಗೆ ನಮ್ಮ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ ಹಳ್ಳಿಯಲ್ಲಿನ ಯುವಕರು ಇತ್ತೀಚೆಗೆ ತಂಬಾಕು ಗುಟುಕ ಅಂತ ವಿಮಲ್ ಸೇವನೆ ಮಾಡುವುದು ಅತಿ ಹೆಚ್ಚು ಕಂಡುಬರುತ್ತದೆ ಕಾರಣ ಇವುಗಳನ್ನು ಸೇವನೆ ಮಾಡುವುದು ಬಿಟ್ಟು ಸೊಪ್ಪು ತರಕಾರಿ ಮೀನು ಮಾಂಸ ಹಾಲು ಮೊಟ್ಟೆ ಅಂತಹ ಆರೋಗ್ಯಕರ ಆಹಾರ ಸೇವನೆ ಮಾಡಿ ಎಂದು ಈ ಸಂದರ್ಭದಲ್ಲಿ ಹೇಳಿದರು , ಈ ಕಾರ್ಯಕ್ರಮದಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಗಳಾದ ತಿಮ್ಮಣ್ಣ ಚಾಮನೂರು, ಪಿಎಸ್ಐ ನಾಗರತ್ನಮ್ಮನವರು, ASI. ಕೆ ಗೋವಿಂದಪ್ಪನವರು ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು.

ಡಿ ಎಂ ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend