ಹಿರಿಯನಾಗರಿಕರಿಗೆ ಆರೋಗ್ಯ ತಪಾಸಣೆ…!!!

Listen to this article

ಹಿರಿಯನಾಗರಿಕರಿಗೆ ಆರೋಗ್ಯ ತಪಾಸಣೆ
ಕಾನಹೊಸಹಳ್ಳಿ:- ತಾಲೂಕಿನ ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರಿಕ ದಿನಾಚರಣೆಯ ಪ್ರಯುಕ್ತ ಹಿರಿಯ ನಾಗರಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾಕ್ಟರ್ ರಾಹುಲ್ ಮಾತನಾಡಿ ಹಿರಿಯ ನಾಗರಿಕರಿಗೆ ವಯಸ್ಸಾದವರಿಗೆ ಕೆಲವು ಕಾರಣಗಳಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು, ಹೀಗಾಗಿ ಮನೆಯಲ್ಲಿರುವವರು ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು ಅಲ್ಲದೆ ಅವರ ಮನುಷ್ಯನಿಗೆ ಯಾವುದೇ ತರಹದ ಘಾಸಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
**ಆರೋಗ್ಯ ಕಾಳಜಿ ಇರಲಿ*:– ರೋಗಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಹೆಚ್ಚು ಜನ ದಟ್ಟನೆ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರತಿಯೊಬ್ಬರು ಎಚ್ಚರವಹಿಸುವುದು ಒಳ್ಳೆಯದು ಎಂದು ಹೇಳಿದರು. ಹಿರಿಯರಿಗೆ n.c. D ಸ್ಕ್ರೀನಿಂಗ್ ಮಾಡಲಾಯಿತು, 70 ಜನ ಹಿರಿಯರಿಗೆ ರಕ್ತದೊತ್ತಡ ಸಕ್ಕರೆ ಕಾಯಿಲೆ ಬಗ್ಗೆ,ತಪಾಸಣೆ ಮಾಡಿದರು. ನಂತರ ಡಾಕ್ಟರ್ ರಾಹುಲ್ ಪ್ರತಾಪ್ ಹಿರಿಯರ ವಯಸ್ಸಿಗನುಗುಣವಾಗಿ ಆರೋಗ್ಯದ ಬಗ್ಗೆ ಹೇಗೆ ನಿಗಾವಹಿಸಬೇಕು ಎಂದು ಸೂಕ್ತ ಸಲಹೆ ನೀಡಿದರು. ಅನಂತನ ಪ್ರವೀಣ್ ನಿರ್ವಹಿಸಿದರು
ಈ ಸಂದರ್ಭದಲ್ಲಿ ಎನ್. ಸಿ.ಡಿ ಸಿಬ್ಬಂದಿಗಳಾದ ಕರಿಯಣ್ಣ
ಆಪ್ತಸಮಾಲೋಚಕ ರವಿಚಂದ್ರ ಮಂಜುನಾಥ್, ಅಂಜಿನಪ್ಪ. ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಇತರರಿದ್ದರು….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend