ಕುಲುಮೆಹಟ್ಟಿಯ ಸಹಿಪ್ರಾ ಶಾಲೆಯಲ್ಲಿ ಎಸ್.ಡಿ.ಎಂ.ಸಿ.ಹಾಗೂ ಪೋಷಕರ ಸಭೆ…!!!

Listen to this article

ಎಸ್.ಡಿ.ಎಂ.ಸಿ.ಹಾಗೂ ಪೋಷಕರ ಸಭೆ..

ವಿಜಯನಗರ ಜಿಲ್ಲೆ ಕಾನಹೊಸಹಳ್ಳಿ: ಕೊಲುಮೆ ಹಟ್ಟಿ ಸಹಿಪ್ರಾ ಶಾಲೆ ಯಲ್ಲಿ ಎಸ್ಡಿಎಂಸಿ ಸಭೆ ಹಾಗೂ ಪೋಷಕರ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲಿ ಮಾಜಿ ಎಸ್ಡಿಎಂಸಿ ಅಧ್ಯಕ್ಷ ರಾದಶ್ರೀ ಮಲ್ಲಿಕಾರ್ಜುನ್ ರವರು ಭಾಗವಹಿಸಿಕಾರ್ಯ ಕ್ರಮದ ಉದ್ಘಾಟನೆಯನ್ನುನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ಜಿಲಾನ್ ಬಾಷಾ ರವರು ಅಧ್ಯಕ್ಷತೆ ವಹಿಸಿ ಮಕ್ಕಳ ಶಿಕ್ಷಣದಲ್ಲಿಶಿಕ್ಷಕ ಹಾಗೂ ಪಾಲಕರ ಪಾತ್ರ ಹೇಗಿರಬೇಕು ಎಂದುತಿಳಿಸಿದರು, ಹಾಗೂ ಕೊರೊನಾ ಹರಡುವ ಮುಂಜಾಗ್ರತ ಬಗ್ಗೆ ಕ್ರಮವಹಿಸುವಂತೆ ಶಿಕ್ಷಕರಿಗೆ ಈ ಸಂದರ್ಭದಲ್ಲಿ ತಿಳಿಸಿದರು.ನಂತರ ಶಾಲೆಯಲ್ಲಿ ಪಾಲಕರ ಕ್ರೀಡಾಕೂಟ ಏರ್ಪಡಿಸಲಾಗಿತ್ತು.ಈ ಕ್ರೀಡಾಕೂಟದಲ್ಲಿ ಮೊದಲನೇ ಬಹುಮಾನ,ಶ್ರೀಮತಿ ಅಶ್ವಿನಿ,ಎರಡನೇ ಬಹುಮಾನ ಶ್ರೀ ಹೇಮಾ, ಮೂರನೆಯಬಹುಮಾನ ಮಾತು ವಿಕಲತೆ ಹೊಂದಿರುವಶ್ರೀಮತಿ ಹೊನ್ನೂರಮ್ಮ ಪಡೆದರು,ಮಾತು ವಿಕಲತೆ ಹೊಂದಿರುವ ಶ್ರೀಮತಿ ಹೊನ್ನೂರಮ್ಮ ನವರು ಬಹುಮಾನ ಪಡೆದಿರುವುದು ವಿಶೇಷವಾಗಿತ್ತು.ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ,ಶ್ರೀಮತಿ,ಮಂಗಳಗೌರಿ ಶಿಕ್ಷಕರು ಮಾಡಿದರು, ಈ ಕಾರ್ಯಕ್ರಮ ಕುರಿತು ಸ್ವಾಗತ ಭಾಷಣವನ್ನು ಶಿಕ್ಷಕಿ.ಹೇಮಾವತಿ.ಅವರು ಮಾಡಿದರು. ಕಾರ್ಯಕ್ರಮದ ಉದ್ಘಾಟನೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ್ ನೆರವೇರಿಸಿದರು.
ಕ್ರೀಡಾಕೂಟದಲ್ಲಿ ಗೆದ್ದವರಿಗೆ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ನಾಗಭೂಷಣ ರವರು ಬಹುಮಾನ ವಿತರಣೆ ಮಾಡಿದರು.ಕಾರ್ಯಕ್ರಮದ ವಂದನಾರ್ಪಣೆಯನ್ನು ಸರೋಜಮ್ಮ ಶಿಕ್ಷಕಿ ಅವರು ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು,ಸಹಶಿಕ್ಷಕರು,ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು,ಶಾಲಾ ಸಿಬ್ಬಂದಿ ವರ್ಗ. ಮಕ್ಕಳ ಪೋಷಕರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend