ಮಳೆರಾಯನ ಮುನಿಸು ರೈತರು ಕಂಗಾಲು…!!!

Listen to this article

ಮಳೆರಾಯನ ಮುನಿಸು ರೈತರು ಕಂಗಾಲು !!!!!!!!! ವಿಜಯನಗರ ಜಿಲ್ಲೆ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿಯ ಸಮೀಪದ ಬಯಲುತುಂಬರಗುದ್ದಿ ಗ್ರಾಮದ ರೈತ ಉಡದಳ್ಳಿ ಬಸವರಾಜ್ ಅವರು ಬೆಳೆದು ನಿಂತ ಮೆಕ್ಕೇಜೋಳದ ಫಸಲು ಈ ಬಾರಿ ಮಳೆರಾಯನ ಮುನಿಸಿಗೆ ಮೆಕ್ಕೇಜೋಳ ಒಣಗಿ ನಿಂತಿದೆ ಎಂದು ರೈತ ಬಸವರಾಜ್ ಅಲವತ್ತುಕೊಂಡಿದ್ದಾರೆ. ಮಳೆ ಕೈಕೊಟ್ಟು ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಗೊಂಡ ಮೆಕ್ಕೇಜೋಳ , ಸೂರ್ಯಕಾಂತಿ ,ಸಜ್ಜೆ ಬೆಳೆಗಳು ಸಂಪೂರ್ಣ ಒಣಗಲಾರಂಬಿಸಿದ್ದು ಎದೆ ಎತ್ತರಕ್ಕೆ ಬೆಳೆದು ನಿಂತ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು ರೈತರ ಗೋಳು ಹೇಳತೀರದಾಗಿದ್ದು ರೈತರು ಮುಗಿಲು ನೋಡುವ ಪರಿಸ್ಥಿತಿಯಿಂದ ಚಿಂತೆಗೆ ಕಾರಣರಾಗಿದ್ದಾರೆ . ಸುಮಾರು 24,000 ಹೆಕ್ಟೇರ್ ಕೃಷಿ ಭೂಮಿಯಲ್ಲಿ 8,630 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ , 7,324 ಹೆಕ್ಟೇರ್ ಮೆಕ್ಕೇಜೋಳ , 1,852 ಹೆಕ್ಟೇರ್ ರಾಗಿ , 950 ಹೆಕ್ಟೇರ್ ಸೂರ್ಯಕಾಂತಿ , 416 ಹೆಕ್ಟೇರ್ ನವಣೆ, 360, ಹೆಕ್ಟೇರ್ ಬಿಳಿಜೋಳ ಬಿತ್ತನೆಯಾಗಿದೆ. ಒಂದು ತಿಂಗಳಿಂದ ಮಳೆಯಾಗದ ಕಾರಣ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ ಬಿತ್ತನೆಗೆ ಹಿನ್ನಡೆಯಾಗಿದೆ ,ಸಾಲ ಮಾಡಿ ಬಿತ್ತನೆ ಬೀಜಗಳನ್ನು ಖರೀದಿ ಮಾಡಿ ರೈತರು ಧೈರ್ಯದಿಂದ ಬಿತ್ತನೆ ಮಾಡಿರುವ ಬೆಳೆಗಳು ಸಂಪೂರ್ಣ ಒಣಗುತ್ತಿವೆ , ಮಳೆರಾಯನ ಮುನಿಸಿನಿಂದ ಹೊಲಗಳು ಬರಡಾಗುತ್ತಿವೆ ಎನ್ನುತ್ತಾರೆ ರೈತ ನಾಗರಾಜ . ಮಳೆಯನ್ನೇ ನಂಬಿದ ರೈತರ ಜೀವನಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ , ಬಿತ್ತನೆ ಗೊಂಡ ಶೇಕಡ 60ರಷ್ಟು ಬೆಳೆ ಭೂಮಿಯಲ್ಲಿ ಒಣಗುತ್ತಿದ್ದು ಸದ್ಯ ಮಳೆ ಆದರೆ ಹಿಂಗಡ ಬಿತ್ತನೆಯಾದ ಶೇಖಡ 30ರಷ್ಟು ಬೆಳೆ ಕೈ ಸೇರಲಿದ್ದು , ಇರುವ ಫಸಲು ಬಂದರೆ ಸ್ವಲ್ಪ ಪ್ರಮಾಣದಲ್ಲಿ ಜಾನುವಾರುಗಳಿಗಾದರೂ ಮೇವಾಗಲಿದೆ ಎನ್ನುತ್ತಾರೆ ರೈತರು . ಜಾನುವಾರಗಳ ಮೇವಿನ ಸಮಸ್ಯೆ ರೈತರಿಗೆ ಚಿಂತೆಗೀಡು ಮಾಡಿದೆ, ಇರುವ ದನಕರುಗಳನ್ನು ಮೇಯಿಸಲು ಆಗದೆ ಮಾರಾಟ ಮಾಡಲು ಮನಸ್ಸು ಒಪ್ಪುತ್ತಿಲ್ಲ ಆದರೆ ಬೇರೆ ಮಾರ್ಗವಿಲ್ಲ ಎಂದು ಬಯಲುತುಂಬರಗುದ್ದಿ ರೈತ ಕೊಟ್ರೇಶ್ ಅಲವತ್ತುಕೊಂಡಿದ್ದಾರೆ . ಮಳೆ ಇಲ್ಲದೆ ಬೆಳೆಗಳು ಒಣಗಲಾರಂಭಿಸಿವೆ, ಬೆಳೆ ಸಮೀಕ್ಷೆಯ ಬಳಿಕ ನಷ್ಟದ ಪ್ರಮಾಣ ತಿಳಿಯಲಿದೆ ಎಂದು ಕಾನಹೊಸಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ .ಚೈತ್ರ ತಿಳಿಸಿದರು…

ವರದಿ, ಬಸಪ್ಪ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend