ವೀಕೆಂಡ್ ಕರ್ಫ್ಯೂ ಜಾರಿಯಿಂದ ಲಿಂಗಸ್ಗೂರ ಪಟ್ಟಣವು ಬಹುತೇಕ ಸ್ತಬ್ಧ…!!!

Listen to this article

ಸಾಂಕ್ರಮಿಕ ರೋಗವಾದ ಕೋವಿಡ್ ಉಲ್ಬಣದಿಂದ ಸರಕಾರವು ವೀಕೆಂಡ್ ಕರ್ಫ್ಯೂ ಜಾರಿಯಿಂದ
ಲಿಂಗಸ್ಗೂರ ಪಟ್ಟಣವು ಬಹುತೇಕ ಸ್ತಬ್ಧವಾಗಿದೆ .
ಶನಿವಾರ ಲಿಂಗಸುಗೂರಿನ ವ್ಯಾಪಾರದ ದಿನವಾಗಿದ್ದು ಬಹುತೇಕ ಹಳ್ಳಿಯಿಂದ ಸಂತೆಗೆ ಬರುವ ಜನರಿಂದ ತುಂಬಿರುತ್ತಿದ್ದ ನಗರವು
ಕರೋನಾ ವೀಕೆಂಡ್ ಕರ್ಫ್ಯೂ ಹೊಡೆತದಿಂದ ಸಂಪೂರ್ಣ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿ ಬಿಕೋ ಎನ್ನುತ್ತಿದೆ .
ಈ ಸಾರಿಯ ಕರೋನದ ಭಯವು ಜನರಲ್ಲಿ ಹೆಚ್ಚಾಗಿ ಆವರಿಸಿದ್ದು
ಜನರು ಸ್ವಯಂಕೃತವಾಗಿ ಹೊರಗಡೆ ಓಡಾಟ ಮಾಡುವುದು ಕಡಿಮೆ ಮಾಡಿದ್ದಾರೆ . ಅವಶ್ಯಕತೆ ಇರುವ ಕೆಲವು ವ್ಯಾಪಾರಗಳಿಗೆ ಪುರಸಭೆಯು ಅನುಮತಿ ನೀಡಿದ್ದರು ಜನರು ಖರೀದಿ ಮಾಡಲು ಆಸಕ್ತಿ ತೋರಿಸುತ್ತಿಲ್ಲ .
ಲಿಂಗಸ್ಗೂರು ನಗರದ ಆಸ್ಪತ್ರೆ ಮತ್ತು ಬ್ಯಾಂಕುಗಳ ವಹಿವಾಟುಗಳಿಗೆ ಬರುವ ಜನರಿಗೆ ಹೋಟಲ್ ಪಾರ್ಸೆಲ್ ಸರ್ವಿಸ್ ತುಂಬಾ ಸಹಕಾರಿಯಾಗಿದೆ . ತರಕಾರಿ ಮತ್ತು ಹಣ್ಣುಗಳ ವ್ಯಾಪಾರ ಅಷ್ಟಕಷ್ಟೇ ನಡೆಯುತ್ತಿವೆ
ಒಟ್ಟಾರೆಯಾಗಿ ಜನರಿಗೆ ಸಾಂಕ್ರಮಿಕ ರೋಗದ ಬಗ್ಗೆ ಜಾಗೃತಿ ಮೂಡಿದ್ದು ಅಂತರ ಮತ್ತು ಮಾಸ್ಕ ಬಳಕೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ .
ಪೊಲೀಸ್ ಇಲಾಖೆ. ಪುರಸಭೆ ಮತ್ತು ಆರೋಗ್ಯ ಇಲಾಖೆಯವರು ಇದೇ ರೀತಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಲಿ. ಜನರು ಸಹಕಾರ ನೀಡಿದಲ್ಲಿ ಕೋವಿಡ್ ಮತ್ತು ಒಮಿಕ್ರಾನ್ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗಬಹುದು.

ವರದಿ :ಬಸವರಾಜ ಹಿರೇಮಠ ಲಿಂಗಸಗೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend