ಕೂಡ್ಲಿಗಿ: ಶಾಸಕರ ನೇತೃತ್ವದಲ್ಲಿ “ಗೃಹ ಲಕ್ಷ್ಮೀ” ಅನುಷ್ಠಾನ…!!”

Listen to this article

ಕೂಡ್ಲಿಗಿ: ಶಾಸಕರ ನೇತೃತ್ವದಲ್ಲಿ “ಗೃಹ ಲಕ್ಷ್ಮೀ” ಅನುಷ್ಠಾನ- ವಿಜಯ ನಗರ ಜಿಲ್ಲೆ ಕೂಡ್ಲಿಗಿ: ಆ30ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ, ಹಾಗೂ ಪಟ್ಟಣ ಪಂಚಾಯ್ತಿ ಸಹಯೋಗದಲ್ಲಿ.”ಗೃಹ ಲಕ್ಷ್ಮಿ” ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು, ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ಉದ್ಘಾಟಿಸಿ  ಮಾತನಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ಕಾಂಗ್ರೆಸ್ ಪಕ್ಷ ಪ್ರಮುಖ ಪಾತ್ರವಹಿಸಿತ್ತು. ರೈತರು, ಕಾರ್ಮಿಕರು ಮಹಿಳೆಯರು ಅಲ್ಪಸಂಖ್ಯಾತರು, ದೀನ ದಲಿತರು ಹಾಗೂ ಶೋಷಿತರ ಪರವಾಗಿ ಕಾಂಗ್ರೆಸ್ ಪಕ್ಷ ಸದಾ ಶ್ರಮಿಸುತ್ತಿದೆ. ಜನಪರ ಕಾಳಜಿಯ ಯೋಜನೆಗಳಾದ
ಗ್ಯಾರಂಟಿ ಯೋಜನೆಗಳಲ್ಲಿ, “ಗೃಹ ಲಕ್ಷ್ಮಿ”ಯೋಜನೆ ಅನುಷ್ಠಾನದಿಂದ. ಪ್ರತಿ ಕುಟುಂಬದ ಯಜಮಾನಿಗೆ, ಪ್ರತಿ ತಿಂಗಳು ಎರಡು ಸಾವಿರ₹ ನಗದು ಹಣ ನೀಡುವುದರಿಂದಾಗಿ. ಕುಟುಂಬವನ್ನು ಆರ್ಥಿಕವಾಗಿ ನಿರ್ವಹಣೆ ಮಾಡಲು, ಸ್ವಾವಲಂಭಿತನದ ಜೀವನಕ್ಕೆ ಅನುಕೂಲವಾಗಲಿದೆ. ತಾಲೂಕಿನ ಶೇ80 ರಷ್ಟು ಮಹಿಳೆಯರು, “ಗೃಹ ಲಕ್ಷ್ಮೀ” ನೊಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಅರ್ಜಿ ಸಲ್ಲಿಸಲು ಅನಾನುಕೂಲಗಳಾಗಿದ್ದು, ತಾಂತ್ರಿಕವಾದ ಸಮಸ್ಯೆಗಳಿವೆ  ಎಂದರು. ವಿವಿದ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಪಟ್ಟಣ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಜನ ಪ್ರತಿನಿಧಿಗಳು ಹಾಗೂ ಗಣ್ಯ ಮಾನ್ಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು.ಅಸಂಖ್ಯಾತ “ಗೃಹ ಲಕ್ಷ್ಮಿ” ಫಲಾನುಭವಿಗಳು ಪಾಲ್ಗೊಂಡಿದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend