ಗೃಹ ಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ…!!!

Listen to this article

ಗೃಹ ಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಗ್ರಾಮದಲ್ಲಿ ದಿನಾಂಕ 30/08/2023ರಂದು ವಿಜಯ ನಗರ ಜಿಲ್ಲಾಡಳಿತ, ಮಹಿಳಾ & ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಇಟ್ಟಿಗಿ ಗ್ರಾ ಪಂ ಸಹಯೋಗದವತಿಯಿಂದ ಗೃಹಲಕ್ಷ್ಮಿ ಯೋಜನೆ ಚಾಲನ ಕಾರ್ಯಕ್ರಮವನ್ನು ಇಟ್ಟಿಗಿ ಶ್ರೀ ಕಲ್ಲೇಶ್ವರ ಸಮುದಾಯ ಭವನದಲ್ಲಿ ಗ್ರಾ ಪಂ ಅಧ್ಯಕ್ಷರಾದ ಬಿ ಸಿದ್ದಪ್ಪ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು, ಮುಖ್ಯ ಅತಿಥಿಗಳಾಗಿ ಗ್ರಾ ಪಂ ನೋಡಲ್ ಅಧಿಕಾರಿಯಾದ ಶ್ರೀ ಚಂದ್ರಶೇಖರಯ್ಯ ಸರ್ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಗ್ರಾ ಪಂ ಸರ್ವ ಸದಸ್ಯರುಗಳು, ತಾ ಪಂ NRLM ಇಟ್ಟಿಗಿ ಕ್ಲಸ್ಟರ್ ಮೇಲ್ವಿಚಾರಕರಾದ ಶ್ರೀ ಬಸವರಾಜ್ ಸರ್ ರವರು, ಆರಕ್ಷಕ ಠಾಣಾಧಿಕಾರಿಗಳು,ಆರೋಗ್ಯಮತ್ತು ಸಿಡಿಪಿಒ ಇಲಾಖಾಧಿಕಾರಿಗಳು ಪಾಲ್ಗೊಂಡು ಇಟ್ಟಿಗಿ ಗೃಹಲಕ್ಷ್ಮಿ ಫಲಾನುಭವಿಗಳಹಾಗೂ NRLMಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು, ಗ್ರಾಮದಸಮಸ್ತ ನಾಗರೀಕರ, ಗ್ರಾ ಪಂ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆಯ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯ ಕ್ರಮವನ್ನು ಉದ್ಘಾಟಿಸಲಾಯಿತು. ನೋಡಲ್ ಅಧಿಕಾರಿಗಳಾದ ಚಂದ್ರ ಶೇಖರ್ ಸರ್ ರವರು ಮಾತನಾಡಿ ಸರ್ಕಾರದ ಆದೇಶದಂತೆ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿ ರಾಜ್ಯದ ಎಲ್ಲಾ ಕುಟುಂಬದಮಹಿಳಾ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000/-ರೂ ಗಳನ್ನು ಜಮೆ ಮಾಡುತ್ತ ಇದ್ದಾರೆ ಗೃಹಿಣಿಯರು ಇದರ ಸದುಪಯೋಗ ಪಡೆಯಲೆಂದರು…

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend