ಸಮಸ್ಯೆ,ಸವಾಲು,ಅವಮಾನ ಅನುಭವಿಸದಿದ್ದರೆ ಗುರಿ ಮುಟ್ಟಲು ಸಾಧ್ಯ‌ವಿಲ್ಲ-ಶಶಿಧರ ಕುರೇರ…!!!

Listen to this article

ಸಮಸ್ಯೆ,ಸವಾಲು,ಅವಮಾನ ಅನುಭವಿಸದಿದ್ದರೆ ಗುರಿ ಮುಟ್ಟಲು ಸಾಧ್ಯ‌ವಿಲ್ಲ-ಶಶಿಧರ ಕುರೇರ

ಸಿಂಧನೂರು :ಅ. 22. ಮನುಷ್ಯ ಸಮಸ್ಯೆಗಳನ್ನು , ಸವಾಲುಗಳನ್ನು,ಅವಮಾನಗಳನ್ನು ಅನುಭವಿಸ ದಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲವೆಂದು ಶಶಿಧರ ಕುರೇರ, ಐ.ಎ.ಎಸ್ ಕಾರ್ಯನಿರ್ವಾಹಕ ಅಧಿಕಾರಿ ಗಳು ಜಿಲ್ಲಾ ಪಂಚಾಯತ್ ರಾಯಚೂರು ರವರು ತಿಳಿಸಿದರು.
ನಗರದ ಕುಷ್ಟಗಿ ರಸ್ತೆಯ ಕನಕದಾಸ ಕಲ್ಯಾಣ ಮಂಟಪದಲ್ಲಿ ಸಂಕಲ್ಪ ಉಚಿತ ಗ್ರಂಥಾಲಯ, ಐ.ಎ.ಎಸ್. ಕೆ.ಎ.ಎಸ್. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಗಳ ಮುಂಬೆಳಕಲ್ಲಿ ಗುರಿ ಮುಟ್ಟೋಣ. ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ಹಾಗೂ ಗ್ರಂಥಾಲಯ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಯಲ್ಲಿ ಮುಖ್ಯವಾಗಿ ಆತ್ಮವಿಶ್ವಾಸವಿರಬೇಕು.ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಗಾರ ಹಮ್ಮಿಕೊಳ್ಳ ಲಾಗಿದೆ. ಯಾವುದೇ ವಿಷಯಗಳ ಕಲಿಕೆ, ಮನನ, ಸ್ಮರಣೆ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಸ್ವಇಚ್ಛೆಯಿಂದ ಅಧ್ಯಯನದಲ್ಲಿ ತೊಡಗುವ ಜತೆಗೇ ಆತ್ಮವಿಶ್ವಾಸ ಹೊಂದಿದಲ್ಲಿ ಉತ್ತಮ ಸಾಧನೆಗೆ ಅವಕಾಶವಾಗುತ್ತದೆ ಎಂದು ಸ್ಪರ್ದಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಮ್ಮ ಬಾಲ್ಯದ ನವೋದಯ ಶಾಲೆಯಲ್ಲಿನ ಅನುಭವಗಳನ್ನು ವಿದ್ಯಾರ್ಥಿ ಜೀವನ, ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮನ್ನು ಯಾವ ರೀತಿ ತೊಡಗಿಸಿಕೊಂಡರು, ಪರೀಕ್ಷೆಗಳಿಗೆ ಹೇಗೆ ತಯಾರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶ

ನ ನೀಡಿದರು.ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುವ ರೀತಿಯಲ್ಲಿ ಕಾರ್ಯ ನಿರ್ವಹಿ ಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ದಿವ್ಯಾ ಸಾನಿಧ್ಯ ಮಾದಯ್ಯ ಗುರುವಿನ, ಅಮೋಘ ರೇವಣಸಿದ್ದೇಶ್ವರ ಮಠ ತುರುವಿಹಾಳ, ಅಧ್ಯಕ್ಷತೆಯನ್ನು ಕೆ.ವಿರುಪಾಕ್ಷಪ್ಪ ಮಾಜಿ ಸಂಸದರು ವಹಿಸಿದ್ದರು. ಚಂದ್ರಶೇಖರ ಕೆ.ಜಿ.ಎಸ್.ಎಸ್, ಸರ್ಕಾರದ ಅಪರ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ ಬೆಂಗಳೂರು. ಡಾ. ಎಚ್.ಜಿ.ಪಾಟೀಲ್ ವಿಶ್ರಾಂತ ಸದಸ್ಯರು ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ರವರು ಡಾ.ಬಿ.ಆರ್ ಅಂಬೇಡ್ಕರ್,ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಗ್ರಂಥಾಲಯಕ್ಕೆ ಪ್ರೇರಣೆಗೆ ಕಾರಣೀಭೂತ, ಗುರಿ, ಮತ್ತು ಉದ್ದೇಶದ ಕುರಿತು ಚಿದಾನಂದಯ್ಯ ಗುರುವಿನ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ ಎಂ. ದೊಡ್ಡ ಬಸವರಾಜ ಅಡಳಿತಾಧಿಕಾರಿಗಳು ಕನಕದಾಸ ಶಿಕ್ಷಣ ಸಂಸ್ಥೆ ರವರು ಸ್ವಾಗತ ಮಾಡಿದರು. ಸಂಪನ್ಮೂಲ ಅಧಿಕಾರಿಗಳಾಗಿ (ವಿಷಯ : ಸಂಕಲ್ಪ ದಿಂದ ಯಶಸ್ಸು)ಅರುಣ್ ಕುಮಾರ ಹೆಚ್ ದೇಸಾಯಿ ಕೆ.ಎ.ಎಸ್. ತಹಸಿಲ್ದಾರರು, ಲಕ್ಷ್ಮಿದೇವಿ ಕೆ.ಎ.ಎಸ್.ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಮಂಜುನಾಥ ಗುಂಡೂರು ಕೆ.ಎ. ಎಸ್. ನಗರಸಭೆ ಪೌರಾಯುಕ್ತರು ಮುಖ್ಯ ಅತಿಥಿಗಳಾಗಿ ಅಶಪ್ಪ ಕೆ.ಎ.ಎಸ್. ಯೋಜನಾಧಿ ಕಾರಿಗಳು,ರಾಯಚೂರು, ಶ್ರೀಮತಿ ಕವಿತಾ ಕೆ.ಎ. ಎಸ್.ತಹಸೀಲ್ದಾರ ಮಸ್ಕಿ,ಮಂಜುನಾಥ ಸಿರಿವಾರ ಕೆ.ಎ.ಎಸ್ ತಹಸೀಲ್ದಾರರು, ಬೆಂಗಳೂರು. ಮಂಜುನಾಥ ಬೋಗಾವತಿ, ಕೆ.ಎ.ಎಸ್. ತಹಸೀಲ್ದಾರರು, ಬೆಂಗಳೂರು.ಶ್ರೀಮತಿ ಶೃತಿ ಕೆ.ಎ.ಎಸ್.ಭೂಸ್ವಾಧಿನಾಧಿಕಾರಿಗಳು, ಸಿಂಧನೂರು,ಶರಣಪ್ಪ ವಟಗಲ್‌ ಕೆ.ಇ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂಧನೂರು,ಮಾಳಿಂಗರಾಯ ವಾಣಿಜ್ಯ ತೆರಿಗೆ ಅಧಿಕಾರಿಗಳು,ಬೀರೇಂದ್ರ ಎ.ಆರ್. ಸಿ. ಎಸ್,ಬಸಲಿಂಗಪ್ಪ ಕೆ. ಇ. ಎಸ್. ಸಾಬಣ್ಣ ವಗ್ಗರ ಕೆ.ಇ.ಎಸ್.ಸತ್ಯಮ್ಮ ಕೆ. ಎ. ಎಸ್. ತಹಸೀಲ್ದಾರರು
ಇನ್ನಿತರರಿದ್ದರು. ಕಾರ್ಯಕ್ರಮ ನಿರೂಪಣೆ : ಶರಣಪ್ಪ ಉಪನ್ಯಾಸಕರು ಮಾಡಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend