ಗುಂಡುಮುಣುಗು ಗ್ರಾಪಂ: ಪ್ರಮುಖ ಜನ ಪ್ರತಿನಿಧಿಯಿಂದಲೇ ಜನರ ನೀರಿಗೆ ಕನ್ನ.!?-ಬೆದರು ಬೊಂಬೆಗಳಾಗಿರುವ ಅಧಿಕಾರಿಗಳು.!?

Listen to this article

ಗುಂಡುಮುಣುಗು ಗ್ರಾಪಂ: ಪ್ರಮುಖ ಜನ ಪ್ರತಿನಿಧಿಯಿಂದಲೇ ಜನರ ನೀರಿಗೆ ಕನ್ನ.!?-ಬೆದರು ಬೊಂಬೆಗಳಾಗಿರುವ ಅಧಿಕಾರಿಗಳು.!?-ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಗುಂಡು ಮುಣುಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಸಿದ್ದಾಪುರ ವಡ್ರಟ್ಟಿ ಗ್ರ‍ಾಮದಲ್ಲಿ. ಜನ ಪ್ರತಿನಿಧಿಯಾಗಿರುವ ಅದೇ ಗ್ರ‍ಾಮದ ಪ್ರಮುಖ ವ್ಯಕ್ತಿಯೇ, ಜನರ ಕುಡಿಯೋ ನೀರಿಗೇ ಕನ್ನ ಹಾಕಿರುವುದಾಗಿ ದೂರು ಕೇಳಿ ಬಂದಿದೆ. ಸಿದ್ದಾಪುರ ವಡ್ರಟ್ಟಿ ಗ್ರಾಮವಾಸಿಗಳು ಹಾಗೂ ಗುಂಡುಮುಣುಗು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿರುವ, ಶ್ರೀಮತಿ ಭಾಗ್ಯಮ್ಮ ಗಂಡ ಅಂಜಿನಪ್ಪ ರವರು ತಮ್ಮ ಹೊಲಕ್ಕೆ. ಗ್ರಾಮ ಪಂಚಾಯ್ತಿ ಬೋರ್ ವೆಲ್ ನಿಂದ ಅಕ್ರಮವಾಗಿ, ಪೈಪ್ ಸಂಪರ್ಕವನ್ನು ಹೊಂದಿದ್ದಾರೆಂದು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ, ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ವಿವಿದ ಇಲಾಖಾಧಿಕಾರಿಗಳಿಗೆ. ಸಿದ್ದಾಪುರ ವಡ್ರಟ್ಟಿಯ ಕೆಲ ಗ್ರಾಮಸ್ಥರು ಹಾಗೂ ಕೆಲ ಗ್ರಾಪಂ ಸದಸ್ಯರು ದೂರು ನೀಡಿದ್ದಾರೆ.
ನೀರಿಗಾಗಿ ಆಹಾಕಾರ.!- ಸಿದ್ದಾಪುರ ವಡ್ರಟ್ಟಿ ಗ್ರಾಮದಲ್ಲಿ ಕುಡಿಯೋ ನೀರಿಗೆ, ಆಹಾಕಾರ ಸೃಷ್ಠಿಯಾಗುವ ದುಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕವಾಗಿ ಕುಡಿಯೋ ನೀರು ಪೂರೈಕೆಯಾಗುತ್ತಿಲ್ಲ, ಕರೆಂಟಿಲ್ಲ ಮೋಟಾರು ಸರಿಯಿಲ್ಲ, ಸಿಂಗಲ್ ಕರೆಂಟ್, ಪೈಪ್ ಹೊಡೆದಿದೆ ಎಂಬಿತ್ಯಾದಿ ಹಲವು ಕಾರಣ ಸಿಗುತ್ತವೆ. ಪರಿಣಾಮ ನೆರೆ ಹೊರೆಯ ಪಂಪ್ ಸೆಟ್ ಗಳನ್ನೇ ಕುಡಿಯೋ ನೀರಿಗಾಗಿ ಅವಲಂಬಿಸುವಂತಾಗಿದೆ, ಸರ್ಕಾರ ಕೊಳವೆ ಬಾವಿಗಳನ್ನು ಕೊರೆದು ನೀರು ಪೂರೈಕೆ ಮಾಡಿದಿಯಾದರೂ, ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ,
ಈ ಮುನ್ನ ತಾಪಂ ಅಧಿಕಾರಿಗಳಿಗೆ ದೂರು ನೀಡಲಾಗಿದೆಯಾದರೂ, ಏನೂ ಪ್ರಯೋಜನವಾಗಿಲ್ಲ ಕ್ರಮ ಜರುಗಿಸುವ ಧೈರ್ಯಮಾಡುತ್ತಿಲ್ಲ ಎಂದು ಹೋರಾಟಗಾರರು ತಿಳಿಸಿದ್ದಾರೆ. ಸಂಬಂಧಿಸಿದಂತೆ ಗ್ರಾಮದ ಕೆಲ ಮುಖಂಡರು, ಹಾಗೂ ಕೆಲ ಗ್ರಾಮ ಪಂಚಾಯ್ತಿ ಸದಸ್ಯರು ಹೇಳಿಕೆ ನೀಡಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಭಾಗ್ಯಮ್ಮರವರ ಪತಿಯಾದ ಅಂಜಿನಪ್ಪ, ತಮ್ಮ ಮಡದಿಯ ಭಾಗ್ಯಮ್ಮರವರ ಹೆಸರಲ್ಲಿ. ಅವರ ಪರವಾಗಿ ಅಂಜಿನಪ್ಪ ಅಧಿಕಾರದ ದರ್ಪವನ್ನು ಚಲಾಯಿಸುತ್ತಿದ್ದು, ಅಧ್ಯಕ್ಷರ ಅಧಿಕಾರ ದುರುಪಯೋಗವಾಗುತ್ತಿದೆ. ಅಷ್ಟು ಮಾತ್ರವಲ್ಲದೇ ಭಾಗ್ಯಮ್ಮರ ಪತಿ, ಸಿದ್ದಾಪುರ ವಡ್ರಟ್ಟಿಗೆ ಹೊಂದಿಕೊಂಡಿರುವ ತನ್ನ ಹೊಲಕ್ಕೆ. ಗ್ರಾಮದ ಜನತೆಗಾಗಿ ಕುಡಿಯೋ ನೀರು ಪೂರೈಸಲು ಕೊರೆದಿರುವ, ನಿರಂತರ ಜ್ಯೋತಿ ಸೌಕರ್ಯ ಹೊಂದಿರುವ ಸಾರ್ವಜನಿಕ ಕೊಳವೆ ಬಾವಿಯಿಂದ. ಅಕ್ರಮವಾಗಿ ನೀರು ಪೂರೈಕೆಗೆ ಪೈಪ್ ಅಳವಡಿಸಿಕೊಂಡು, ಸಾರ್ವಜನಿಕರ ನೀರನ್ನೇ ಕದಿಯುತ್ತಿದ್ದಾರೆಂದು ದೂರಿದ್ದಾರೆ. ಅಂಜಿನಪ್ಪ ತನ್ನ ಪತ್ನಿಯಾದ ಭಾಗ್ಯಮ್ಮಳ ಹೆಸರಲ್ಲಿ, ತಾನೇ ಅಧ್ಯಕ್ಷನೆಂದು ದರ್ಪತೋರುತ್ತಿದ್ದಾರೆ. ಗ್ರಾಮಸ್ಥರಲ್ಲಿ ತಾನೇ ಅಧ್ಯಕ್ಷನೆಂದು ಹೇಳಿಕೆೊಳ್ಳುತ್ತಿದ್ದಾರೆ, ಸಾರ್ವಜನಿಕರ ನೀರು ಕದಿಯೋ ಮೂಲಕ ಗ್ರಾಮಸ್ಥರಲ್ಲಿ, ಗ್ರಾಪಂ ಕಚೇರಿಯಲ್ಲಿ ಪ್ರಭಾವ ಬೀರೋ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂದು. ಹಾಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಗಂಗಮ್ಮ, ಭಾಗ್ಯಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ, ವೀರೇಶಪ್ಪ, ಕಾಂತಪ್ಪ, ಎನ್.ಹನುಮಂತಪ್ಪ, ತಮ್ಮಣ್ಣ, ವೀರೇಶ,ಸತೀಶ, ಹನುಮಂತಪ್ಪ, ಇನ್ನೂ ಹಲವು ಗ್ರಾಮಸ್ಥರಾದ ಆರೋಪಿಸಿದ್ದಾರೆ. ಹೆಂಗಸರ ಹೆಸರಲ್ಲಿ ಭಂಡ ಗಂಡಸರ ದರ್ಭಾರು, ಅಧಿಕಾರಿಗಳು- ಗೊಂಬೆಗಳು- ಸಂವಿಧಾನದ ಮೂಲ ಆಶಯದಂತೆ ಮಹಿಳೆಯರ ಸಬಲೀಕರಣಕ್ಕಾಗಿ, ಮಹಿಳಾ ಮೀಸಲಾತಿ ಜಾರಿಯಲ್ಲಿದೆಯಾದರೂ ಅದು ಪುರುಷಪ್ರಧಾನ ವ್ಯವಸ್ಥೆಯಲ್ಲಿ ನಗಣ್ಯವಾಗಿದೆ. ಹೆಣ್ಣುಮಕ್ಕಳ ಹೆಸರಲ್ಲಿ ದರ್ಪತೋರೊ ಬಂಡ ಬುದ್ದಿಗೇಡಿಗಳ, ಹಾಗೂ ಖಡು ಮೂರ್ಖರ ಅವಿವೇಕತನವೇ ಕಾರಣವಾಗಿದೆ. ಅಂತಹ ಭ್ರಷ್ಟರ ತಾಳಕ್ಕೆ ತಕ್ಕಂತೆ ಕುಣಿಯುವ, ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ಸಂಬಳ ತಿನ್ನೋ ಅಧಿಕಾರಿಗಳಿಗೆ ಎನನ್ನಬೇಕು.!?.
ಕೂಡ್ಲಿಗಿ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಮಹಿಳಾ ಪರ ನಿಲುವು ಉಳ್ಳವರು. ಮಹಿಳಾ ಮಾತೆಯರನ್ನು ವಿಶೇಷ ಗೌರವದಿಂದ ಕಾಣುವವರು, ಕೆಲವರೆ ಕೆಲ ನಿಯಮ ಪಾಲಿಸದ ಜನಪ್ರತಿನಿಧಿಗಳ ನಡೆತೆಗಳಿಂದಾಗಿ. ಕೆಲ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಲಾಗುತ್ತಿಲ್ಲ ಎಂಬ ಕೂಗು ಇದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಇಲಾಖೆಗಳ ಯೋಜನೆಗಳ ಜಾರಿ ಸಂದರ್ಭದಲ್ಲಿ. ಸರ್ಕಾರಿ ಸಭೆ ಸಮಾರಂಭಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ. ನಿಯಮಾನುಸಾರ ಕೇವಲ ಜನಪ್ರತಿನಿಧಿಗಳಿೆಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಮಾತ್ರ ವೇದಿಕೆಯಲ್ಲಿ ಉಪಸ್ಥಿತಿಗೆ ಅವಕಾಶ ಮಾಡಿಕೊಡಬೇಕಿದೆ. ಮಹಿಳಾ ಜನ ಪ್ರತಿನಿಧಿಗಳ ಬದಲು ಅವರ ಪರ ಪುರುಷರಿಗೆ ಆಧ್ಯತೆ ನೀಡದೆೆ, ಶಿಷ್ಟಾಚಾರನ್ನು ಖಡ್ಡಾಯವಾಗಿ ಪಾಲಿಸಲು ಕ್ರಮ ಜರುಗಿಸಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮಪಂಚಾಯ್ತಿ ಕಚೇರಿಗಳಿಂದ ಗ್ರಾಪಂ ವಲಯದಿಂದ, ಎಲ್ಲಾ ಹಂತಗಳಲ್ಲಿ ನಿಯಮ ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ. ಜಾರಿಯಾಗಬೇಕಿದೆ
ಇಲ್ಲದಿದ್ದಲ್ಲಿ ವೇದಿಕೆಯ ಘನತೆಗೆ ಧಕ್ಕೆಯಾಗಲಿದೆ, ಮತ್ತು ಮಹಿಳಾ ಮೀಸಲಾತಿ ಜಾರಿ ಅನುಷ್ಠಾನ ಅಸಾಧ್ಯ ಎಂದು ಪ್ರಜ್ಞಾವಂತರು ಶಾಸಕರಲ್ಲಿ ಕೋರಿದ್ದಾರೆ. ಅಧಿಕಾರಿಗಳಾ_ಬೆದರು ಗೊಂಬೆಗಳಾ.!?- ಗುಂಡುಮುಣುಗು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೇವಲ ಶೀಲು ಸೈನಾಕುವ ಬೆದರು ಗೊಂಬೆನಾ.!?, ಇಂತಹ ಬಂಢರ ಅಕ್ರಮಕ್ಕೆ ಕುಮ್ಮಕ್ಕು ಕೊಟ್ಟಿದ್ದಾದರೂ ಏಕೆ.! ಎಂಬ ಪ್ರೆಶ್ನೆ ಎಂಥವರಲ್ಲಿಯೂ ಮೂಡದೇ ಇರದು. ಅಧಿಕಾರಿಗಳೇ ಬಂಢ ಭ್ರಷ್ಟ ಜನ ಪ್ರತಿನಿಧಿಗಳೊಂದಿಗೆ ಅಕ್ರಮಗಳಿಗೆ ಕೈಜೋಡಿಸಿದಾಗ, ಹಗಲು ದರೋಡೆಯಾಗದೇ ಇರುತ್ತದೆಯೇ..!?. ಇಂತಹ ಭ್ರಷ್ಟ ಜನಪ್ರತಿಗಳೊಂದಿಗೆ ಭ್ರಷ್ಟ ಅಧಿಕಾರಿಗಳಿದ್ದರೆ, ಗ್ರಾಮ ಪಂಚಾಯ್ತಿಯನ್ನೇ ಮಾರಿಕೊಂಡಲ್ಲಿ ಅಚ್ಚರಿಪಡೋ ಹಾಗಿಲ್ಲ. ಜಿಲ್ಲಾಧಿಕಾರಿಗಳು- ಭಂಡರಿಗೆ ಬುದ್ದಿಕಲಿಸಬೇಕಿದೆ-
ಕೆಲ ಗ್ರಾಮಸ್ಥರು ಹಾಗೂ ಕೆಲ ಗ್ರಾಮ ಪಂಚಾಯ್ತಿ ಯರು, ನೀಡಿರುವ ದೂರನ್ನು ಅವಲೋಕಿಸಿದರೆ. ಗುಂಡುಮುಣುಗು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮರವರ, ಅಧಿಕಾರವನ್ನು ಅವರ ಪರವಾಗಿ ಅವರ ಪತಿ ಅಂಜಿನಪ್ಪರವರೇ. ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು, ದೂರುಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ಸಾರ್ವಜನಿಕರಿಗೆ ಪೂರೈಕೆಯಾಗೋ ಸಾರ್ವಜನಿಕರ ನೀರನ್ನು, ಅಕ್ರಮವಾಗಿ ತನ್ನ ಹೊಲಕ್ಕೆ ನೀರು ಪೂರೈಕೆ ಮಾಡಿಕೊಂಡು. ನೀರನ್ನು ಕದಿಯೋ ಮೂಲಕ ಸಾರ್ವಜನಿಕರ ಕುಡಿಯೋ ನೀರನ್ನು, ಅಧಿಕಾರದ ದರ್ಪದಿಂದ ಅಕ್ರಮವಾಗಿ ಪಡೆಯೋ ಮೂಲಕ ಲೋಪ ವ್ಯಸಗಿದ್ದಾರೆಂದು ತೋರಿಬಂದಿದೆ. ಸಂಬಂಧಿಸಿದಂತೆ ಗ್ರಾಮಪಂಚಾಯ್ತಿ ಅಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮೂಕ ಪ್ರೇಕ್ಷಕರಂತೆ ವರ್ತಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೆಗೀಡು ಮಾಡುವಂತಿದೆ. ಇವರು ಸರ್ಕಾರ ಕೊಡೋ ಸಂಬಳದಿಂದ ಬದುಕುತ್ತಾರೋ.!?, ಅಥವಾ ಬರೀ ಗಿಂಬಳದಿಂದ ಬದುಕುತ್ತಾರೋ ಅವರೇ ಹೇಳಬೇಕಿದೆ. ಹಾಡು ಹಗಲೇ ನೀರನ್ನು ಕದಿಯುತ್ತಿದ್ದರೂ ಕೂಡ, ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆಂದರೆ.!?. ಅಧಿಕಾರಿಗಳನ್ನು ಅದೆಂತಹ ಪಾಶ ಅವರನ್ನು ಕಟ್ಟಿ ಹಾಕಿತ್ತೋ ಏನೋ.!? ಅಕ್ರಮ ತಡೆಯೋ ದೈರ್ಯ ಕಳೆದುಕೊಂಡಿದ್ದಾದರೂ ಹೇಗೆ.!?. ಅದಕ್ಕೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಸ್ಥಳೀಯ ಗ್ರಾಪಂ ಅಧಿಕಾರಿ ಹಾಗೂ ತಾಪಂ ಅಧಿಕಾರಿಗಳಿಂದ ಉತ್ತರ ಪಡೆಯಬೇಕಿದೆ. ಇಂತಹ ಭ್ರಷ್ಟ ಹೊಣೆಗೇಡಿ ಅಧಿಕಾರಿಗಳ ವಿರುದ್ಧ, ಕಾನೂನು ರೀತ್ಯ ಶಿಸ್ಥು ಕ್ರಮ ಜರುಗಿಸಬೇಕಿದೆ. ತನ್ನ ಪತ್ನಿಯ ಹೆಸರಲ್ಲಿ ತಾನು ಅಧಿಕಾರ ದುರುಪಯೋಗ ಪಡಿಸಿಕೊಂಡು, ಸಾರ್ವಜನಿಕರ ನೀರಿಗೆ ಕನ್ನಹಾಕಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಸಾರ್ವಜನಿಕರ ಕುಡಿಯೋ ನೀರನ್ನು ಕದಿಯಲು ನಿರ್ಮಿಸಿರುವ, ಅಕ್ರಮ ಪೈಪ್ ಸಂಪರ್ಕ ಕೂಡಲೇ ಕಡಿತ ಗೊಳಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಹೋರಾಟಗಾರರು ಈ ಮೂಲಕ ಕೋರಿದ್ದಾರೆ. ಶಿಸ್ಥು ಕ್ರಮ ಎಚ್ಚರಿಕೆ ಘಂಟೆಯಾಗಲಿ- ಈ ಪ್ರಕರಣವನ್ನು ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಂಭಿರವಾಗಿ ಪರಿಗಣಿಸಬೇಕಿದೆ. ಅದು ಹೆಂಗಸರ ಅಧಿಕಾರದ ಹೆಸರಲ್ಲಿ ತಾವು ದರ್ಪತೋರೂ ಭಂಡ ಪುರುಷರಿಗೆ, ಬಿದ್ದಿಕಲಿಸುವಂತಹ ರೀತಿಯಲ್ಲಿ ಅಗತ್ಯ ಶಿಸ್ಥುಕ್ರಮವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಮ ಜರುಗಿಸಬೇಕಿದೆ. ಅಂದಾಗ ಮಾತ್ರ ಇಂತಹ ಅಕ್ರಮ ಹಾಗೂ ಅಧಿಕಾರ ದುರುಪಯೋಗ ಪ್ರಕರಣಗಳು ಜರುಗದಿರಲು ಸಾಧ್ಯ, ಅವರು ಭ್ರಷ್ಟ ಹೊಣೆಗೇಡಿ ಅಧಿಕಾರಿಗಳ ವಿರುದ್ಧ ಕೈಗೊಳ್ಳುವ ಶಿಸ್ಥುಕ್ರಮ ಎಲ್ಲರಿಗೂ ಪಾಠವಾಗಬೇಕಿದೆ. ಭಂಡ ಅಕ್ರಮ ಕೋರುತನದವರಿಗೆ ಈ ಮೂಲಕ ಬುದ್ದಿಕಲಿಸಬೇಕಿದೆ, ಹಾಗೂ ಭಂಡುಕೋರರಿಗೆ ಎಚ್ಚರಿಕೆ ಘಂಟೆಯಾಗಬೇಕಿದೆ….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend